Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗ್ರಾಹಕರಿಂದ ಒತ್ತಾಯಪೂರ್ವಕ ಟಿಪ್ಸ್‌ ಬೇಡಿಕೆ: Uber ಸೇರಿದಂತೆ ಕ್ಯಾಬ್‌ ಸೇವೆಗಳ ಪರಿಶೀಲನೆ ಆರಂಭ

Spread the love

ನವದೆಹಲಿ: ತ್ವರಿತ ಸೇವೆ ಒದಗಿಸಲು ಗ್ರಾಹಕರಿಂದ ಮುಂಗಡವಾಗಿ ಟಿಪ್ಸ್‌ ಪಡೆಯಲು ಪ್ರಯತ್ನಿಸುತ್ತಿರುವ ಕ್ಯಾಬ್ ಅಗ್ರಿಗೇಟರ್​​ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಸಚಿವ ಪ್ರಲ್ಹಾದ ಜೋಶಿ  ಎಚ್ಚರಿಸಿದ್ದಾರೆ. ಟ್ಯಾಕ್ಸಿ ಸೇವೆಗೆ ಗ್ರಾಹಕರಿಂದ ಬುಕ್‌ ಮಾಡುವಾಗಲೇ ಟಿಪ್ಸ್‌ ರೂಪದಲ್ಲಿ ಹೆಚ್ಚುವರಿ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಈ ಸಂಬಂಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದೆ. ಈ ಪ್ರಾಧಿಕಾರವು ಪ್ರಮುಖ ಕ್ಯಾಬ್‌ ಸರ್ವೀಸ್‌ Uber ಗೆ ನೋಟಿಸ್‌ ಜಾರಿ ಮಾಡಿದೆ ಎಂದು ಜೋಶಿ ತಿಳಿಸಿದ್ದಾರೆ.

ಟ್ಯಾಕ್ಸಿ ಸೇವೆ ಒದಗಿಸಲು Uber ನಂತಹ ಸೇವಾ ಸಂಸ್ಥೆಗಳು ಗ್ರಾಹಕರಿಂದ ಮುಂಚಿತವಾಗಿಯೇ ಒತ್ತಾಯದಿಂದ ಟಿಪ್ಸ್‌ ಪಡೆಯುತ್ತಿರುವುದು ಕಳವಳಕಾರಿ ಬೆಳವಣಿಗೆ. ಟಿಪ್ಸ್‌ ಎನ್ನುವುದು ಗ್ರಾಹಕರು ಉತ್ತಮ ಸೇವೆಗೆ ಮೆಚ್ಚಿ ಕೊಡುವಂಥದ್ದು. ಇದನ್ನು ಯಾರೂ ಒತ್ತಾಯದಿಂದ ಪಡೆಯಬಾರದು ಎಂದು ಸಚಿವ ಪ್ರಲ್ಹಾದ ಜೋಶಿ ಅವರು ಎಕ್ಸ್​​ ಪೋಸ್ಟ್​​​ನಲ್ಲಿ ಸೂಚಿಸಿದ್ದಾರೆ.

ಕ್ಯಾಬ್‌ನವರು ಗ್ರಾಹಕರಿಗೆ ಸೇವೆ ಕಲ್ಪಿಸುವ ಮೊದಲೇ ಟಿಪ್ಸ್‌ ಪಡೆಯುವುದು ದಬ್ಬಾಳಿಕೆಯಾಗುತ್ತದೆ. ಗ್ರಾಹಕರ ಶೋಷಣೆಯಾಗುತ್ತದೆ. ಹಾಗಾಗಿ ಈ ಮುಂಗಡ ಟಿಪ್ಸ್‌ ಬಗ್ಗೆ CCPAಗೆ ಸೂಚನೆ ನೀಡಿದ್ದೆ. CCPA ತಪಾಸಣೆ ವೇಳೆ Uber ಸೇವೆಗೆ ಮುಂಗಡ ಟಿಪ್ಸ್‌ ಪಡೆಯುತ್ತಿರುವುದು ಸಾಬೀತಾದ್ದರಿಂದ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಲಾಗಿದೆ ಎಂದು ತಿಳಿಸಿದ್ದಾರೆ.

ಸಚಿವರು ತಮ್ಮ ಎಕ್ಸ್ ಪೋಸ್ಟ್​​​ನಲ್ಲಿ ಸ್ಕ್ರೀನ್​​ಶಾಟ್​ವೊಂದನ್ನೂ ಲಗತ್ತಿಸಿದ್ದಾರೆ. ಗ್ರಾಹಕರು ಕ್ಯಾಬ್ ಬುಕಿಂಗ್ ಮಾಡುವಾಗ ಪ್ರತ್ಯಕ್ಷವಾಗುವ ಟಿಪ್ಸ್​ನ ಚಿತ್ರ ಅದರಲ್ಲಿದೆ.

‘ಬೇಗ ಪಿಕಪ್ ಬೇಕೆಂದರೆ ಟಿಪ್ ಸೇರಿಸಿ. ನೀವು ಟಿಪ್ ಸೇರಿಸಿದರೆ ಈ ರೈಡ್​​ಗೆ ಡ್ರೈವರ್ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಟಿಪ್​​ನ ಪೂರ್ಣ ಹಣವು ಡ್ರೈವರ್​​ಗೆ ಸಂದಾಯವಾಗುತ್ತದೆ. ನೀವು ಈಗ ಟಿಪ್ ಸೇರಿಸಿದರೆ ಅದನ್ನು ನಂತರ ಬದಲಿಸಲು ಆಗುವುದಿಲ್ಲ’ ಎಂದು ಆ ಟಿಪ್ ಮೆಸೇಜ್​​ನಲ್ಲಿ ಬರೆಯಲಾಗಿದೆ.

ಊಬರ್ ಮಾತ್ರವಲ್ಲ ಇತರ ಕ್ಯಾಬ್ ಅಗ್ರಿಗೇಟರ್​​ಗಳೂ ಕೂಡ ಈ ಫೀಚರ್ ಅನ್ನು ಹೊಂದಿವೆ. ಸಾಮಾನ್ಯವಾಗಿ ಪೀಕ್ ಅವರ್​​ನ್ಲಲಿ, ಕ್ಯಾಬ್​​ಗಳ ಸಂಖ್ಯೆ ಕಡಿಮೆ ಇದ್ದಾಗ, ಅಥವಾ ಯಾವ ಡ್ರೈವರ್ ಕೂಡ ರೈಡ್ ಸ್ವೀಕರಿಸಿದೇ ಇದ್ದಾಗ ಇಂಥ ಟಿಪ್ ಆಫರ್ ಬರುತ್ತದೆ.


Spread the love
Share:

administrator

Leave a Reply

Your email address will not be published. Required fields are marked *