ಕೋರಮಂಗಲ ಪಾಸ್ಪೋರ್ಟ್ ಕಚೇರಿಗೆ ಆತ್ಮಾಹುತಿ ದಾಳಿಯ ಬೆದರಿಕೆ – ಪೊಲೀಸ್ ತನಿಖೆ ಆರಂಭ

ಬೆಂಗಳೂರು : ಇಷ್ಟು ದಿನ ಶಾಲೆಗಳಿಗೆ ಏರ್ ಪೋರ್ಟ್ ಗಳಿಗೆ ಬಾಂಬ್ ಬೆದರಿಕೆ ಬರುತ್ತಿತ್ತು, ಇದೀಗ ಸಿಎಂ ನಿವಾಸ ಹಾಗೂ ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಬೆಂಗಳೂರಿನ ಕೋರಮಂಗಲದ ಪಾಸ್ ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ ಬಂದಿದ್ದು, ಆತ್ಮಾಹುತಿ ಬಾಂಬ್ ದಾಳಿ ಮಾಡುವುದಾಗಿ ಇ-ಮೇಲ್ ಬಾಂಬ್ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ.
ಸದ್ಯ ಸ್ಥಳಕ್ಕೆ ಬಾಂಬ್ ನಿಷ್ಟ್ರಿಯ ದಳ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಂಬ್ ಬೆದರಿಕೆ ಹಾಕಿದವರು ಯಾರು ಎಂಬುವುದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.