ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯಾ ಪ್ರಕರಣಗಳ ಮರು ತನಿಖೆಗೆ ಹಿಂದೂ ಮಹಾ ಸಭಾದ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಒಕ್ಕೂಟದ ಆಗ್ರಹ

ಮಂಗಳೂರು:ಉತ್ತರ ಕರ್ನಾಟಕದ ಹಿಂದೂ ಸಂಘಟನೆಗಳ ಒಕ್ಕೂಟದ ನಿಯೋಗವು, ಮಾಸ್ತಪ್ಪ ನಾಯ್ಕ್ ಬಲಸೆ ಹಾಗು ವಿಶ್ವ ನಾಯ್ಕ್ ಇವರ ನೇತೃತ್ವದಲ್ಲಿ, ಹಿಂದೂ ಮಹಾ ಸಭಾದ ದುರೀಣರಾದ ರಾಜೇಶ್ ಪವಿತ್ರನ್ ರವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಹತ್ಯೆಯಾಗಿರುವ ಎಲ್ಲಾ ಹಿಂದೂ ಕಾರ್ಯಕರ್ತರ ಪ್ರಕರಣಗಳನ್ನು ಮರು ತನಿಖೆ ನಡೆಸಲು ರಾಜ್ಯ ಸರಕಾರಕ್ಕೆ ಒತ್ತಾಯ ಮಾಡುವಂತೆ ಮನವಿಯನ್ನು ಮಾಡಲಾಯಿತು.


