Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜಾಗತಿಕ ತಾಪಮಾನ ಹೆಚ್ಚಿಸಿದ “ನರಕದ ದ್ವಾರ”: 50 ವರ್ಷಗಳ ಬಳಿಕ ಹತೋಟಿಗೆʼ

Spread the love

Ashgabat: "ನರಕ ದ್ವಾರ'ದ ಬೆಂಕಿ ತೀವ್ರತೆ ತಗ್ಗಿಸಿದ ತುರ್ಕೇಮೇನಿಸ್ತಾನ

ಅಶ್ಗಾಬಾತ್: ನೈಸರ್ಗಿಕ ಅನಿಲ ಸಮೃದ್ಧ ರಾಷ್ಟ್ರವಾದ ತುರ್ಕ್‌ಮೆನಿಸ್ತಾನದ ಕಾರಕುಮ್‌ ಮರುಭೂಮಿಯಲ್ಲಿ ಕಳೆದ 50 ವರ್ಷಗಳಿಂದ ಹೊತ್ತಿ ಉರಿಯುತ್ತಿರುವ “ನರಕದ ದ್ವಾರ’ದ ಬೆಂಕಿಯನ್ನು ಹತೋಟಿಗೆ ತಂದಿರುವುದಾಗಿ ಸರ್ಕಾರ ಘೋಷಿಸಿದೆ.

“ದರ್ವಾಜಾ ಗ್ಯಾಸ್‌ ಕ್ರೇಟರ್‌’ ಎಂದೂ ಕರೆಸಿಕೊಳ್ಳುವ ಈ ಬೃಹತ್‌ ಬಾವಿಯು, ಮಾನವ ನಿರ್ಮಿತ ಬೆಂಕಿಯ ಮೂಲಕವೇ ಪ್ರವಾಸಿ ಆಕರ್ಷಣೆಯಾಗಿದೆ.

ಆದರೆ ಇದರಿಂದ ಹೊರಹೊಮ್ಮುತ್ತಿರುವ ಅಪಾಯಕಾರಿ ಮಿಥೇನ್‌ ಅನಿಲ ಹಾಗೂ ನಿರಂತರವಾಗಿ ಉರಿಯುತ್ತಿರುವ ಬೆಂಕಿ, ಜಾಗತಿಕ ತಾಪಮಾನ ಏರಿಕೆಗೆ ಬಹುದೊಡ್ಡ ಪಾಲು ನೀಡುವ ಮೂಲಕ ಕುಖ್ಯಾತವಾಗಿದೆ.

ಈ ಬಾವಿಯ ನಿರ್ಮಾಣದ ಕಥೆಯೂ ರೋಚಕ. ಹಿಂದೆ ಸೋವಿಯತ್‌ ರಷ್ಯಾದ ಭಾಗವಾಗಿದ್ದ ಇಲ್ಲಿನ ಭೂಗರ್ಭದಲ್ಲಿನ ಮಿಥೇನ್‌ ಸೋರಿಕೆ ಅಧ್ಯಯನಕ್ಕಾಗಿ 30 ಮೀ. ಆಳ, 60-70 ಮೀ. ಅಗಲದ ಬಾವಿಯನ್ನು ವಿಜ್ಞಾನಿಗಳು ತೋಡಿಸಿದ್ದರು. ಆದರೆ ಈ ವೇಳೆ ಮಿಥೇನ್‌ನ ಮೂಲಕ್ಕೇ ಹೊಡೆತ ಬಿದ್ದು, ವಿಪರೀತ ಮಿಥೇನ್‌ ಸೋರಿಕೆ ಪ್ರಾರಂಭವಾಗಿತ್ತು. ಇದನ್ನು ತಡೆಯಬಹುದಾದ ಒಂದೇ ಮಾರ್ಗವೆಂದು ಇಲ್ಲಿಗೆ ಬೆಂಕಿಯಿಡಲಾಯಿತು. ಸಹಜವಾಗಿಯೇ ದಹನಕಾರಿಯಾದ ಮಿಥೇನ್‌ ಅನಿಲದಿಂದಾಗಿ 1971ರಲ್ಲಿ ಇಲ್ಲಿ ಬಿದ್ದ ಬೆಂಕಿ ಇಂದಿನವರೆಗೂ ಉರಿಯುತ್ತಲೇ ಬಂದಿದೆ.

ಈ ಸಮಸ್ಯೆ ಪರಿಹರಿಸಲು ತುರ್ಕ್‌ಮೆನಿಸ್ತಾನ ಪಣತೊಟ್ಟಿದ್ದು ಹಲವು ಕ್ರಮ ಕೈಗೊಂಡಿದೆ. ಇದರ ಪರಿಣಾಮ ಇಲ್ಲಿನ ಬೆಂಕಿ ಸಾಕಷ್ಟು ಪ್ರಮಾಣದಲ್ಲಿ ತಗ್ಗಿದೆ.


Spread the love
Share:

administrator

Leave a Reply

Your email address will not be published. Required fields are marked *