ಬಾಂಗ್ಲಾದೇಶ ಸರ್ಕಾರ ಅಮೆರಿಕದ ಹಿಡಿತದಲ್ಲಿ: ಯೂನಸ್ ವಿರುದ್ಧ ಹಸೀನಾ ವಾಗ್ದಾಳಿ

ಢಾಕಾ: ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಬಾಂಗ್ಲಾದೇಶವನ್ನ ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ ಅಂತ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಗಂಭೀರ ಆರೋಪ ಮಾಡಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವಾಮಿ ಲೀಗ್ ಪಕ್ಷದ ಮೇಲಿನ ನಿಷೇಧವನ್ನ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಇದು ಸಂವಿಧಾನ ಬಾಹಿರ ಎಂದು ಹೇಳಿದ್ದಾರೆ.
ಮುಂದುವರಿದು… ಸರ್ಕಾರದ ಮುಖ್ಯಸ್ಥ ಯೂನಸ್ ಉಗ್ರಗಾಮಿ ಗುಂಪುಗಳ ಸಹಾಯದಿಂದ ಬಾಂಗ್ಲಾದೇಶ ಸರ್ಕಾರವನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ನಮ್ಮ ಸರ್ಕಾರ ಅಂದು ಭಯೋತ್ಪಾದಕರ ನಿಯಂತ್ರಣಕ್ಕೆ ಹೋರಾಡಿತ್ತು. ಆದರಿಂದು ಭಯೋತ್ಪಾದಕರಿಗೆ ಸರ್ಕಾರದ ನಿಯಂತ್ರಣವನ್ನ ಯೂನಸ್ ಆಡಳಿತ ನೀಡಿದೆ. ಈ ಹಿಂದೆ ನನ್ನ ತಂದೆ ಸೇಂಟ್ ಮಾರ್ಟಿನ್ ದ್ವೀಪಕ್ಕಾಗಿ ಅಮೆರಿಕದ ಡಿಮ್ಯಾಂಡ್ಗಳನ್ನ ಒಪ್ಪಿರಲಿಲ್ಲ. ಅದಕ್ಕಾಗಿ ತಮ್ಮ ಪ್ರಾಣವನ್ನೇ ಬಿಟ್ಟರು ಹೊರತು ಅಧಿಕಾರಕ್ಕಾಗಿ ದೇಶವನ್ನು ಮಾರುವ ಬಗ್ಗೆ ಯೋಚಿಸಿರಲಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.