ಭಾರತದಲ್ಲಿ ಚಾಟ್ ಜಿಪಿಟಿ ಬಳಕೆಗೆ ಪರದಾಡಿದ ಜನರು

ನವದೆಹಲಿ:ಓಪನ್ ಎಐನ ಚಾಟ್‌ಬಾಟ್ ‘ಚಾಟ್‌ಜಿಪಿಟಿ’ (ChatGPT) ಜಾಗತಿಕವಾಗಿ ತಾಂತ್ರಿಕ ತೊಂದರೆ ಎದುರಿಸಿದ್ದು, ಬಳಕೆದಾರರು ವೆಬ್‌ಸೈಟ್ ಮತ್ತು ಅಪ್ಲಿಕೇಷನ್‌ಗಳಲ್ಲಿ ಲಾಗ್‌ಇನ್ ಆಗಲಾಗದೆ ಪರದಾಡಿದರು.

ಭಾರತದಲ್ಲಿ ಮಾತ್ರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ 800 ದೂರುಗಳು ದಾಖಲಾಗಿವೆ. ಶೇ 88ರಷ್ಟು ಜನರು ಚಾಟ್‌ಪಾಟ್ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಎಂದು ದೂರಿದ್ದಾರೆ.
ಚಾಟ್‌ಜಿಪಿಟಿ ಸ್ಥಗಿತಗೊಂಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಮೀಮ್ಸ್‌ಗಳು ಹರಿದಾಡಿವೆ.
ಚಾಟ್‌ಜಿಪಿಟಿ ಕಾರ್ಯ ಸ್ಥಗಿತಗೊಂಡಿದ್ದನ್ನು ಓಪನ್‌ಎಐ ಒಪ್ಪಿಕೊಂಡಿದೆ. ಚಾಟ್‌ಜಿಪಿಟಿ ಮತ್ತು ಅದರ ವಿಡಿಯೊ ಪ್ಲಾಟ್‌ಫಾರ್ಮ್ ಸೋರಾ ಎರಡರ ಮೇಲೂ ಪರಿಣಾಮ ಬೀರಿದೆ ಎಂದು ದೃಢಪಡಿಸಿದೆ.