Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಷರೀಫ್ ಸ್ಫೋಟಕ ಹೇಳಿಕೆ: ‘ದಾಳಿ ಮಾಡೋಣ ಅನ್ನುವಷ್ಟರಲ್ಲಿ ಭಾರತವೇ ದಾಳಿ ಮಾಡಿತು’

Spread the love

ಇಸ್ಲಾಮಾಬಾದ್‌: ಭಾರತ ನಡೆಸಿದ ದಾಳಿಗೆ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಮೇ 9-10ರ ಮಧ್ಯರಾತ್ರಿಯಲ್ಲಿ ರಾವಲ್ಪಿಂಡಿ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಭಾರತ ಬ್ರಹ್ಮೋಸ್ ಕ್ಷಿಪಣಿ ದಾಳಿ ನಡೆಸುವುದು ತನ್ನ ಸೇನೆಯ ಅರಿವಿಗೆ ಬಂದಿರಲಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಒಪ್ಪಿಕೊಂಡಿದ್ದಾರೆ.

ಅಜೆರ್‌ಬೈಜಾನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಷರೀಫ್ (Shehbaz Sharif) ಭಾರತದ ಮೇಲೆ ನಾವು ದಾಳಿ ಮಾಡಬೇಕು ಎನ್ನುವಷ್ಟರಲ್ಲೇ ಭಾರತ ನಮ್ಮ ಮೇಲೆ ದಾಳಿ ನಡೆಸಿದೆ ಎಂದು ಅವರು ಹೇಳಿದ್ದಾರೆ.

ಸೇನಾ ಮುಖ್ಯಸ್ಥ ಅಸೀಮ್‌ ಮುನೀರ್‌ ನೇತೃತ್ವದ ಸೇನೆಯು ಮೇ 10 ರಂದು ಬೆಳಗಿನ ಪ್ರಾರ್ಥನೆಯ ನಂತರ ಭಾರತದ ಮೇಲೆ ದಾಳಿ ಮಾಡಲು ಯೋಜಿಸಿತ್ತು. ಆದರೆ, ಬೆಳಗಾಗುವ ಮುನ್ನವೇ ಪಾಕಿಸ್ತಾನದ ವಿವಿಧ ಪ್ರಾಂತ್ಯಗಳ ಮೇಲೆ ದೀರ್ಘ-ಶ್ರೇಣಿಯ ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿಗಳ ದಾಳಿ ನಡೆಯಿತು. ಮುಂಜಾನೆ ದಾಳಿಯ ಬಗ್ಗೆ ಮುನೀರ್ ನನಗೆ ತಿಳಿಸಿದ್ದರು ಎಂದು ಪ್ರಧಾನಿ ಹೇಳಿದರು. ಮೇ 9-10ರ ರಾತ್ರಿ ಭಾರತದ ಆಕ್ರಮಣಕ್ಕೆ ತಕ್ಕ ಪ್ರತ್ಯುತ್ತರ ನೀಡಲು ನಿರ್ಧರಿಸಿದ್ದೇವು. ನಮ್ಮ ಸಶಸ್ತ್ರ ಪಡೆಗಳು ಬೆಳಗ್ಗೆ 4.30ಕ್ಕೆ ಫಜ್ರ್ ಪ್ರಾರ್ಥನೆಯ ನಂತರ ಪಾಠ ಕಲಿಸಲು ಸಜ್ಜಾಗಿದ್ದವು. ಆದರೆ ಅದಕ್ಕೂ ಮುನ್ನವೇ ಭಾರತ ರಾವಲ್ಪಿಂಡಿ ವಿಮಾನ ನಿಲ್ದಾಣ ಸೇರಿದಂತೆ ಪಾಕಿಸ್ತಾನದ ವಿವಿಧಡೆ ಮತ್ತೊಮ್ಮೆ ಬ್ರಹ್ಮೋಸ್ ಬಳಸಿ ಕ್ಷಿಪಣಿ ದಾಳಿ ನಡೆಸಿತು ಎಂದು ತಿಳಿಸಿದರು.

ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರ ಸಾವಿಗೆ ಪ್ರತೀಕಾರವಾಗಿ ಭಾರತ ಆಪರೇಷನ್‌ ಸಿಂದೂರ್‌ ಮೂಲಕ ಕಾರ್ಯಾಚರಣೆ ನಡೆಸಿತ್ತು. ಭಾರತ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ನಡೆಸಿ 100 ಕ್ಕೂ ಅಧಿಕ ಉಗ್ರರ ನೆಲೆಯನ್ನು ನಾಶಪಡಿಸಿದೆ. ನಂತರ ಭಾರತ ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ಭಾರತವು ಗುರಿಯಾಗಿಸಿಕೊಂಡ 11 ವಾಯು ನೆಲೆಗಳಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯೂ ಸೇರಿದೆ.

ಪಾಕಿಸ್ತಾನದ ಸೇನಾ ಪ್ರಧಾನ ಕಛೇರಿಯಿಂದ ಸ್ವಲ್ಪ ದೂರದಲ್ಲಿರುವ ವಾಯುನೆಲೆಯು ಲಾಕ್‌ಹೀಡ್ C-130 ಹರ್ಕ್ಯುಲಸ್ ಮತ್ತು ಇಲ್ಯುಶಿನ್ Il-78 ಇಂಧನ ತುಂಬಿಸುವಂತಹ ಉನ್ನತ ಶ್ರೇಣಿಯ ಮಿಲಿಟರಿ ವಿಮಾನಗಳನ್ನು ಹೊಂದಿದೆ. ಸ್ಯಾಟ ಲೈಟ್ ಇಮೇಜ್ ಗಳಲ್ಲಿ ಎರಡು ಮಿಲಿಟರಿ ಸಾರಿಗೆ ವಾಹನಗಳಿಗೆ ಹಾನಿಯನ್ನು ತೋರಿಸುತ್ತದೆ. ನೂರ್ ಖಾನ್ ಅಲ್ಲದೇ ರಫೀಕಿ, ಮುರಿದ್, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್‌ನಲ್ಲಿ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ಭಾರತ ದಾಳಿ ಮಾಡಿದೆ. ಭೋಲಾರಿ, ಜಾಕೋಬಾಬಾದ್ ಮತ್ತು ಸರ್ಗೋಧಾ ವಾಯುನೆಲೆಯಲ್ಲಿ ವ್ಯಾಪಕ ಹಾನಿಯಾಗಿದೆ.


Spread the love
Share:

administrator

Leave a Reply

Your email address will not be published. Required fields are marked *