Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಿಥಿ ನದಿ ಹಗರಣ: ನಟ ಡಿನೋ ಮೋರಿಯಾ ವಿರುದ್ಧ ED ತನಿಖೆ

Spread the love

ಮುಂಬೈ: ಬಾಲಿವುಡ್ ನಟ ಡಿನೋ ಮೋರಿಯಾ ಅವರು ಮತ್ತೊಮ್ಮೆ ತನಿಖಾ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಿಥಿ ನದಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಶುಕ್ರವಾರ ಮಹಾರಾಷ್ಟ್ರದಲ್ಲಿರುವ ಬಹುಭಾಷಾ ನಟ ಡಿನೋ ಮೋರಿಯಾ ಅವರ ಮನೆ ಮೇಲೆ ದಾಳಿ ನಡೆಸಿದೆ.
ಈ ಹಗರಣವು ರಾಜ್ಯದ ನದಿಗಳ ಶುದ್ಧೀಕರಣದ ಹೆಸರಿನಲ್ಲಿ 65 ಕೋಟಿ ರೂ.ಗಳ ದುರುಪಯೋಗಕ್ಕೆ ಸಂಬಂಧಿಸಿದೆ ಎಂದು ಹೇಳಲಾಗಿದೆ.

15 ಸ್ಥಳಗಳಲ್ಲಿ ದಾಳಿ:
ಈ ಪ್ರಕರಣಕ್ಕೆ ಸಂಬಂಧಿಸಿ ನಟನ ಹೊರತಾಗಿ, ಈ ಪ್ರಕರಣದಲ್ಲಿ ಮುಂಬೈನಿಂದ ಕೇರಳದ ಕೊಚ್ಚಿಯವರೆಗೆ ಒಟ್ಟು 15 ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದೆ.

ವಿಚಾರಣೆಗೆ ಒಳಗಾಗಿದ್ದ ನಟ:
ಇದಕ್ಕೂ ಮೊದಲು, ಡಿನೋ ಮೊರಿಯಾ ಅವರನ್ನು ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW) ಎರಡು ಬಾರಿ ವಿಚಾರಣೆ ನಡೆಸಿತ್ತು. ಪ್ರಕರಣದಲ್ಲಿ (EOW) ಆರಂಭಿಕ ಎಫ್‌ಐಆರ್ ದಾಖಲಿಸಿತ್ತು, ಇದಾದ ಬಳಿಕ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಅಧಿಕಾರಿಗಳ ತಂಡ ವಿವಿಧ ದೃಷ್ಟಿಕೋನದಿಂದ ತನಿಖೆಯನ್ನು ತೀವ್ರಗೊಳಿಸಿದೆ.

ಪ್ರಕರಣದಲ್ಲಿ ನಟನ ಹೆಸರು ಬಂದಿದ್ದು ಹೇಗೆ?
ಮಿಥಿ ನದಿಯನ್ನು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಸ್ವಚ್ಛಗೊಳಿಸಿದೆ. ಇದಕ್ಕಾಗಿ ಹೂಳೆತ್ತುವ ಯಂತ್ರಗಳನ್ನು ಬಳಸಲಾಗಿದೆ. ಈ ಯಂತ್ರಗಳನ್ನು ಕೊಚ್ಚಿ ಮೂಲದ ಮ್ಯಾಟ್‌ಪ್ರಾಪ್ ಟೆಕ್ನಿಕಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನಿಂದ ಭಾರಿ ಮೊತ್ತಕ್ಕೆ ಖರೀದಿಸಲಾಗಿದೆ. ಪ್ರಕರಣದ ತನಿಖೆಯಲ್ಲಿ ಕೇತನ್ ಕದಮ್ ಮತ್ತು ಜೈ ಜೋಶಿ, ಮ್ಯಾಟ್‌ಪ್ರಾಪ್ ಕಂಪನಿಯ ಅಧಿಕಾರಿಗಳು ಮತ್ತು ಬಿಎಂಸಿಯ ಅಧಿಕಾರಿಗಳ ಜೊತೆಗೂಡಿ ಸ್ವಚ್ಛತೆಯ ಹೆಸರಿನಲ್ಲಿ 65 ಕೋಟಿ ರೂ.ಗಳ ಹಗರಣ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹಗರಣದ ಪ್ರಮುಖ ಆರೋಪಿ ಕೇತನ್ ಕದಮ್ ಅವರ ಕರೆ ದಾಖಲೆಗಳನ್ನು ತನಿಖೆ ಮಾಡಿದಾಗ, ನಟ ಡಿನೋ ಮೋರಿಯಾ ಮತ್ತು ಅವರ ಸಹೋದರನ ಹೆಸರುಗಳು ಕೇಳಿಬಂದವು. ಅವರಿಬ್ಬರೂ ಕೇತನ್ ಕದಮ್ ಜೊತೆ ಹಲವಾರು ಸಂದರ್ಭಗಳಲ್ಲಿ ಮಾತನಾಡಿದ್ದರು. ತನಿಖಾ ಅಧಿಕಾರಿಗಳು ಡಿನೋ ಮೋರಿಯಾ ಮತ್ತು ಕೇತನ್ ಕೇವಲ ಸ್ನೇಹಿತರಲ್ಲ, ಬದಲಿಗೆ ಅವರ ನಡುವೆ ಹಣಕಾಸಿನ ವಹಿವಾಟು ಕೂಡ ನಡೆದಿರಬಹುದು ಎಂದು ಹೇಳಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಡಿನೋ ಮೋರಿಯಾ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *