Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮೇ 26ರಿಂದ ಹೊಸ ನಿಯಮ ಜಾರಿ: ಆಸ್ತಿ ನೋಂದಣಿಗೆ ಇ-ಸಹಿ ಕಡ್ಡಾಯ!

Spread the love

ಮೈಸೂರು : ಮರೆಯದಿರಿ.. ಇದು ಕಡ್ಡಾಯ! ನಾಳೆಯಿಂದಲೇ ಹೊಸ ನಿಯಮ ಜಾರಿಯಾಗಲಿದೆ. ಇನ್ಮುಂದೆ ಆಸ್ತಿ ಇ-ಸಹಿ ಬೇಕೇಬೇಕು. ಹೌದು, ಮೇ 26, 2025ರಿಂದ ಆರಂಭವಾಗುವಂತೆ, ಕರ್ನಾಟಕದಲ್ಲಿ ಆಸ್ತಿ ಹಾಗೂ ಇತರ ದಾಖಲೆಗಳ ನೋಂದಣಿಗೆ ಇ-ಸಹಿ ಕಡ್ಡಾಯವಾಗಲಿದೆ.
ಸರ್ಕಾರದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಆಸ್ತಿ ನೋಂದಣಿ ಮತ್ತು ಸ್ಟಾಂಪ್ ಡ್ಯುಟಿ ವ್ಯವಸ್ಥೆಯಲ್ಲಿ ಬಹುಮುಖ್ಯವಾದ ಹಾಗೂ ತಂತ್ರಜ್ಞಾನಾಧಾರಿತ ರೀಫಾರ್ಮ್ ಜಾರಿಗೊಳಿಸಲಾಗಿದೆ.

ಈ ಬೆಳವಣಿಗೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನುಯನ್ನು ತಿಳಿಯಲು ಮುಂದೆ ಓದಿ.

ಕಂದಾಯ ಇಲಾಖೆ ಇದೀಗ ಕರ್ನಾಟಕ ಸ್ಟಾಂಪು ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ್ದು,ಈ ಕ್ರಮದ ಮೂಲಕ ರಾಜ್ಯದಲ್ಲಿ ಆಸ್ತಿ ಹಾಗೂ ಇತರ ದಾಖಲೆಗಳ ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ನಡೆಯಲಿವೆ. ಕಾನೂನಿನ ಅನುಸಾರ ಹೊಸ ನಿಯಮಗಳು ಜಾರಿಯಾಗುತ್ತವೆ.

ನೀವು ಯಾವುದೇ ಆಸ್ತಿ ಅಥವಾ ದಾಖಲೆಗಳ ನೋಂದಣಿ ಪ್ರಕ್ರಿಯೆಗಳು ಇನ್ಮುಂದೆ ಡಿಜಿಟಲೀಕರಣವಾಗಲಿದೆ. ಸೇಲ್ ಡೀಡ್, ಗಿಫ್ಟ್ ಡೀಡ್, ಲೀಸ್ ಡೀಡ್ ಸೇರಿದಂತೆ ಎಲ್ಲ ರೀತಿಯ ಡೀಡ್‌ಗಳ ಪ್ರಕ್ರಿಯೆ ಆರಂಭದಿಂದ ಅಂತ್ಯದವರೆಗೂ ಆನ್‌ಲೈನ್ ಮೂಲಕ ನಡೆಯುತ್ತದೆ. ನೀವು ಈ ಕಾಯ್ದೆಯಡಿ, ಡಿಜಿಟಲ್ ಡಾಕ್ಯುಮೆಂಟ್ ತಯಾರಿಕೆ, ಇ-ಸಹಿ, ಇ-ಸ್ಟಾಂಪಿಂಗ್, ಇ-ಚಲನ್ ಮೂಲಕ ಪಾವತಿ ಸೇರಿದಂತೆ ಎಲ್ಲಾ ಹಂತಗಳು ತಂತ್ರಜ್ಞಾನ ಮೂಲಕ ನಿಯಂತ್ರಿತವಾಗುತ್ತದೆ. ಇದರಿಂದ ಹೆಚ್ಚಿನ ಭದ್ರತೆ ಹಾಗೂ ಸುರಕ್ಷಿತತರಯನ್ನು ಕಾಪಡಿಕೊಳ್ಳಲು ಹೆಚ್ಚಿನ ಸಹಾಯಕವಾಗುತ್ತದೆ.

