Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮುಂಬೈಯಲ್ಲಿ ರಾಯಭಾರಿ ಕಚೇರಿ ಹೊರಗೆ ದುಡಿದು ಆಟೋ ಚಾಲಕ ಲಕ್ಷಾಧಿಪತಿ

Spread the love

ಮುಂಬೈ:ಮುಂಬೈನಲ್ಲಿರುವ ಯುಎಸ್ ರಾಯಭಾರಿ ಕಚೇರಿ ಹೊರಗಡೆ ಆಟೋ ನಿಲ್ಲಿಸಿ ಆಟೋ ಡ್ರೈವರ್ ಓರ್ವ ತಿಂಗಳಿಗೆ 5 ರಿಂದ 8 ಲಕ್ಷ ರೂ.ಸಂಪಾದಿಸುತ್ತಾನೆ. ಆಟೋ ಡ್ರೈವರ್ ಓರ್ವನ ಈ ಕಥೆ ರಾಷ್ಟ್ರಮಟ್ಟದಲ್ಲಿ ಜನರ ಗಮನ ಸೆಳೆದಿದೆ.

ಲೆನ್ಸ್‌ಕಾರ್ಟ್‌ನ ಪ್ರೊಡಕ್ಟ್ ಲೀಡರ್ ರಾಹುಲ್ ರೂಪಾನಿ ಆಟೋ ಡ್ರೈವರ್ ಸ್ಟೋರಿಯನ್ನು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಯುಎಸ್ ರಾಯಭಾರಿ ಕಚೇರಿಯೊಳಗೆ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗಲು ನಿಮಗೆ ಅವಕಾಶ ನೀಡದಿದ್ದರೆ ನೀವು ಏನು ಮಾಡುತ್ತೀರಿ? ಇದೇ ಸಮಸ್ಯೆಯನ್ನು ಆದಾಯವನ್ನಾಗಿಸಿ ಆಟೋ ಡ್ರೈವರ್ ಓರ್ವರು ಪ್ರತಿ ತಿಂಗಳು ಲಕ್ಷಾಂತರ ರೂ. ಆದಾಯವನ್ನು ಸಂಪಾದಿಸುತ್ತಾರೆ ಎಂದು ಹೇಳಿದ್ದಾರೆ.

ಪ್ರತಿದಿನ ಸಾವಿರಾರು ವೀಸಾ ಅರ್ಜಿದಾರರು ಮುಂಬೈನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಗೆ ಭೇಟಿ ನೀಡುತ್ತಾರೆ. ಕಚೇರಿಯ ಆವರಣದೊಳಗೆ ಯಾವುದೇ ಬ್ಯಾಗ್‌ನ್ನು ಕೊಂಡೊಯ್ಯಲು ಅನುಮತಿ ಇರುವುದಿಲ್ಲ. ರಾಯಭಾರಿ ಕಚೇರಿಯ ಆವರಣಕ್ಕೆ ಬ್ಯಾಗ್‌ಗಳನ್ನು ನಿಷೇಧಿಸಿರುವುದು ಕಚೇರಿಯ ಕಠಿಣ ನಿಯಮಗಳಲ್ಲಿ ಒಂದಾಗಿದೆ.

ರಾಯಭಾರಿ ಕಚೇರಿಯ ಸಮೀಪ ಯಾವುದೇ ಅಧಿಕೃತ ಲಾಕರ್ ಸೌಲಭ್ಯಗಳು ಕೂಡ ಇರುವುದಿಲ್ಲ. ದಾಖಲೆಗಳು, ಎಲೆಕ್ಟ್ರಾನಿಕ್ಸ್ ಮತ್ತು ವೈಯಕ್ತಿಕ ವಸ್ತುಗಳನ್ನು ಕೊಂಡೊಯ್ಯುವವರಿಗೆ ಇದು ದೊಡ್ಡ ತಲೆನೋವಾಗಿದೆ.

