Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜಗತ್ತಿನ ಚಿನ್ನದ ಶೇಖರಣೆಯಲ್ಲಿ ಭಾರತ ಮೇಲುಗೈ: ಚಿನ್ನದ ಮೌಲ್ಯ ಭಾರತದ ಅರ್ಧ ಜಿಡಿಪಿಗೆ ಸಮ

Spread the love

ನವದೆಹಲಿ: ಚಿನ್ನ ಯಾವತ್ತೂ ಬೇಡಿಕೆ ಕಳೆದುಕೊಳ್ಳದ ಲೋಹ. ಕೇವಲ ಸೌಂದರ್ಯವರ್ಧಕ, ಪ್ರತಿಷ್ಠೆಗಾಗಿ ಮಾತ್ರವಲ್ಲ, ಇದು ಭಾರತೀಯರಿಗೆ ಪಾರಂಪರಿಕವಾಗಿ ಬಂದಿರುವ ಆಸಕ್ತಿ. ಜನರು ಅತಿಹೆಚ್ಚು ಚಿನ್ನ ಬಯಸುವ ದೇಶಗಳಲ್ಲಿ ಚೀನಾ ಮತ್ತು ಭಾರತ ಬರುತ್ತದೆ. ಚೀನಾಗಿಂತಲೂ ಭಾರತೀಯರೇ ಹೆಚ್ಚು ಚಿನ್ನ  ಹೊಂದಿದ್ದಾರೆ. ಜಗತ್ತಿನ ಶೇ. 30ಕ್ಕಿಂತ ಹೆಚ್ಚಿನ ಚಿನ್ನವನ್ನು ಭಾರತ ಮತ್ತು ಚೀನಾ ಹೊಂದಿವೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಅಂದಾಜು ಪ್ರಕಾರ ಇಲ್ಲಿಯವರೆಗೆ ವಿಶ್ವಾದ್ಯಂತ ಹೆಕ್ಕಿ ತೆಗೆದಿರುವ ಚಿನ್ನ 2,16,265 ಟನ್​​ನಷ್ಟಿದೆಯಂತೆ. ಅಂದರೆ, 2.16 ಲಕ್ಷ ಟನ್ ಚಿನ್ನವು ಪ್ರಸ್ತುತ ಇದೆ. ಕೆಲ ಚಿನ್ನವು ನಿಧಿಯಂತೆ ಎಲ್ಲೋ ಅಡಗಿಸಿಟ್ಟಿರಬಹುದು. ಕೆಲವು, ಮನೆಗಳಲ್ಲಿ ಪಾರಂಪರಿಕವಾಗಿ ಉಳಿದುಕೊಂಡಿರಬಹುದು. ಇನ್ನೂ ಕೆಲವು, ಬ್ಯಾಂಕ್ ಲಾಕರ್​​ಗಳಲ್ಲಿ ಇರಬಹುದು. ಈ 2.16 ಲಕ್ಷ ಟನ್ ಚಿನ್ನದ ಈಗಿನ ಮೌಲ್ಯ 22.46 ಟ್ರಿಲಿಯನ್ ಡಾಲರ್. ಇದು ಚೀನಾದ ಇಡೀ ಜಿಡಿಪಿಗಿಂತಲೂ ಹೆಚ್ಚು.

ಭಾರತೀಯ ಕುಟುಂಬಗಳಲ್ಲಿ ಅತಿಹೆಚ್ಚು ಚಿನ್ನ…

ಒಂದು ವರದಿ ಪ್ರಕಾರ, ಭಾರತದಲ್ಲಿ ಜನರ ಮನೆಗಳಲ್ಲಿ ಬರೋಬ್ಬರಿ 24,000 ಟನ್ ಚಿನ್ನಗಳಿವೆಯಂತೆ. ಜಗತ್ತಿನ ಯಾವ ದೇಶದಲ್ಲೂ ಜನರ ಬಳಿ ಇಷ್ಟೊಂದು ಚಿನ್ನ ಇಲ್ಲ. ಈ ವಿಚಾರದಲ್ಲಿ ಭಾರತದ ಸಮೀಪ ಇರುವುದು ಚೀನಾ ಮಾತ್ರವೇ. ಚೀನೀ ಕುಟುಂಬಗಳಲ್ಲಿ 20,000 ಟನ್ ಚಿನ್ನ ಇದೆ. ಹೂಡಿಕೆಗೆ ಅಲ್ಲದೇ ಸಂಪ್ರದಾಯ ಮತ್ತು ಆಭರಣಕ್ಕೆ ಚಿನ್ನ ಬಳಸುವ ಪ್ರಮುಖ ದೇಶಗಳು ಇವೆರಡೆಯೇ.

ಭಾರತೀಯರ ಬಳಿ ಇರುವ 24,000 ಟನ್ ಚಿನ್ನದ ಇವತ್ತಿನ ಮೌಲ್ಯ 2.5 ಟ್ರಿಲಿಯನ್ ಡಾಲರ್. ಅಂದರೆ 213 ಲಕ್ಷ ಕೋಟಿ ರೂ. ಇದು ಭಾರತದ ಅರ್ಧ ಜಿಡಿಪಿಗಿಂತಲೂ ಹೆಚ್ಚು. ಪಾಕಿಸ್ತಾನದ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು.

ಜನರ ಬಳಿ ಇರುವ 24,000 ಟನ್ ಚಿನ್ನವನ್ನೂ ಸೇರಿ, ಭಾರತದಲ್ಲಿ ಒಟ್ಟಾರೆ ಖಾಸಗಿಯಾಗಿ ಇರುವ ಚಿನ್ನ 30,000 ಟನ್​​ಗಿಂತಲೂ ಅಧಿಕ. ಆರ್​​ಬಿಐ 879.6 ಟನ್ ಚಿನ್ನವನ್ನು ತನ್ನ ಫೋರೆಕ್ಸ್ ಮೀಸಲು ನಿಧಿಯ ಭಾಗವಾಗಿ ಇರಿಸಿಕೊಂಡಿದೆ. ಇವೆಲ್ಲವನ್ನೂ ಒಟ್ಟುಗೂಡಿಸಿದರೆ 31,000 ಟನ್ ಚಿನ್ನವಾಗಬಹುದು. ಮೂರು ಟ್ರಿಲಿಯನ್ ಡಾಲರ್​​ಗೂ ಹೆಚ್ಚಿನ ಮೌಲ್ಯದ ಚಿನ್ನವು ಭಾರತದಲ್ಲಿ ಇದೆ.


Spread the love
Share:

administrator

Leave a Reply

Your email address will not be published. Required fields are marked *