ಡಿಜಿಟಲ್ ಇ-ಸ್ಟಾಂಪುಗಳು ಕಡ್ಡಾಯವಾಗುತ್ತಿದೆ.ಸ್ಟಾಂಪುಗಳ ದುರುಪಯೋಗ ಮತ್ತು ಸೋರಿಕೆ ತಡೆಯಲು ಅನುಕೂಲವಾಗಲಿದೆ.ಬ್ಯಾಂಕ್ ಚಲನ್‌ಗಳ ಮೂಲಕ ಸ್ಟಾಂಪುಗಳ ದುರುಪಯೋಗ ತಡೆಯಲು ಇದು ಸಹಕಾರಿಯಾಗಲಿದೆ.ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬೆಂಬಲ ಕೂಡ ಇರುತ್ತದೆ. ವಿದ್ಯನ್ಮಾನ ವಿಧಾನಗಳ ಮೂಲಕ ಸ್ಟಾಂಪ್ ಶುಲ್ಕ ಪಾವತಿಸಬೇಕಾಗುತ್ತಿದೆ.

ಸ್ಟಾಂಪ್ ಕಾಯ್ದೆ ತಿದ್ದುಪಡಿ: ಇ-ಸಹಿ ಮತ್ತು ಡಿಜಿಟಲ್ ಸ್ಟಾಂಪು ಕಡ್ಡಾಯವಾಗಿದೆ. ಕಂದಾಯ ಇಲಾಖೆ ಈಗ ಕನ್ನಡ ಸ್ಟಾಂಪು ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದು, ಈ ನಿಟ್ಟಿನಲ್ಲಿ ಮೇ 26, 2025ರಿಂದ ಇದು ಜಾರಿಗೆ ಬರುತ್ತದೆ.

ಮುಖ್ಯ ನಿಯಮಗಳು

ಎಲ್ಲಾ ನೋಂದಣಿ ಪ್ರಕ್ರಿಯೆಗಳು ಡಿಜಿಟಲಾಗಿ ನಡೆಯುತ್ತವೆ

ಸೇಲ್ ಡೀಡ್, ಗಿಫ್ಟ್ ಡೀಡ್, ಲೀಸ್ ಡೀಡ್ ಸೇರಿದಂತೆ ಎಲ್ಲಾ ಮಾದರಿಯ ಡೀಡ್‌ಗಳು ಡಿಜಿಟಲ್ ಪ್ರಕ್ರಿಯೆ ನಡೆಸಲಾಗುತ್ತದೆ.

ಡಿಜಿಟಲ್ ಇ-ಸ್ಟಾಂಪುಗಳು ಕಡ್ಡಾಯ

ಸ್ಟಾಂಪು ಪೇಪರ್‌ಗಳ ಬದಲಾಗಿ ಇ-ಸ್ಟಾಂಪ್‌ಗಳು ಬಳಸಬೇಕು.
ಸ್ಟಾಂಪುಗಳ ದುರುಪಯೋಗ,ನಕಲಿ ಮತ್ತು ಲೀಕೆಗಳನ್ನು ತಡೆಯಲು ಇದು ಪರಿಣಾಮಕಾರಿಯಾಗುತ್ತದೆ.
ಬ್ಯಾಂಕ್ ಚಲನ್‌ಗಳ ಮೂಲಕ ಮಾತ್ರ ಸ್ಟಾಂಪ್ ಶುಲ್ಕ ಪಾವತಿಸಬಹುದಾಗಿದೆ.
ವಿದ್ಯುನ್ಮಾನ ಸಹಿಗೆ ಕಾನೂನಾತ್ಮಕ ಮಾನ್ಯತೆ ಕೂಡ ಇದೆ.
ಇ-ಸಹಿ (e-signature) ಅಥವಾ ಡಿಜಿಟಲ್ ಸಹಿಗೆ ಈಗ ಸಂಪೂರ್ಣ ಕಾನೂನಾತ್ಮಕ ಬೆಂಬಲವನ್ನು ನೀಡಲಾಗಿದೆ.
ಇದು ಆಧಾರ್ ಆಧಾರಿತ ಸಾಫ್ಟ್‌ವೇರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತದೆ.
ಈ ನಿರ್ಧಾರದ ಉದ್ದೇಶಗಳು ಯಾವುವು..?

