ಕೋರೋನದಂತೆ ಬಂತು ಹೊಸ ಚೀನಿ ವೈರಸ್-ಇದು ಎಷ್ಟು ಡೇಂಜರಸ್?

ವಾಷಿಂಗ್ಟನ್ : ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿ ನಡೆಸಿದ ಆವಿಷ್ಕಾರವೊಂದು ಜಗತ್ತೇ ಬೆಚ್ಚಿಬೀಳುವ ಮಾಹಿತಿ ಹೊರಹಾಕಿದೆ. ಚೀನಾದಲ್ಲಿ ಪತ್ತೆಯಾದ ಮಾರಕ ಮತ್ತು ಅಪಾಯಕಾರಿ ವೈರಸ್ಸೊಂದು ಕೊರೊನಾ ರೀತಿ ಹರಡಬಹುದು ಎಂದಿದ್ದಾರೆ.
ಈ ವೈರಸ್ MERS ಅಥವಾ ಮಧ್ಯಪ್ರಾಚ್ಯದಲ್ಲಿ ಉಸಿರಾಟದ ಸಿಂಡ್ರೋಮ್ ಕಾರಣವಾದ ವೈರಸ್ ರೀತಿ ಇದ್ಯಂತೆ.
ಇದು ಕೋವಿಡ್-19ಗೆ ಹೋಲುವ ಲಕ್ಷಣಗಳನ್ನು ಹೊಂದಿದ್ದರೂ, MERS ಒಂದು ಅತ್ಯಂತ ಮಾರಕ ವೈರಸ್ ಆಗಿದ್ದು, ಅದು ಸೋಂಕಿತರಲ್ಲಿ ಮೂರನೇ ಒಂದು ಭಾಗದಷ್ಟು ಜನರನ್ನು ಕೊಲ್ಲುತ್ತದೆ ಎಂದು ತಿಳಿದುಬಂದಿದೆ.
ಚೀನಾದ ಪ್ರಯೋಗಾಲಯದ ವಿಜ್ಞಾನಿಗಳ ಮೂಲಕ ಕೊರೊನಾ ವೈರಸ್ ಹರಡಿತ್ತು ಎಂದು ಅಧ್ಯಯನಗಳು ಹೇಳಿವೆ. ಅದರ ಅಧ್ಯಯನಕ್ಕಾಗಿ, ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರ ತಂಡವು ಹೊಸ ಹೇಗೆ ಕೆಲಸ ಮಾಡುತ್ತದೆ ಎಂದು ಸಂಶೋಧನೆ ನಡೆಸುತ್ತಿದೆ. ಮನುಷ್ಯರಿಗೆ ಸೋಂಕು ತಗುಲಿದರೆ ಆತಂಕಕಾರಿ ವಿಷಯ. ಹೊಸ ವೈರಸ್ ಮತ್ತಷ್ಟು ರೂಪಾಂತರಗೊಂಡರೆ ಮಾನವ ಜೀವಕೋಶಗಳಿಗೆ ತೊಂದರೆ ಉಂಟು ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
Video courtesy: X