ಮಂಗಳೂರು ಬಿಯರ್ ತಯಾರಕ ಯುನೈಟೆಡ್ ಬ್ರೂವರೀಸ್ ಘಟಕ ಸ್ಥಗಿತ

ಮಂಗಳೂರು : ಬಿಯರ್ ತಯಾರಕ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್, ಜೂನ್ 30, 2025 ರಿಂದ ಜಾರಿಗೆ ಬರುವಂತೆ ಕರ್ನಾಟಕದ ಮಂಗಳೂರು ಬ್ರೂವರಿ ಘಟಕದಲ್ಲಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಿದೆ.

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ತನ್ನ ಪ್ಲ್ಯಾಂಟ್ ನ್ನು ಸಂಪೂರ್ಣವಾಗಿ ಮುಚ್ಚಲು ಕಂಪೆನಿ ನಿರ್ಧರಿಸಿದೆ. ಜೂನ್ 30 ರಿಂದ ಘಟಕ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಲಿದೆ ಎಂದು ಕಂಪೆನಿ ಸೆಬಿಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ.ಕಂಪೆನಿಯು ತನ್ನ ಮೈಸೂರಿನ ಘಟಕವನ್ನು ವಿಸ್ತರಿಸಲು ಯೋಜನೆ ರೂಪಿಸಿದ್ದು. ಈ ಹಿನ್ನಲೆ ಈ ಕ್ರಮಕೈಗೊಂಡಿದೆ ಎಂದು ತಿಳಿಸಿದೆ. ಕರ್ನಾಟಕದೊಳಗೆ ಸುಧಾರಿತ ಕಾರ್ಯಾಚರಣೆಗಳ ಮೂಲಕ ಭವಿಷ್ಯದ ಬೇಡಿಕೆಯನ್ನು ಪರಿಣಾಮಕಾರಿಯಾಗಿ ಪೂರೈಸುವ ಉದ್ದೇಶವನ್ನು ಈ ಯೋಜಿತ ವಿಸ್ತರಣೆ ಹೊಂದಿದೆ. “ಮಂಗಳೂರು ಘಟಕ ಮುಚ್ಚುವಿಕೆಯು ರಾಜ್ಯದಲ್ಲಿ ನಮ್ಮ ವ್ಯವಹಾರದ ಕಾರ್ಯಕ್ಷಮತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಕಂಪನಿ ತಿಳಿಸಿದೆ.