ವಿಮಾನದಲ್ಲಿ ಅಲರ್ಜಿಗೆ ಶರಣಾದ ಪ್ರಯಾಣಿಕನ ವಿಶೇಷ ವಿನಂತಿ—ಕಾಫಿ ತಯಾರಿಸಬೇಡಿ!

ವಿಮಾನದಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಬೇಕು ಎನ್ನುವ ಆಸೆ ಎಲ್ಲರಲ್ಲಿಯೂ ಇರುವುದು ಸಹಜ. ವಿಮಾನದಲ್ಲಿ ಪ್ರಯಾಣ ಮಾಡುವುದು ಹೇಗಿರುತ್ತದೆ ಎಂಬ ಕುತೂಹಲವು ಹಲವರಲ್ಲಿದೆ. ಸಾಮಾನ್ಯವಾಗಿ ಪ್ರಯಾಣಿಕರಿಗೆ ವಿಮಾನದಲ್ಲಿ ಊಟ, ಟೀ, ಕಾಫಿ ಅವರು ಕೇಳಿರುವ, ಲಭ್ಯವಿರುವ ಆಹಾರ ಪದಾರ್ಥ, ಪಾನೀಯಗಳನ್ನು ಕೊಡುವ ನಿಮಯವಿದೆ.

ಆದರೆ ಇಲ್ಲೊಬ್ಬ ಪ್ರಯಾಣಿಕ ತನಗೆ ಅಲರ್ಜಿ ಆಗುವ ತಿಂಡಿ, ತಿನಿಸುಗಳನ್ನು ಪಟ್ಟಿ ಮಾಡಿ ಅದನ್ನು ಮಾಡದಂತೆ ಕ್ಯಾಬಿನ್ ಸಿಬ್ಬಂದಿಗೆ ತಿಳಿಸಿರುವ ಘಟನೆ ಇದೀಗ ಸಖತ್ ವೈರಲ್ ಆಗುತ್ತಿದೆ. ಹಾಗಾದ್ರೆ ಆ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.
ಪ್ರಯಾಣಿಕರು ತಮ್ಮ ವಿಮಾನ ಪ್ರಯಾಣವನ್ನು ಒಂದು ಗುಟುಕು ಕಾಫಿಯೊಂದಿಗೆ ಆನಂದಿಸಲು ಬಯಸುತ್ತಾರೆ, ಆದರೆ ಈ ವ್ಯಕ್ತಿ ಕ್ಯಾಬಿನ್ ಸಿಬ್ಬಂದಿಗೆ ವಿಮಾನದಲ್ಲಿ ಕಾಫಿ ತಯಾರಿಸದಂತೆ ಕೇಳಿಕೊಂಡಿರುವುದು ಎಲ್ಲರ ಗಮನ ಸೆಳೆದಿದೆ.
ಬಳಕೆದಾರ ಸೆರ್ಗಿಯೊ ರೊಡ್ರಿಗಸ್ ಅವರು X ನಲ್ಲಿ ಪೋಸ್ಟ್ ಮಾಡಿದ ಈ ಫೋಸ್ಟ್ ‘ವಿಮಾನ ಅಲರ್ಜಿ ಪಟ್ಟಿ’ ಎಂಬ ಕ್ಯಾಪ್ಶನ್ ಹೊಂದಿದೆ. ಕಾಫಿ, ಗೋಡಂಬಿ, ಸುಗಂಧ ದ್ರವ್ಯಗಳು ಮತ್ತು ವಿಮಾನ ಇಂಧನವೂ ಸೇರಿದಂತೆ ಈ ಪತ್ರವು ಪ್ರಯಾಣಿಕನು ಅಲರ್ಜಿ ಹೊಂದಿರುವ ಆಹಾರ ಮತ್ತು ಪರಿಸ್ಥಿತಿಗಳನ್ನು ತಿಳಿಸುತ್ತದೆ.
‘ನನಗೆ ಕಾಫಿಯ ವಾಸನೆ ತುಂಬಾ ಅಲರ್ಜಿಯಾಗಿದೆ ಮತ್ತು ನೀವು ಕಾಫಿ ತಯಾರಿಸುವುದನ್ನು ನಿಲ್ಲಿಸಿದರೆ ನಾನು ಕೃತಜ್ಞನಾಗಿದ್ದೇನೆ. ಏಕೆಂದರೆ ಅದರ ವಾಸನೆ ಕೂಡ ನನ್ನ ಉಸಿರಾಟವನ್ನು ನಿಲ್ಲಿಸಬಹುದು’ ಎನ್ನುವ ಸಾಲುಗಳು ಹೆಚ್ಚು ಗಮನ ಸೆಳೆದಿದೆ.
ದಯವಿಟ್ಟು ಸುಗಂಧ ದ್ರವ್ಯ ಬೇಡ
ಕಲೋನ್, ಸುಗಂಧ ದ್ರವ್ಯ ಅಥವಾ ಪರಿಮಳಯುಕ್ತ ಲೋಷನ್‌ಗಳಂತಹ ಪರಿಮಳಯುಕ್ತ ಉತ್ಪನ್ನಗಳನ್ನು ಧರಿಸುವುದರಿಂದ ದೂರವಿರಲು ಸಹ ಪ್ರಯಾಣಿಕರನ್ನು ಈ ಪತ್ರವು ವಿನಂತಿಸಿದೆ. ಅಷ್ಟೇ ಅಲ್ಲ. ಆ ವ್ಯಕ್ತಿ ತಾನು ಔಷಧಿ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಸಾಕಷ್ಟು ನೀರು ಬೇಕು ಎಂದು ಕೇಳಿಕೊಂಡಿದ್ದಾನೆ.
‘ನಾನು ತೆಗೆದುಕೊಳ್ಳಬೇಕಾದ ಹಲವಾರು ಔಷಧಿಗಳಿವೆ ಹಾಗಾಗಿ ನಾನು ಬಹಳಷ್ಟು ನೀರು ಕುಡಿಯುತ್ತೇನೆ. ವಿಮಾನದ ಆರಂಭದಿಂದಲೇ ನೀವು ಒಂದು ದೊಡ್ಡ ಬಾಟಲಿಯನ್ನು ಕೊಟ್ಟರೆ ಬಹಳ ಕುಷಿಯಾಗುತ್ತದೆ ಈ ರೀತಿಯಾಗಿ ನಾನು ನಿರಂತರವಾಗಿ ನಿಮ್ಮಿಂದ ಹೆಚ್ಚಿನ ನೀರನ್ನು ಕೇಳಬೇಕಾಗಿಲ್ಲ’ ಎಂದು ಪತ್ರದಲ್ಲಿ ಬರೆದಿದ್ದಾರೆ.
‘ಅರ್ಥಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳು’
‘ವಿಮಾನ ಪ್ರಯಾಣವನ್ನು ನನಗೆ ಸಾಧ್ಯವಾದಷ್ಟು ಆನಂದದಾಯಕವಾಗಿಸಲು ಪ್ರಯತ್ನಿಸಿದ್ದಕ್ಕಾಗಿ ನಿಮ್ಮ ತಾಳ್ಮೆ ಮತ್ತು ತಿಳುವಳಿಕೆಗೆ ಧನ್ಯವಾದಗಳು’ ಎಂದು ಸೌಮ್ಯವಾದ ಕೃತಜ್ಞತೆಯೊಂದಿಗೆ ಆ ಪತ್ರವು ಕೊನೆಗೊಂಡಿದೆ.
ಈ ಪೋಸ್ಟ್ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.
