ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಉಚಿತ ಪಠ್ಯಪುಸ್ತಕ ಹಾಗೂ ವಿದ್ಯಾರ್ಥಿ ನಿಧಿ ವಿತರಣೆ, ಸನ್ಮಾನ ಕಾರ್ಯಕ್ರಮ

ಮಂಗಳೂರು: ಸನ್ನಿಧಿ ಫ್ರೆಂಡ್ಸ್ ಹಾಗೂ ಈಶ್ವರಗೋಳಿ ಕ್ಷೇತ್ರ ಕೂಡುವಿಕೆ ಯೊಂದಿಗೆ “ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ (ರಿ), ಮಂಗಳೂರು” ಇವರ ಸಹಯೋಗದೊಂದಿಗೆ.


ದಿನಾಂಕ 25-05-2025 ರಂದು ಭಾನುವಾರ ಸಂಜೆ 4.30 ಗಂಟೆಗೆ ಹೊಸಬೆಟ್ಟುವಿನ ಈಶ್ವರಗೋಳಿ ಕುಳಾಯಿಯಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿ ನಿಧಿ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಆಶಯದಲ್ಲಿ ಶ್ರೀ ಸಂದೀಪ್ ಶೆಟ್ಟಿ ಅಡ್ಕ, ಶ್ರೀ ದಿನೇಶ್ ಕೆ, ಶ್ರೀ ಅರುಣ್ ಶೆಟ್ಟಿ , ಶ್ರೀ ಸೋಮನಾಥ್, ಶ್ರೀ ವಿನಯ್ ಕುಮಾರ್,ಶ್ರವಣ್ ಕುಮಾರ್ ,ನೇತೃತ್ವದಲ್ಲಿ ,ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕರಾದ ಶ್ರೀ ಅರ್ಜುನ್ ಭಂಡಾರ್ಕರ್ ಹಾಗೂ ಸ್ಯಾಫ್ರನ್ ಸಮೂಹ ಸಂಸ್ಥೆ ಸಂಸ್ಥಾಪಕರಾದ ಶ್ರೀ ರಾಜೇಶ್ ಪವಿತ್ರನ್ ರವರಿಂದ ದೀಪ ಪ್ರಜ್ವಲಿಸುದರೊಂದಿಗೆ 225 ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೊಂದಿಗೆ ಜಗ್ಗನಾಥ ಶೆಟ್ಟಿ ಕುಳಾಯಿ ಗುತ್ತು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ವಿಶೇಷ ಕಾರ್ಯಕ್ರಮದಲ್ಲಿ ಗಣ್ಯರಾದ ಶ್ರೀ ಕೃಷ್ಣಪ್ಪ ಈಶ್ವರ ಗೋಳಿ ಕ್ಷೇತ್ರ ಅಧ್ಯಕ್ಷರು ,ಶ್ರೀ ಬಿ ನವೀನ್ ಚಂದ್ರ ಪೂಜಾರಿ, ರಾಜಶೇಖರ್ ಕೋಟ್ಯಾನ್, ರಾಜೇಶ್ ಭಂಡಾರಿ, ಗಾವಳಿ ಶ್ರೀ ಸುರೇಶ್ ಎನ್ ಶೆಟ್ಟಿ, ಡಾ. ನಯನ ಕೃಷ್ಣಾಪುರ ,ಶ್ರೀಮತಿ ಬೇಬಿ ಪದ್ಮನಾಭ, ಶ್ರೀ ಭರತ್ ಭಂಡಾರಿ,ಶ್ರೀ ಗಿರೀಶ್ ಕುಲಾಯಿ ದೋಟ ಉಪಸ್ಥಿತರಿದ್ದರು.

