Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮೀನಿಗಾಗಿ ತೆರಳಿದ ಇಬ್ಬರು ನಾಪತ್ತೆ: ಫಲ್ಗುಣಿ ನದಿಯಲ್ಲಿ ಮೂರನೇ ದಿನವೂ ಹುಡುಕಾಟ

Spread the love

ಮಂಗಳೂರು : ಮೇ 30ರಂದು ಬೆಳಿಗ್ಗಿನ ಫಲ್ಗುಣಿ ನದಿಯ ಅಳಿವೆಬಾಗಿಲು ನದಿಯ ದಡದಲ್ಲಿ ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿರುವ ತೋಟ ಬೆಂಗರೆ ನಿವಾಸಿಗಳಾದ ಯಶವಂತ ಕರ್ಕೇರಾ ಮತ್ತು ಕಮಲಾಕ್ಷ ಸಾಲಿಯಾನ್ ಅವರಿಗಾಗಿ ಹುಡುಕಾಟ ಮುಂದುವರಿದಿದೆ. ಕರಾವಳಿ ಕಾವಲು ಪಡೆಯ ಸಿಬ್ಬಂದಿ ಶುಕ್ರವಾರ ಮತ್ತು ಶನಿವಾರವಿಡೀ ಹುಡುಕಾಡಿದ್ದಾರೆ.

ಭಾನುವಾರ ಮಳೆ ಕಡಿಮೆಯಾದ ಕಾರಣ ಸ್ಥಳೀಯ ಮೀನುಗಾರರು ಕೂಡ ದೋಣಿಗಳಲ್ಲಿ ತೆರಳಿ ಹುಡುಕಾಡಿದ್ದು ಮೀನುಗಾರಿಕೆಗೆ ಬಳಸುವ ಬೋಟ್‌ಗಳನ್ನು ಇಳಿಸಲಾಗಿದೆ. ಕಲ್ಲು-ಬಂಡೆಗಳ ಎಡೆಯಲ್ಲಿ ಸಿಲುಕಿದ್ದರೆ ಪತ್ತೆ ಮಾಡುವುದಕ್ಕಾಗಿ ಡೋನ್ ಬಳಸಲಾಗಿದೆ. ಸಮುದ್ರದಲ್ಲಿ ನಿಗಾ ವಹಿಸುವಂತೆ ಸರಕು ಸಾಗಣೆ ಹಡಗುಗಳ ಸಿಬ್ಬಂದಿಗೆ ಸೂಚಿಸುವಂತೆ ಬಂದರು ಅಧಿಕಾರಿಗಳನ್ನು ಕೋರಲಾಗಿದೆ ಎಂದು ಟ್ರೋಲ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಚೇತನ್‌ ಬೆಂಗ್ರೆ ತಿಳಿಸಿದರು.


Spread the love
Share:

administrator

Leave a Reply

Your email address will not be published. Required fields are marked *