ಪುಣೆಯಲ್ಲಿ 19 ವರ್ಷದ ಎಲೆಕ್ಟ್ರಿಷಿಯನ್ ದೇಹದಿಂದ 7 ಲೋಹದ ಸ್ಕ್ರೂಗಳು ಹೊರತೆಗೆಯಲ್ಪಟ್ಟ ಘಟನೆ

ಪುಣೆ: ನಿರಂತರ ಕೆಮ್ಮು, ಎದೆ ನೋವು ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದ 19 ವರ್ಷದ ಎಲೆಕ್ಟ್ರಿಷಿಯನ್ ಒಬ್ಬರ ದೇಹದಿಂದ ಪುಣೆಯ ಪಿಂಪ್ರಿಯ ಡಿಪಿಯು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು 7 ಲೋಹದ ಸ್ಕ್ರೂಗಳನ್ನು ಹೊರತೆಗೆದಿರುವಂತಹ ಘಟನೆ ನಡೆದಿದೆ.
ವರದಿಗಳ ಪ್ರಕಾರ ಎಲೆಕ್ಟ್ರಿಷಿಯನ್ ಸೀಲಿಂಗ್ ಅಳವಡಿಕೆಯ ಸಮಯದಲ್ಲಿ ಅಲ್ಯೂಮಿನಿಯಂ ಹಾಳೆಯ ಮೇಲೆ ಬರಿಗಾಲಿನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿತ್ತು. ಇದರಿಂದ ಅವರು ಬಿದ್ದು, ಸ್ವಲ್ಪ ಸಮಯದವರೆಗೆ ಪ್ರಜ್ಞೆ ತಪ್ಪಿದ್ದರು. ಆ ಸಮಯದಲ್ಲಿ ಅವರು ಉಸಿರಾಟದ ಮೂಲಕ ಐದು ಸ್ಕ್ರೂಗಳು ಶ್ವಾಸಕೋಶ ಪ್ರವೇಶಿಸಿದರೆ ಎರಡು ಸ್ಕ್ರೂಗಳು ಬಾಯಿಯ ಮೂಲಕ ಹೊಟ್ಟೆ ಪ್ರವೇಶಿಸಿದೆ.
ವ್ಯಕ್ತಿಗೆ ಪ್ರಜ್ಞೆ ಮರಳಿದ ನಂತರ 2-3 ನಿಮಿಷಗಳ ಕಾಲ ತೀವ್ರ ಕೆಮ್ಮು, ನಿರಂತರ ಎದೆ ನೋವು ಮತ್ತು ಉಸಿರಾಟದ ತೊಂದರೆ ಉಂಟಾಗಿದೆ. ನಂತರ ಆಸ್ಪತ್ರೆ ದಾಖಲಾದ ಅವರನ್ನು ಎಕ್ಸ್-ರೇಗೆ ಒಳಪಡಿಸಿದಾಗ ಒಟ್ಟು 7 ಸ್ಕ್ರೂಗಳು ದೇಹದಲ್ಲಿರುವುದು ತಿಳಿದುಬಂದಿದೆ. ರೋಗಿ ಪದೇ ಪದೆ ಕೆಮ್ಮುತ್ತಿದ್ದರಿಂದ ಸ್ಕ್ರೂಗಳು ದೇಹದೊಳಗೆ ಸ್ಥಾನಗಳನ್ನು ಬದಲಿಸುತ್ತಲೇ ಇದ್ದವು.
ಸದ್ಯ ಆಸ್ಪತ್ರೆಯ ವೈದ್ಯರು ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಶ್ವಾಸಕೋಶದಲ್ಲಿ ಸಿಲುಕಿದ್ದ ಐದು ಸ್ಕ್ರೂಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ನಂತರ ವ್ಯಕ್ತಿ ಸ್ಕ್ರೂಗಳನ್ನು ನುಂಗಿದ ಪರಿಣಾಮ ಹೊಟ್ಟೆ ಸೇರಿದ್ದ ಎರಡು ಸ್ಕ್ರೂಗಳು 48 ಗಂಟೆಗಳ ಒಳಗೆ ಮಲದ ಮೂಲಕ ಸ್ವಾಭಾವಿಕವಾಗಿ ಹೊರಹಾಕಲಾಗಿದೆ. ಇದೀಗ ವ್ಯಕ್ತಿ ಚೇರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