Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭದ್ರತಾ ಪಡೆಗಳಿಂದ ಎಲ್‌ಇಟಿ ಉಗ್ರರ ಸೆರೆ – ಗುಪ್ತ ಕಾರ್ಯಾಚರಣೆಯಲ್ಲಿ ಯಶಸ್ಸು

Spread the love

ಶೋಪಿಯಾನ್: ಭಾರತ-ಪಾಕಿಸ್ತಾನ ಉದ್ವಿಗ್ನತೆ ನಡುವೆ, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ನನ್ನು ಭದ್ರತಾ ಪಡೆ ಎಲ್​ಇಟಿಯ ಇಬ್ಬರು ಹೈಬ್ರಿಡ್ ಉಗ್ರರನ್ನು ಬಂಧಿಸಿವೆ. ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.ಶೋಪಿಯಾನ್‌ನಲ್ಲಿ ಬಂಧಿಸಲಾದ ಈ ಲಷ್ಕರ್ ಭಯೋತ್ಪಾದಕರ ಹೆಸರುಗಳು ಇರ್ಫಾನ್ ಮತ್ತು ಉಜೈರ್.

ಭದ್ರತಾ ಪಡೆಗಳು ಭಯೋತ್ಪಾದಕರಿಂದ 2 ಎಕೆ -56, 4 ಮ್ಯಾಗಜೀನ್‌ಗಳು, 102 ಲೈವ್ ಕಾರ್ಟ್ರಿಡ್ಜ್‌ಗಳು, 2 ಹ್ಯಾಂಡ್ ಗ್ರೆನೇಡ್‌ಗಳು, ನಗದು, ಮೊಬೈಲ್ ಫೋನ್‌ಗಳು, ಸ್ಮಾರ್ಟ್ ವಾಚ್‌ಗಳು ಮತ್ತು ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿವೆ.

ಭಯೋತ್ಪಾದಕರನ್ನು ಹಿಡಿದಿದ್ದು ಹೇಗೆ? ಈ ಎಲ್‌ಇಟಿ ಭಯೋತ್ಪಾದಕರನ್ನು ಬಂಧಿಸಲು, 44RR ಮತ್ತು 178 ಬಿಎನ್ ಸಿಆರ್‌ಪಿಎಫ್‌ನ ನಿರ್ದಿಷ್ಟ ಮಾಹಿತಿಯ ನಂತರ ಎಸ್‌ಒಜಿ ಶೋಪಿಯಾನ್ ಬಸ್ಕುಚನ್‌ನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.ಭಯೋತ್ಪಾದಕರನ್ನು ಸೆರೆಹಿಡಿಯುವ ಮೊದಲು ಆ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿಯಲಾಗಿತ್ತು. ಹತ್ತಿರದ ತೋಟದಲ್ಲಿ ಭಯೋತ್ಪಾದಕರ ಚಲನವಲನ ಕಂಡುಬಂದಿತ್ತು.

ಹೈಬ್ರಿಡ್ ಉಗ್ರರೆಂದರೆ ಯಾರು? ಹೈಬ್ರಿಡ್​ ಉಗ್ರರೆಂದರೆ ಸದಾ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದಿಲ್ಲ. ಸಾಮಾನ್ಯ ಜನರಂತೆ ಸಾಮಾನ್ಯ ಜೀವನವನ್ನೇ ನಡೆಸುತ್ತಿರುತ್ತಾರೆ. ತಮ್ಮ ಸಂಘಟನೆಗಳು ಕರೆದಾಗ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಮತ್ತೆ ತಮ್ಮ ಜೀವನಕ್ಕೆ ಮರಳುತ್ತಾರೆ. ಹಾಗೆಯೇ ಅವರು ಶಸ್ತ್ರಾಸ್ತ್ರಗಳನ್ನು ಹಿಡಿದು ನೇರವಾಗಿ ದಾಳಿ ಮಾಡುವ ಬದಲು ಬೇರೆ ಬೇರೆ ತಂತ್ರಗಳನ್ನು ಕೂಡ ಬಳಸುತ್ತಾರೆ.

ಇವರನ್ನು ಗುರುತಿಸುವುದು ತುಂಬಾ ಕಷ್ಟ. ಅವರು ಜನರಿಂದ ಅಡಗಿಕೊಂಡಿರುವುದಿಲ್ಲ, ಕಚೇರಿ, ವಿದ್ಯಾರ್ಥಿಯಾಗಿ, ವ್ಯಾಪಾರಿಯಾಗಿ ಸಾಮಾನ್ಯರಂತೆಯೇ ಜೀವನ ಸಾಗಿಸುತ್ತಿರುತ್ತಾರೆ. ದಾಳಿ ನಡೆಸುವ ವೇಳೆ ಮಾತ್ರ ಅವರ ಉಗ್ರ ರೂಪ ಗೋಚರಿಸುತ್ತದೆ. ಡಾರ್ಕ್ ವೆಬ್, ಎನ್‌ಕ್ರಿಪ್ಟೆಡ್ ಮೆಸೆಜಿಂಗ್ ಆ್ಯಪ್‌ಗಳು, ಡ್ರೋನ್‌ಗಳು ಮತ್ತು ಇಂಟರ್‌ನೆಟ್ ಪ್ರಚಾರದ ಮೂಲಕ ಉಗ್ರ ಚಟುವಟಿಕೆ ನಡೆಸುತ್ತಾರೆ.

Spread the love
Share:

administrator

Leave a Reply

Your email address will not be published. Required fields are marked *