ಕೋಟ್ಯಧಿಪತಿಗಳ ಏರಿಕೆಯಲ್ಲಿ ಬೆಂಗಳೂರು ವಿಶ್ವದ ಮೂರನೇ ಸ್ಥಾನಕ್ಕೆ!

ನವದೆಹಲಿ: ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಅತಿಹೆಚ್ಚು ಏರಿಕೆ ಕಂಡ ವಿಶ್ವದ 20 ರಾಷ್ಟ್ರಗಳ ಪೈಕಿ ಭಾರತವೂ ಸ್ಥಾನ ಗಳಿಸಿದ್ದು, ಅದರಲ್ಲೂ ನಮ್ಮ ಬೆಂಗಳೂರು ಮೂರನೇ ಸ್ಥಾನ ಪಡೆದುಕೊಂಡಿದೆ.
ಹೆನ್ನ ಆಯಂಡ್ ಪಾಟ್ನರ್ಸ್ ಸಂಸ್ಥೆ ಬಿಡುಗಡೆಗೊಳಿಸಿದ ಇತ್ತೀಚಿನ ಸಂಶೋಧನಾ ವರದಿಯಲ್ಲಿ, 2014 ರಿಂದ 2024ರವರೆಗಿನ ನಡುವಿನ ಅವಧಿಯಲ್ಲಿ ಬೆಂಗಳೂರಿನಲ್ಲಿ ಕೋಟ್ಯಧಿಪತಿಗಳ ಬೆಳವಣಿಗೆ ಪ್ರಮಾಣ ಬರೋಬ್ಬರಿ ಶೇಕಡಾ 120ರಷ್ಟಿದೆ ಎಂದು ತಿಳಿದು ಬಂದಿದೆ.
ಇನ್ನು ಈ ವರದಿಯಲ್ಲಿ ಭಾರತದ ಇನ್ನೂ ಎರಡು ಪ್ರಮುಖ ನಗರಗಳು ಸ್ಥಾನ ಪಡೆದುಕೊಂಡಿವೆ. ದೆಹಲಿ 14ನೇ ಸ್ಥಾನದಲ್ಲಿದ್ದು, ಇಲ್ಲಿ ಕೋಟ್ಯಧಿಪತಿಗಳ ಬೆಳವಣಿಗೆ ಪ್ರಮಾಣ ಶೇ.82 ರಷ್ಟಿದೆ. ಹಾಗೂ ಮುಂಬೈ 18ನೇ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕೋಟ್ಯಧಿಪತಿಗಳ ಬೆಳವಣಿಗೆ ಪ್ರಮಾಣ ಶೇ.142ರಷ್ಟು ಬೆಳವಣಿಗೆ ಕಂಡಿರುವ ಚೀನಾದ ಶೆನ್‌ಝನ್ ನಗರ ಮೊದಲ ಸ್ಥಾನದಲ್ಲಿದೆ. ಇನ್ನು ಅಮೆರಿಕದ 8 ನಗರಗಳು ಪಟ್ಟಿಯಲ್ಲಿವೆ ಎಂದು ಸಂಶೋಧನಾ ವರದಿಯಲ್ಲಿ ತಿಳಿದು ಬಂದಿದೆ.