2025ರಲ್ಲಿ ಜಗತ್ತಿನ ಟಾಪ್ ಸಾಲಗಾರ ರಾಷ್ಟ್ರ ಚೀನಾ! ಬಡ ರಾಷ್ಟ್ರಗಳ ಮೇಲೆ ಬಡ್ಡಿ ಭಾರ

ಬೀಜಿಂಗ್: ಹೆಚ್ಚು ಬಡ್ಡಿದರದಲ್ಲಿ ಬಡರಾಷ್ಟ್ರಗಳಿಗೆ ಸಾಲ ನೀಡುತ್ತಿರುವ ಡ್ರಾಯಗನ್ ರಾಷ್ಟ್ರ ಚೀನಾ 2025ರಲ್ಲಿ ಜಗತ್ತಿನಲ್ಲೇ ಹೆಚ್ಚು ಸಾಲ ವಸೂಲಿ ಮಾಡುವ ದೇಶವಾಗಿ ಹೊರಹೊಮ್ಮಿದೆ. ಬಡರಾಷ್ಟ್ರಗಳು ಚೀನಾಗೆ ಒಟ್ಟು 94 ಲಕ್ಷ ಕೋಟಿ ರೂ. ಪಾವತಿಸಬೇಕಿವೆ ಎಂದು ಆಸ್ಟ್ರೇಲಿಯಾದ ಥಿಂಕ್ ಟ್ಯಾಂಕ್ ಸಂಸ್ಥೆ ಲೋವಿ ಇನ್ಸ್ಟಿಟ್ಯೂಟ್ ತನ್ನ ವರದಿಯಲ್ಲಿ ಹೇಳಿದೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಂದ 3 ಲಕ್ಷ ಕೋಟಿ ರೂ. ಮತ್ತು 75 ಬಡರಾಷ್ಟ್ರಗಳಿಂದ 1.9 ಲಕ್ಷ ಕೋಟಿ ರೂ. 2025ರಲ್ಲಿ ವಸೂಲಿ ಮಾಡಲು ಚೀನಾ ಮುಂದಾಗಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು 94 ಲಕ್ಷ ಕೋಟಿ ರೂ.ಗಳನ್ನು ಚೀನಾಕ್ಕೆ ಪಾವತಿಸಬೇಕಿದೆ. ಈ ಎಲ್ಲ ಸಾಲವನ್ನು ಚೀನಾ 2013ರಲ್ಲಿ ಬೆಲ್ಟ್ ಆಂಡ್ ರೋಡ್ ಇನಿಶೇಟಿವ್ (ಬಿಆರ್ಐ) ಯೋಜನೆಯಡಿ ವಿತರಿಸಿದೆ. ಚೀನಾಕ್ಕೆ ಸಾಲ ಮರುಪಾವತಿ ಹಿನ್ನೆಲೆಯಲ್ಲಿ ಅನೇಕ ರಾಷ್ಟ್ರಗಳ ಆರೋಗ್ಯ ಮತ್ತು ಶಿಕ್ಷಣ ಬಜೆಟ್ನಲ್ಲಿ ಕಡಿತವಾಗಿದೆ ಎಂದು ವರದಿ ವಿವರಿಸಿದೆ. 2023ರಲ್ಲಿ 46 ಬಡರಾಷ್ಟ್ರಗಳು ತಮ್ಮ ತೆರಿಗೆ ಸಂಗ್ರಹದ ಸರಾಸರಿ ಶೇಕಡ 20ರಷ್ಟನ್ನು ಚೀನಾದ ಸಾಲ ತೀರಿಸಲು ಖರ್ಚು ಮಾಡಿವೆ. ವಿಶ್ವಸಂಸ್ಥೆಯ ಹಣಕಾಸು ಸಂಸ್ಥೆಗಳು ವಿವಿಧ ರಾಷ್ಟ್ರಗಳಿಗೆ 1.1% ಬಡ್ಡಿದರ ವಿಧಿಸಿದರೆ ಚೀನಾ ಬಡರಾಷ್ಟ್ರಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಶೇ.4.2ರಿಂದ 6ರವೆರೆಗ ಬಡ್ಡಿದರ ವಿಧಿಸುತ್ತಿದೆ ಮತ್ತು ಶೀಘ್ರ ಮರುಪಾವತಿಗೂ ಒತ್ತಡ ಹಾಕುತ್ತಿದೆ. ಸಾಲ ಮರುಪಾವತಿಗೆ ವಿಳಂಬವಾದಲ್ಲಿ ಆ ದೇಶಗಳ ಪ್ರಾಕೃತಿಕ ಸಂಪನ್ಮೂಲಗಳನ್ನು ವಶಪಡಿಸಿ ಕೊಳ್ಳುತ್ತಿದೆ ಎಂದು ಲೋವಿ ಇನ್ಸ್ಟಿಟ್ಯೂಟ್ ಹೇಳಿದೆ.
ಚೀನಾದಿಂದ ಅತಿ ಹೆಚ್ಚು ಸಾಲ ಪಡೆದ ಟಾಪ್ 10 ದೇಶಗಳು
ಪಾಕಿಸ್ತಾನ 2,27,563
ಅಂಗೋಲಾ 1,79,655
ಶ್ರೀಲಂಕಾ 76,140
ಇಥಿಯೋಪಿಯಾ 58,174
ಕೆನಿಯಾ 57,319
ಬಾಂಗ್ಲಾದೇಶ 52,186
ಜಾಂಬಿಯಾ 52,186
ಲಾವೋಸ್ 45,342
ಈಜಿಪ್ತ್ 44,486