ಮದ್ಯಪಾನ: ಯಾವ ಮಟ್ಟಕ್ಕೆ ಸುರಕ್ಷಿತ? ಇಷ್ಟಕ್ಕಿಂತ ಹೆಚ್ಚು ಕುಡಿದರೆ ಅಪಾಯ ಖಚಿತ

ಇತ್ತೀಚಿನ ದಿನಗಳಲ್ಲಿ, ಪಾರ್ಟಿಗಳಲ್ಲಿ ಅಥವಾ ಯಾವುದೇ ಇತರ ಸಮಾರಂಭಗಳಲ್ಲಿ ಮದ್ಯ ಸೇವನೆ ಇದ್ದೇ ಇರುತ್ತದೆ. ಜನರು ತಿಂಗಳಿಗೊಮ್ಮೆ ಅಥವಾ ವಿಶೇಷ ದಿನದಂದು ಕಚೇರಿ ಕೆಲಸದಿಂದ ರಜೆ ತೆಗೆದುಕೊಂಡು ಪಾರ್ಟಿ ಮಾಡುತ್ತಾರೆ, ಆ ಸಮಯದಲ್ಲಿ ಹೆಚ್ಚು ಮದ್ಯ ಸೇವಿಸುತ್ತಾರೆ.
ಒಬ್ಬ ವ್ಯಕ್ತಿ ತನ್ನ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳಲು ಎಷ್ಟು ಮದ್ಯ ಸೇವಿಸಬೇಕು ಅಂತ ನಿಮ್ಗೆ ಗೊತ್ತೆ..? ಬನ್ನಿ ತಿಳಿಯೋಣ..
ಮದ್ಯದ ಮಿತಿಗಳ ವಿಷಯಕ್ಕೆ ಬಂದಾಗ, ವಿವಿಧ ದೇಶಗಳು ವಿಭಿನ್ನ ಮಾನದಂಡಗಳನ್ನು ಹೊಂದಿವೆ. ಇದರಲ್ಲಿ ನೀವು ಒಂದು ಸಮಯದಲ್ಲಿ ಎಷ್ಟು ಮದ್ಯ ಸೇವಿಸಬಹುದು ಎಂಬುದರ ಬಗ್ಗೆ ಜಾಗರೂಕರಾಗಿರಬೇಕು. ಉದಾಹರಣೆಗೆ, ಅಮೆರಿಕಾದಲ್ಲಿ, ಮಹಿಳೆಯರಿಗೆ ದಿನಕ್ಕೆ ಗರಿಷ್ಠ ಒಂದು ಪೆಗ್ ಇಲ್ಲವೇ ಬಿಯರ್ ಬಾಟಲಿ ಮತ್ತು ಪುರುಷರಿಗೆ ದಿನಕ್ಕೆ 2 ಪೆಗ್ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಈ ನಿಯಮಗಳನ್ನು ಅಮೆರಿಕದ ವಿವಿಧ ಇಲಾಖೆಗಳು ನಿಗದಿಪಡಿಸಿವೆ.
ಕೇವಲ 2 ಪ್ರತಿಶತದಷ್ಟು ಜನರು ಮಾತ್ರ ಇದನ್ನು ಅನುಸರಿಸುತ್ತಾರೆ. ಅಂತಹ ಜನರು ಮದ್ಯದ ವ್ಯಸನಿಯಾಗಿರುವುದಿಲ್ಲ ಎಂದು ಅಧ್ಯಯನಗಳು ತೋರಿಸುತ್ತವೆ. ಇತರರು ಈ ಮಿತಿಗಿಂತ ಹೆಚ್ಚು ಕುಡಿಯುತ್ತಾರೆ. ಕೆಲವರು ತುಂಬಾ ಕುಡಿಯುತ್ತಾರೆ, ಇನ್ನೂ ಕೆಲವರು ಕುಡಿಯುವುದನ್ನೇ ಜೀವನ ಮಾಡಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಮಹಿಳೆಯರು ಒಂದೇ ಬಾರಿಗೆ ನಾಲ್ಕು ಪೆಗ್ ಇಲ್ಲವೇ 4 ಬಿಯರ್ ಬಾಟಲ್ ಮತ್ತು ಪುರುಷರು ಐದು ಅಥವಾ ಅದಕ್ಕಿಂತ ಹೆಚ್ಚಿನ ಮದ್ಯ ಸೇವಿಸಿದರೆ ಅವರು ಅತಿ ಕುಡಿತದ ವರ್ಗಕ್ಕೆ ಸೇರುತ್ತಾರೆ. ಇದರರ್ಥ ಇಷ್ಟೊಂದು ಮದ್ಯಪಾನ ಮಾಡುವುದು ಎಂದರೆ ದೇಹಕ್ಕೆ ಅಪಾಯಕಾರಿ.
ಮದ್ಯಪಾನ ನಮ್ಮ ದೇಹಕ್ಕೆ ಹಾನಿಕಾರಕ. ನೀವು ಸ್ವಲ್ಪ ಕುಡಿದರೂ ಅಥವಾ ಹೆಚ್ಚಾಗಿ ಕುಡಿದರೂ. ಇದು ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ಅದಕ್ಕೂ ಬೇರೆ ಬೇರೆ ಕಾರಣಗಳಿವೆ. ನಿಮ್ಮ ವಯಸ್ಸು ಎಷ್ಟು, ನೀವು ಎಷ್ಟು ಮದ್ಯಪಾನ ಮಾಡುತ್ತೀರಿ, ಯಾವ ವಯಸ್ಸಿನಲ್ಲಿ ಕುಡಿಯಲು ಪ್ರಾರಂಭಿಸಿದ್ದೀರಿ ಎಂಬುವುದು ಮುಖ್ಯವಾಗುತ್ತದೆ. ಆದಷ್ಟು ಮದ್ಯಪಾನ ಸೇವನೆಯನ್ನು ಬಿಟ್ಟು ಬಿಡಿ.