ದಾಖಲಾತಿಗಳ ಸುರಕ್ಷತೆ ಮತ್ತು ನಿಖರತೆ ಹೆಚ್ಚಿರುತ್ತದೆ.
ಸಾರ್ವಜನಿಕ ಸೇವೆಗಳಲ್ಲಿ ಪಾರದರ್ಶಕತೆ ಮತ್ತು ಸಮಯದ ಉಳಿತಾಯ ಕೂಡ ಹೆಚ್ಚಾಗಿರುತ್ತದೆ.
ಭೂದಾಖಲೆಗಳಲ್ಲಿ ಸುಧಾರಣೆಯೊಂದಿಗೆ ಆಸ್ತಿ ವಹಿವಾಟು ಪ್ರಕ್ರಿಯೆಗಳು ವೇಗಗೊಳಿಸಿದೆ.
ಕಾನೂನಾತ್ಮಕ ಭದ್ರತೆ ಮತ್ತು ಡಿಜಿಟಲ್ ಆಡಳಿತವನ್ನು ಬಲಪಡಿಸುತ್ತದೆ.
ಡಿಜಿಟಲ್ ಸಹಿಗೆ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ

ಇ-ಸಹಿಯು ಆಧಾರ್ ಆಧಾರಿತವಾಗಿದೆ. ಅದು ಜಿಲ್ಲಾಧಿಕಾರಿ ಅಥವಾ ಪ್ರಾಧಿಕಾರದ ಅಧಿಕೃತ ಸಹಿಯನ್ನು ಲಿಂಕ್ ಮಾಡಿಕೊಳ್ಳಲಗಿದೆ.
ಸಹಿಯು ಅಸಲಿ ಎಂಬುದನ್ನು ಖಚಿತಪಡಿಕೊಳ್ಳಬಹುದು.
ಬಯೋಮೆಟ್ರಿಕ್ ದೃಢೀಕರಣ ( ಕೈ ಬೆರಳು ಗುರುತು, ಕಣ್ಣಿನ ಗುರುತು ಅಗತ್ಯವಿರುತ್ತದೆ)
ದೃಢೀಕರಣವಾದ ಬಳಿಕ ಮಾತ್ರ ಸಹಿ ಜಾರಿಗೆ ಬರುತ್ತದೆ.
ಡಿಜಿಟಲ್‌ ಸಹಿಯಲ್ಲಿ ಬಯೊಮೆಟ್ರಿಕ್‌ ಇರುವುದರಿಂದ ಹೆಚ್ಚಿನ ಸುರಕ್ಷಿತವಾಗಿರುತ್ತದೆ ಹಾಗೂ ಭದ್ರತೆ ಕೂಡ ದೂರೆಯುತ್ತಿದೆ.

ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಡಿಜಿಟಲ್ ಸಹಿಗಳ ಅವಶ್ಯಕತೆಯಿಂದಾಗಿ ಹೆಚ್ಚು ಸುರಕ್ಷಿತಯ ಜೊತೆಗೆ ಹೆಚ್ಚಿನ ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತದೆ.ಸರ್ಕಾರಿ ಸೇವೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿಯಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ.


Spread the love
Share:

administrator

Leave a Reply

Your email address will not be published. Required fields are marked *