ಡ್ರೋನ್ ಮೂಲಕ ಅಂಚೆ ವಿತರಣೆಗೆ ನೂತನ ಅಧ್ಯಾಯ: ಕರ್ಜತ್ದಿಂದ ಮಾಥೇರಾನ್ಗೆ 20 ನಿಮಿಷದಲ್ಲೇ ಅಂಚೆ ಚೀಲ ಸಾಗಣೆ

ಮುಂಬೈ: ಡ್ರೋನ್ ತಂತ್ರಜ್ಞಾನದಲ್ಲಿ ಭಾರತ ದಿನದಿಂದ ದಿನಕ್ಕೆ ಹೊಸ ಹೆಜ್ಜೆ ಇಡುತ್ತಿದ್ದು,ಇದೀಗ ಡ್ರೋನ್ ಬಳಸಿಕೊಂಡು ಮಹಾರಾಷ್ಟ್ರದ ಅಂಚೆ ಹೊಸ ಇತಿಹಾಸ ಬರೆದಿದೆ. ಹೌದು, ಡ್ರೋನ್ ಮೂಲಕ ಅಂಚೆ ಚೀಲವನ್ನು ಮಹಾರಾಷ್ಟ್ರದ ಅಂಚೆ ವೃತ್ತ ಯಶಸ್ವಿಯಾಗಿ ಸಾಗಿಸಿದೆ.
ಮೇ 16ರಂದು ಮಹಾರಾಷ್ಟ್ರದ ಕರ್ಜತ್ನಲ್ಲಿನ ಅಂಚೆ ಕಚೇರಿಯಿಂದ ಮಾಥೇರಾನ್ಗೆ 9.35 ಕೆ.ಜಿ. ತೂಕದ ಅಂಚೆ ಚೀಲವನ್ನು ರವಾನಿಸಲಾಗಿದೆ.
ಕರ್ಜತ್ನಿಂದ ಮಾಥೇರಾನ್ಗೆ 23 ಕಿಲೋ ಮೀಟರ್ಗಳ ಅಂತರವಿದ್ದು, ಈ ದಾರಿ ಸಾಗುವ ಮಾರ್ಗ ಕಡಿದಾಡ ಗುಡ್ಡಗಾಡುಗಳಿಂದ ಕೂಡಿದೆ. ಅಲ್ಲದೇ ಇದು ಭಾರೀ ಮಳೆಯಾಗುವ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ರಸ್ತೆ ಮಾರ್ಗವಿಲ್ಲದ ಕಾರಣ ಈ ಪ್ರದೇಶಕ್ಕೆ ಅಂಚೆಯನ್ನು ತಲುಪಿಸಲು ಬರೋಬ್ಬರಿ 1.5 ಗಂಟೆ ತಗಲುತ್ತಿತ್ತು. ಆದರೆ ಡ್ರೋನ್ ಮೂಲ ಕೇವಲ 20 ನಿಮಿಷಗಳಲ್ಲಿ ಅಂಚೆ ಚೀಲವನ್ನು ರವಾನಿಸಲಾಗಿದೆ. ಅದು ಕೂಡ ಮಳೆಯ ನಡುವೆಯೇ ಡ್ರೋನ್ ಅತಿವೇಗವಾಗಿ ತಲುಪಿರುವುದು ಸಂತಸದ ವಿಚಾರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.