Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು: ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಫೋಟೊಗ್ರಾಫರ್ ಕಾರು ತೋಡಿಗೆ ಉರುಳಿ ಸಾವು

Spread the love

ಮಂಗಳೂರು: ಕಾರ್ಯಕ್ರಮವೊಂದರ ಫೋಟೊಗ್ರಾಫಿಗೆಂದು ಕಾರಿನಲ್ಲಿ ತೆರಳುತ್ತಿದ್ದ ಫೋಟೊಗ್ರಾಫರ್ ಕಾರೊಂದು ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕ ಇದ್ದ ತೋಡಿಗೆ ಮಗುಚಿ ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ.

ಅಪಘಾತದಲ್ಲಿ ಕಾರು ಚಾಲಾಯಿಸುತ್ತಿದ್ದ ಫೋಟೊಗ್ರಾಫರ್ ಸೂರ್ಯ ನಾರಾಯಣ (48)ಮೃತಪಟ್ಟಿದ್ದಾರೆ.ಸೂರ್ಯನಾರಾಯಣ ಅವರು ಪಣಂಬೂರು ಬಳಿಯ ನಂದೀಕೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದ ಫೋಟೊಗ್ರಾಫಿಗೆಂದು ತನ್ನ ಕಾರಲ್ಲಿ ಹೊರಟಿದ್ದರು. ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಕೋಡಿಕಲ್ ಕ್ರಾಸ್ ಬಳಿ ತನ್ನ ಕಾರಿನ ನಿಯಂತ್ರಣ ತಪ್ಪಿ ಸಮೀಪದ ತೋಡಿಗೆ ಬಿದ್ದು ಅಫಘಾತವಾಗಿದೆ. ಈ ಸಂಧರ್ಭದಲ್ಲಿ ಸ್ಥಳೀಯರು ಗಾಯಗೊಂಡ ಸೂರ್ಯ ನಾರಾಯಣ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.ಸೂರ್ಯನಾರಾಯಣ ಅವರು ಕಳೆದ ಹಲವು ವರ್ಷಗಳಿಂದ ಉಡುಪಿಯ ಕಿದಿಯೂರು ವರ್ಣ ಲ್ಯಾಬ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚಗಷ್ಟೇ ಅವರು ಕಾಸರಗೋಡು ಜಿಲ್ಲೆಯ ಉಪ್ಪಳ ಬಳಿ ಸ್ವಂತ ಫೋಟೊಗ್ರಾಫಿ ಸ್ಟೂಡಿಯೋ ಅರಂಭಿಸಿದ್ದರು. ಉಡುಪಿಯಲ್ಲಿ ಎಲ್ಲರೊಂದಿಗೂ ಅನೋನ್ಯವಾಗಿದ್ದ ಸೂರ್ಯನಾರಯಣ ಅವರು ಸೂರ್ಯ ಎಂದೇ ಕರೆಯಲ್ಪಡುತ್ತಿದ್ದರು.


Spread the love
Share:

administrator

Leave a Reply

Your email address will not be published. Required fields are marked *