Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿಕ್ಕ ವಿಷಯ, ದೊಡ್ಡದಾಗಿ ಮಾಡಬೇಡಿ” ಎಂದ ಶಿವಣ್ಣ

Spread the love

ಬೆಂಗಳೂರು:ಕಮಲ್ ಹಾಸನ್ ಕನ್ನಡ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ನಟ ಶಿವರಾಜ್ ಕುಮಾರ್ ಅದೊಂದು ಸಣ್ಣ ವಿಚಾರ ಯಾಕೆ ದೊಡ್ಡದು ಮಾಡ್ತೀರಾ ಎಂದು ಪ್ರತಿಕ್ರಿಯಿಸಿದ್ದಾರೆ. ಥಗ್ಸ್ ಆಫ್ ಲೈಫ್ ಸಿನಿಮಾ ಈವೆಂಟ್ ನಲ್ಲಿ ಶಿವಣ್ಣ ಎದುರೇ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದೆ ಎಂದಿರುವುದು ವಿವಾದಕ್ಕೆ ಕಾರಣವಾಗಿದೆ.

ಕಮಲ್ ಹಾಸನ್ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿದ್ದು ಕ್ಷಮೆಗೆ ಆಗ್ರಹಿಸುತ್ತಿದ್ದಾರೆ.

ಇದೀಗ ಅಂದು ವೇದಿಕೆಯಲ್ಲಿದ್ದ ಶಿವಣ್ಣ ವಿವದಾದ ಬಗ್ಗೆ ಮಾತನಾಡಿದ್ದಾರೆ. ನನ್ನನ್ನು ಆ ಕಾರ್ಯಕ್ರಮಕ್ಕೆ ಗೌರವದಿಂದ ಕರೆದಿದ್ದರು. ನಾನೂ ಗೌರವದಿಂದ ಹೋಗಿದ್ದೇನೆ. ಕಮಲ್ ಹಾಸನ್ ಹಿರಿಯ ಕಲಾವಿದರು. ಅವರಿಗೆ ಏನು ಮಾಡಬೇಕು ಎಂದು ಗೊತ್ತಿದೆ. ಅಂದು ಕಾರ್ಯಕ್ರಮದಲ್ಲಿ ಅವರು ಕನ್ನಡದ ಬಗ್ಗೆ ಹೇಳಿದ್ದು ನನಗೆ ಗೊತ್ತಾಗಿಲ್ಲ. ಈಚೆ ಬಂದ ಮೇಲೆಯೇ ಅದು ವಿವಾದವಾಗಿದ್ದು.

ಕಮಲ್ ಹಾಸನ್ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಕನ್ನಡದ ಬಗ್ಗೆ ಅವರಿಗೂ ಪ್ರೀತಿಯಿದೆ. ಇದೊಂದು ಚಿಕ್ಕ ವಿಚಾರ. ವಿವಾದ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇನ್ನು, ಕನ್ನಡ ಅಂತ ಬಂದರೆ ನಾವು ಹೋರಾಟಕ್ಕೂ ಸಿದ್ಧ, ಸಾಯಲೂ ಸಿದ್ಧ ಎಂದು ಶಿವಣ್ಣ ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *