Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಿಪಬ್ಲಿಕ್ ಟಿವಿ ಮಾಧ್ಯಮ ಎಡವಟ್ಟು: ಟರ್ಕಿಯ ಸಭಾಂಗಣವನ್ನು ‘ಕಾಂಗ್ರೆಸ್ ಕಚೇರಿ’ ಎಂದು ತಪ್ಪು ಪ್ರದರ್ಶನ

Spread the love

ಬೆಂಗಳೂರು : ರಿಪಬ್ಲಿಕ್ ಟಿವಿ ತನ್ನ ಪ್ರೈಮ್‌ಟೈಮ್ ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಟರ್ಕಿಯಲ್ಲಿ ನೋಂದಾಯಿತ ಕಚೇರಿ ಹೊಂದಿದೆ ಎಂದು ಆರೋಪಿಸಿ ಇಸ್ತಾನ್‌ಬುಲ್ ಕಾಂಗ್ರೆಸ್ ಸೆಂಟರ್‌ನ ಚಿತ್ರವನ್ನು ಬಳಸಿರುವುದಕ್ಕೆ ಸಂಬಂಧಿಸಿದಂತೆ ನಿನ್ನೆ ( ಮೇ 20 ) ಸ್ಪಷ್ಟನೆ ನೀಡಿದೆ.

ರಿಪಬ್ಲಿಕ್ ಟಿವಿ ಸಂಪಾದಕ ಮತ್ತು ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಅವರು ಮೇ 15ರ ಪ್ರೈಮ್‌ಟೈಮ್ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷವು ಟರ್ಕಿಯಲ್ಲಿ ಕಚೇರಿ ಹೊಂದಿದೆ ಎಂದು ಆರೋಪಿಸಿದ್ದರು. ಆದರೆ ಈ ವರದಿಯಲ್ಲಿ ಬಳಸಲಾದ ಇಸ್ತಾನ್‌ಬುಲ್ ಕಾಂಗ್ರೆಸ್ ಸೆಂಟರ್‌ನ ಚಿತ್ರವು 2009ರಲ್ಲಿ ಉದ್ಘಾಟನೆಯಾದ ಒಂದು ಸಭಾ ಕೇಂದ್ರದ್ದಾಗಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಆಲ್ಟ್ ನ್ಯೂಸ್ ವರದಿ ಬಹಿರಂಗಪಡಿಸಿದೆ.

ರಿಪಬ್ಲಿಕ್ ಟಿವಿ ತನ್ನ ಸ್ಪಷ್ಟನೆಯಲ್ಲಿ “ಮೇ 15ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ತಪ್ಪಾದ ಚಿತ್ರವನ್ನು ಬಳಸಲಾಗಿದೆ. ಇದು ಸಂಪಾದಕೀಯ ತಪ್ಪಾಗಿದ್ದು, ಈ ತಪ್ಪಿಗಾಗಿ ನಾವು ವಿಷಾದ ವ್ಯಕ್ತಪಡಿಸುತ್ತೇವೆ” ಎಂದು ತಿಳಿಸಿದೆ. ಆದರೆ, ಈ ಘಟನೆಯು ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾನಗಳಲ್ಲಿ ರಿಪಬ್ಲಿಕ್ ಟಿವಿ ಮತ್ತು ಅರ್ನಬ್ ಗೋಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಈ ಘಟನೆಯ ಬಗ್ಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ ಅವರು ಮೇ 17ರಂದು ರಿಪಬ್ಲಿಕ್ ಟಿವಿ ವರದಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡು, ರಾಹುಲ್ ಗಾಂಧಿ ಅವರಿಗೆ ಈ ಕ್ರಮದ ಅಗತ್ಯತೆ ಏಕೆ ಎಂದು ಪ್ರಶ್ನಿಸಿದ್ದರು.

ರಿಪಬ್ಲಿಕ್ ಟಿವಿ ಈ ಹಿಂದೆಯೂ ತಪ್ಪು ವರದಿಗಳಿಗೆ ಸಂಬಂಧಿಸಿದಂತೆ ಟೀಕೆಗೊಳಗಾಗಿದೆ. 2023ರಲ್ಲಿ ಪೆಂಟಗನ್ ಸ್ಫೋಟದ ಬಗ್ಗೆ ಎಐ-ಜನರೇಟೆಡ್ ಚಿತ್ರವನ್ನು ಬಳಸಿ ಸುಳ್ಳು ಸುದ್ದಿ ಪ್ರಸಾರ ಮಾಡಿತ್ತು ಎಂದು ವಿಕಿಪೀಡಿಯಾ ದಾಖಲಿಸಿದೆ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾನಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರಿಪಬ್ಲಿಕ್ ಟಿವಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *