ಮೂರು ಸಶಸ್ತ್ರಪಡೆಗಳ ಏಕೀಕರಣಕ್ಕೆ ಕೇಂದ್ರದ ಹೆಜ್ಜೆ: ಏಕೀಕೃತ ಮಿಲಿಟರಿ ಕಮಾಂಡ್‌ಗೆ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಏಕೀಕೃತ ಮಿಲಿಟರಿ ಕಮಾಂಡ್ ಸಂಬಂಧಿಸಿದಂತೆ ಮೂರು ಸೇನೆಗಳಿಗೆ ಕೇಂದ್ರ ರಕ್ಷಣಾ ಸಚಿವಾಲಯವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಏಕೀಕೃತ ಮಿಲಿಟರಿ ಕಮಾಂಡ್ ಎಂದರೆ ದೇಶದ ಮೂರು ಪ್ರಮುಖ ರಕ್ಷಣಾ ಪಡೆಗಳು ಅಂದರೆ ಸೇನೆ, ನೌಕಾಪಡೆ ಹಾಗೂ ವಾಯುಪಡೆ ಒಂದೇ ನಾಯಕತ್ವದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದೆ.ಇದು ಯುದ್ಧದ ಸಂದರ್ಭದಲ್ಲಿ ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ವ್ಯವಸ್ಥೆಯಾಗಿದೆ.

ಸುಲಭವಾಗಿ ಹೇಳುವುದಾದರೆ, ಒಂದು ಪ್ರದೇಶದಲ್ಲಿ ಸೇನೆ, ನೌಕಾಪಡೆ ಮತ್ತು ವಾಯುಪಡೆಯೆಲ್ಲಾ ಕಾರ್ಯನಿರ್ವಹಿಸುತ್ತಿರುವಾಗ ಬೇತರೆ ಬೇರೆ ಕಮಾಂಡರ್ಗಳ ನಿರ್ಧಾರದಿಂದ ಗೊಂದಲ ಉಂಟಾಗಬಹುದು. ಆದರೆ ಏಕೀಕೃತ ಕಮಾಂಡ್ ವ್ಯವಸ್ಥೆಯಡಿಯಲ್ಲಿ ಒಬ್ಬರೇ ಅಧಿಕಾರಿಯು ಎಲ್ಲಾ ಪಡೆಗಳ ಕಾರ್ಯ ಚಟುವಟಿಕೆಗಳನ್ನು ನಿರ್ದೇಶಿಸುತ್ತಾರೆ.
ಇಂಟರ್-ಸರ್ವೀಸ್ ಆರ್ಗನೈಸೇಷನ್ (ಕಮಾಂಡ್, ನಿಯಂತ್ರಣ ಮತ್ತು ಶಿಸ್ತು) ಕಾಯ್ದೆ 2023 ರ ಅಡಿಯಲ್ಲಿ ರೂಪಿಸಲಾದ ಈ ನಿಯಮಗಳನ್ನು ಗೆಜೆಟ್ ಅಧಿಸೂಚನೆಯ ಮೂಲಕ ತಿಳಿಸಲಾಗಿದ್ದು, ಮೇ 27 ರಿಂದಲೇ ಜಾರಿಗೆ ಬಂದಿದೆ. ಭೂ ಸೇನೆ, ನೌಕಾಪಡೆ ಹಾಗೂ ವಾಯುಪಡೆಗಳಿಗಾಗಿ ಮಾರ್ಗಸೂಚಿ ಸಿದ್ಧವಿದೆ. ಇದರಿಂದಾಗಿ ಸಶಸ್ತ್ರಪಡೆಗಳ ನಡುವಿನ ಏಕತೆ ಮತ್ತಷ್ಟು ಗಟ್ಟಿಯಾಗಲಿದೆ.
2023 ರ ಮಳೆಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ್ದವು.ಆಗಸ್ಟ್ 15, 2023 ರಂದು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದವು ಮತ್ತು ಮೇ 08, 2024 ರ ಗೆಜೆಟ್ ಅಧಿಸೂಚನೆಯ ಪ್ರಕಾರ, ಕಾಯಿದೆಯು ಮೇ 10, 2024 ರಿಂದ ಜಾರಿಗೆ ಬಂದಿತ್ತು.
ಇದಕ್ಕೂ ಮುನ್ನ ಕುತ್ತಾರು ಮದನಿನಗರ ಮಸೀದಿಯಲ್ಲಿ ಪಾರ್ಥಿವ ಶರೀರವನ್ನು ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ಮಸೀದಿ ಬಳಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬೇರೆ ಜಿಲ್ಲೆಗಳ ಹೆಚ್ಚುವರಿ ಪೊಲೀಸರು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಈ ಕಾಯಿದೆಯು ISO ಗಳ ಕಮಾಂಡರ್‌ಗಳು ಮತ್ತು ಅಧಿಕಾರಿಗಳು ತಮ್ಮ ಅಡಿಯಲ್ಲಿ ಸೇವೆ ಸಲ್ಲಿಸುವ ಸೇವಾ ಸಿಬ್ಬಂದಿಯ ಮೇಲೆ ಆಜ್ಞೆ ಮತ್ತು ನಿಯಂತ್ರಣ ಸಾಧಿಸಲು ಅಧಿಕಾರ ನೀಡುತ್ತದೆ. ಸಂಸ್ಥೆಗಳಲ್ಲಿ ಶಿಸ್ತು ಮತ್ತು ಆಡಳಿತದ ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸುತ್ತದೆ. ಸಶಸ್ತ್ರ ಪಡೆಗಳ ಪ್ರತಿಯೊಂದು ಶಾಖೆಗೆ ಅನ್ವಯವಾಗುವ ವಿಶಿಷ್ಟ ಸೇವಾ ಪರಿಸ್ಥಿತಿಗಳನ್ನು ಬದಲಾಯಿಸದೆ ಇದನ್ನು ಸಾಧಿಸಲಾಗುತ್ತದೆ.
ಥಿಯೇಟರ್ ಕಮಾಂಡ್ ಎನ್ನುವುದು ಹೊಸ ಪರಿಕಲ್ಪನೆಯೇ?
ಭಾರತ ಈಗ ಥಿಯೇಟರ್ ಕಮಾಂಡ್ ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ, ಉದಾಹರಣೆಗೆ ಭಾರತದ ಪಶ್ಚಿಮ ಗಡಿಯಲ್ಲಿ (ಪಾಕಿಸ್ತಾನ ಸಮೀಪ) ವೆಸ್ಟರ್ನ್ ಥಿಯೇಟರ್ ಕಮಾಂಡ್ ಇದ್ದರೆ, ಆ ಭಾಗದ ಸೇನೆ, ನೌಕಾಪಡೆ , ಮತ್ತು ವಾಯುಪಡೆಗಳು ಒಬ್ಬರ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತವೆ.
ಥಿಯೇಟರ್ ಕಮಾಂಡ್ ಎಂಬುದು ಹೊಸ ಪರಿಕಲ್ಪನೆಯಲ್ಲ. ಅಮೆರಿಕ ಮತ್ತು ಚೀನಾ ಸೇರಿದಂತೆ ಹಲವು ಪ್ರಮುಖ ದೇಶಗಳಲ್ಲಿ ಈಗಾಗಲೇ ಥಿಯೇಟರ್ ಕಮಾಂಡ್ ಪರಿಕಲ್ಪನೆ ಕಾರ್ಯರೂಪಕ್ಕೆ ಬಂದಿದೆ. ಪಾಕಿಸ್ತಾನದಲ್ಲಿಯೂ ಇಂಥ ಪ್ರಯತ್ನಗಳು ಆರಂಭವಾಗಿವೆ.
ಭಾರತದಲ್ಲಿಯೂ ಕಾರ್ಗಿಲ್ ಸಂಘರ್ಷದ ನಂತರ ಥಿಯೇಟರ್ ಕಮಾಂಡ್ ಮಾದರಿಯಲ್ಲಿ ಸಶಸ್ತ್ರಪಡೆಗಳ ಪುನರ್ ಸಂಘಟನೆ ಬಗ್ಗೆ ಚರ್ಚೆ ಆರಂಭವಾಯಿತು. ಹಲವು ಹಂತಗಳ ಸಮಿತಿಗಳು ಈ ಮಾದರಿಯ ಸೇನಾ ಸಂಘಟನೆಗೆ ಶಿಫಾರಸು ಮಾಡಿದ್ದವು.