ಈ ವಾರ ನಾನು ನನ್ನ ವೀಸಾ ಅಪಾಯಿಂಟ್‌ಮೆಂಟ್‌ಗೆ ಯುಎಸ್ ರಾಯಭಾರಿ ಕಚೇರಿಯ ಹೊರಗೆ ನಿಂತಿದ್ದೆ, ಆಗ ಭದ್ರತಾ ಸಿಬ್ಬಂದಿ ಬ್ಯಾಗ್ ಅನ್ನು ಒಳಗೆ ಕೊಂಡೊಯ್ಯಲು ಅವಕಾಶವಿಲ್ಲ ಎಂದು ನನಗೆ ಹೇಳಿದರು. ನಾನು ಏನು ಮಾಡುವುದು ಎಂದು ದಿಕ್ಕು ತೋಚದೆ ಕಚೇರಿಯ ಹೊರಗೆ ನಿಂತುಕೊಂಡಿದ್ದೆ. ಈ ವೇಳೆ ಓರ್ವ ಆಟೋ ಚಾಲಕ, ಸರ್,ನನಗೆ ಬ್ಯಾಗ್ ನೀಡಿ. ನಾನು ಅದನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತೇನೆ, ನನ್ನದು ಪ್ರತಿದಿನ ಇದೇ ಕೆಲಸ. ನೀವು ಕೇವಲ 1,000ರೂ ನೀಡಿದರೆ ಸಾಕು ಎಂದು ಹೇಳಿರುವ ಬಗ್ಗೆ ರಾಹುಲ್ ರೂಪಾನಿ ತನ್ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಆಟೋ ಚಾಲಕ ಪ್ರತಿದಿನ ರಾಯಭಾರಿ ಕಚೇರಿ ಹೊರಗೆ ತನ್ನ ಆಟೋವನ್ನು ಪಾರ್ಕ್ ಮಾಡುತ್ತಾನೆ. ಪ್ರತಿದಿನ 20 ರಿಂದ 30 ಗ್ರಾಹಕರಿಗೆ ʼಬ್ಯಾಗ್ ಸ್ಟೋರೇಜ್ʼ ಸೇವೆಯನ್ನು ನೀಡುತ್ತಾನೆ. ಈ ಮೂಲಕ ದಿನಕ್ಕೆ 20,000ರೂ.ಗಳಿಂದ 30,000 ರೂ.ಗಳವರೆಗೆ ಸಂಪಾದಿಸುತ್ತಾನೆ. ಇದು ಕಾರ್ಪೊರೇಟ್ ಜಗತ್ತಿನ ಹಿರಿಯ ವೃತ್ತಿಪರರ ಆದಾಯವನ್ನೇ ಮೀರುತ್ತದೆ ಎಂದು ಹೇಳಿದ್ದಾರೆ.

ಚಾಲಕ ರೂಪಾನಿ ಈ ಕುರಿತು ಪ್ರತಿಕ್ರಿಯಿಸಿದ್ದು, ಆಟೋದಲ್ಲಿ 30 ಚೀಲಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲದ ಕಾರಣ, ಹತ್ತಿರದಲ್ಲಿ ಲಾಕರ್ ಜಾಗವನ್ನು ಹೊಂದಿರುವ ಸ್ಥಳೀಯ ಪೊಲೀಸ್ ಅಧಿಕಾರಿಯೊಂದಿಗೆ ಪಾಲುದಾರಿಕೆ ಹೊಂದಿದ್ದೇನೆ. ಬ್ಯಾಗ್‌ನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ ಸುರಕ್ಷಿತವಾಗಿಡಲಾಗುತ್ತದೆ. ಇದಕ್ಕೆ ಯಾವುದೇ ಎಂಬಿಎ ಬೇಡ, ಸ್ಟಾರ್ಟ್‌ಅಪ್ ಬೇಡ, ಕೇವಲ ಉತ್ಸಾಹವೊಂದಿದ್ದರೆ ಸಾಕು ಎಂದು ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *