‘ಫೈನಲ್ ಡೆಸ್ಟಿನೇಶನ್’ ಸಿನಿಮಾ ಪ್ರದರ್ಶನದ ವೇಳೆ ಛಾವಣಿ ಕುಸಿತ

ಅರ್ಜೆಂಟೀನಾ: ಹಾಲಿವುಡ್ನ ಸಾಹಸಮಯ ಸಿನೆಮಾ ಫೈನಲ್ ಡೆಸ್ಟಿನೇಶನ್ನ 6ನೇ ಭಾಗದ ಪ್ರದರ್ಶನದ ವೇಳೆ ಅರ್ಜೆಂಟೀನಾದ ಚಿತ್ರಮಂದಿರವೊಂದರಲ್ಲಿ ಛಾವಣಿ ಕುಸಿದಿದ್ದು, ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.
ಅಪಘಾತದಂತಹ ದೃಶ್ಯಗಳೇ ಹೆಚ್ಚಿರುವ ಈ ಸಿನೆಮಾ ಪ್ರದರ್ಶನದ ವೇಳೆಯ ಅಪಘಾತ ಸಂಭವಿಸಿದ್ದು, ನೆಟ್ಟಿಗರು ಈ ಬಗ್ಗೆ ಭಾರೀ ಚರ್ಚೆ ನಡೆಸುತ್ತಿದ್ದಾರೆ.
ಗಾಯಗೊಂಡ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.