Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೃಹತ್ ನಕಲಿ ನೋಟು ಹಗರಣ –ನಾಲ್ಕು ವಾಹನ ಜಪ್ತಿ

Spread the love

ಮಾನ್ವಿ :ಪಟ್ಟಣದಲ್ಲಿ ಬೃಹತ್‌ ಖೋಟಾ ನೋಟು ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇಂಡಿಯನ್ ಬ್ಯಾಂಕ್‌ ಶಾಖೆಯ ಡೆಪಾಸಿಟ್‌ ಮಷಿನ್‌ನಲ್ಲಿ ನಕಲಿ ನೋಟುಗಳನ್ನು (Fake currency notes) ಜಮಾ ಮಾಡುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಂಡಿಯನ್ ಬ್ಯಾಂಕ್‌ನ ಕ್ಯಾಷ್‌ ಡೆಪಾಸಿಟ್‌ ಮಷಿನ್‌ನಲ್ಲಿ ತಾಲೂಕಿನ ಚಹಪುಡಿ ಕ್ಯಾಂಪ್ ಸೀಕಲ್ ಗ್ರಾಮದ ವಿರೂಪಾಕ್ಷಿ ಎನ್ನುವವರು ತಮ್ಮ ಖಾತೆಗೆ ಮೇ 13 ರಂದು 18 ಸಾವಿರ ಮೊತ್ತದ 5 ನೂರು ಮುಖಬೆಲೆಯ 36 ಖೋಟಾ ನೋಟುಗಳನ್ನು ಜಮಾ ಮಾಡುವುದಕ್ಕೆ ಮುಂದಾಗಿದ್ದರು. ಈ ವೇಳೆ ಖೋಟಾ ನೋಟುಗಳನ್ನು ಬ್ಯಾಂಕಿನ ವ್ಯವಸ್ಥಾಪಕರು ಪತ್ತೆ ಹಚ್ಚಿದ್ದಾರೆ.

ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಹಾಗೂ ಸಿಂಧನೂರು ಡಿವೈಎಸ್ಪಿ ಬಿ.ಎಸ್.ತಳವಾರ ಮಾರ್ಗದರ್ಶನದಲ್ಲಿ ಪಿ.ಐ. ಸೋಮಶೇಖರ ಎಸ್. ಕೆಂಚರೆಡ್ಡಿ ಹಾಗೂ ಸಿಬ್ಬಂದಿ ತನಿಖೆ ನಡೆಸಿ, ಆರೋಪಿಗಳಾದ ಚಹಪುಡಿ ಕ್ಯಾಂಪ್ ಸೀಕಲ್ ಗ್ರಾಮದ ವಿರೂಪಾಕ್ಷಿ, ಶೇಖರ, ಶಾಸ್ತ್ರಿ ಕ್ಯಾಂಪಿನ ಹುಸೇನ್ ಬಾಷ, ಸಿರವಾರ ತಾಲೂಕಿನ ಮಾಚನೂರು ಗ್ರಾಮದ ಖಾಜಾ ಹುಸೇನ್, ಸಿದ್ದನಗೌಡ ಸಿರವಾರ, ಅಮರೇಶ, ಮಾನ್ವಿ ಪಟ್ಟಣದ ಅಜ್ಮೀರ, ಸಿಂಧನೂರಿನ ಆಲಂ ಬಾಷಾ, ರಾಯಚೂರಿನ ನರಸಯ್ಯಶೆಟ್ಟಿ, ಕಾರಟಗಿಯ ಭೀಮೇಶ ಎನ್ನುವವರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳಿಂದ ಬ್ಯಾಂಕಿನಲ್ಲಿ ಜಮಾ ಮಾಡಲು ಮುಂದಾದ ವೇಳೆ ಸಿಕ್ಕ 18 ಸಾವಿರ ಮೊತ್ತದ 500 ಮುಖ ಬೆಲೆಯ 36 ಖೋಟಾ ನೋಟುಗಳು, 1 ಕಾರ್, 4 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಪಿ.ಐ. ಸೋಮಶೇಖರ ಕೆಂಚರೆಡ್ಡಿ, ಸಿಬ್ಬಂದಿ ಹುಸೇನ್ ಸಾಬ್, ಮುಖ್ಯ ಪೇದೆ ವೆಂಕಟೇಶ, ಆಂಜನೇಯ, ಕೆ.ಸೂಗಪ್ಪ, ಬಸವರಾಜ, ಪಿ.ಸಿ. ಡೆವಿಡ್, ರಹಿಮಾನ್, ಬಂದೇನಾವಾಜ್ ಅವರು ನಕಲಿ ನೋಟುಗಳ ಜಾಲವನ್ನು ಯಶಸ್ವಿಯಾಗಿ ಭೇದಿಸಿ 10 ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪುಟ್ಟಮಾದಯ್ಯ ಅವರು ಅಭಿನಂದಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *