Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ: ತಿಪಟೂರು APMC ಯಲ್ಲಿ ಕೊಬ್ಬರಿ ಬೆಲೆ ಹೊಸ ದಾಖಲೆ!

Spread the love

Organic Dry coconut – GreenDNA® India

ಚಿಕ್ಕಬಳ್ಳಾಪುರ:ತೆಂಗಿನಕಾಯಿ ಮತ್ತು ಕೊಬ್ಬರಿಗೆ ಪ್ರಸಿದ್ದಿಯಾಗಿರುವ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ಬೆಲೆಯು ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ಕ್ವಿಂಟಲ್‌ಗೆ 22,000 ರೂ. ಗಡಿ ದಾಟಿದೆ. ಈ ಬೆಲೆ ಏರಿಕೆಯಿಂದಾಗಿ ರೈತರ ಮುಖದಲ್ಲಿ ಸಂತಸ ಮನೆಮಾಡಿದೆ.

ಸೋಮವಾರ (ಜೂನ್ 9) ಉಂಡೆ ಕೊಬ್ಬರಿಗೆ ಕ್ವಿಂಟಲ್‌ಗೆ ಗರಿಷ್ಠ 22,356 ರೂ.

ನಿಗದಿಪಡಿಸಲಾಗಿದ್ದು, ಸಾಧಾರಣ
ಕೊಬ್ಬರಿಗೆ 21,500 ರೂ. ಹಾಗೂ ಕನಿಷ್ಠ 20,000 ರೂ.ಗೆ ಮಾರಾಟವಾಗಿದೆ. ಮಾರುಕಟ್ಟೆಯಲ್ಲಿ ಒಟ್ಟು 2,887 ಕ್ವಿಂಟಲ್‌ ಕೊಬ್ಬರಿ ದಾಸ್ತಾನು ಮಾಡಲಾಗಿದೆ.

ಮಾರುಕಟ್ಟೆ ಅಧಿಕಾರಿಗಳ ಪ್ರಕಾರ, ಮಾರ್ಚ್‌ನಿಂದ ಕೊಬ್ಬರಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಮಾರ್ಚ್‌ ಅಂತ್ಯದಲ್ಲಿ ಕ್ವಿಂಟಲ್‌ ಕೊಬ್ಬರಿಗೆ 19,000 ರೂ. ಇದ್ದ ಬೆಲೆ, ಮೇ ಅಂತ್ಯದ ವೇಳೆಗೆ 21,809 ರೂ. ತಲುಪಿತ್ತು. ಈಗ ಕ್ವಿಂಟಲ್‌ಗೆ 22,000 ರೂ. ದಾಟಿದೆ.

ಬೆಲೆ ಏರಿಕೆಗೆ ಪ್ರಮುಖ ಕಾರಣಗಳು

ಎಳನೀರು ಮತ್ತು ತೆಂಗಿನಕಾಯಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರು ಕೊಬ್ಬರಿಗಾಗಿ ತೆಂಗಿನಕಾಯಿಯನ್ನು ದಾಸ್ತಾನು ಮಾಡುತ್ತಿಲ್ಲ. ಅಲ್ಲದೆ, ಅಡಕೆಗೆ ಉತ್ತಮ ಬೆಲೆ ಇರುವ ಕಾರಣ ಹಲವು ರೈತರು ತಮ್ಮ ತೆಂಗಿನ ತೋಟದ ಜಾಗದಲ್ಲಿ ಅಡಿಕೆ ಬೆಳೆಯಲು ಮುಂದಾಗುತ್ತಿದ್ದಾರೆ. ಇದರ ಜೊತೆಗೆ, ರೋಗಬಾಧೆ ಹಾಗೂ ಇತರೆ ಕಾರಣಗಳಿಂದ ತೆಂಗಿನ ಬೆಳೆ ಸಂಕಷ್ಟಕ್ಕೆ ಸಿಲುಕಿದ್ದು, ಕೊಬ್ಬರಿ ಇಳುವರಿ ತಗ್ಗಿದೆ.

ಮುಂದಿನ ದಿನಗಳಲ್ಲಿ ಉಂಡೆ ಕೊಬ್ಬರಿ ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ. ಈ ಬೆಲೆ ಏರಿಕೆಯು ತೆಂಗು ಬೆಳೆಗಾರರಿಗೆ ಆರ್ಥಿಕವಾಗಿ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಹೇಳಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *