ಹೆಚ್ಚಿದ ನೋವು, ಹೆಚ್ಚಿದ ವೈದ್ಯಕೀಯ ಬಿಲ್: ಬೆಂಗಳೂರಿನ ರಸ್ತೆಗೆ ನ್ಯಾಯ ಕೇಳಿದ ಮಹಿಳೆ

ಬೆಂಗಳೂರು: ಶಹಬ್ಬಾಸ್ ಲೇಡಿ! ಇಂತದೊಂದು ಘಟನೆ ಬಹುಶಃ ನೀವು ಈ ಹಿಂದೆ ನೋಡಿರಲಿಲ್ಲ..ಬೆಂಗಳೂರಿನ 43 ವರ್ಷದ ಮಹಿಳೆಯೊಬ್ಬರು ನಗರದ ಹದಗೆಟ್ಟ ರಸ್ತೆಗಳಿಂದ ಉಂಟಾದ ದೈಹಿಕ ಮತ್ತು ಮಾನಸಿಕ ಯಾತನೆಗೆ ಬಿಬಿಎಂಪಿಯಿಂದ 50 ಲಕ್ಷ ರೂ. ಪರಿಹಾರ ಕೋರಿ ಕಾನೂನು ನೋಟಿಸ್ ನೀಡಿದ್ದಾರೆ.

ಹೌದು,ಬೆಂಗಳೂರಿನ ನಿವಾಸಿಯೊಬ್ಬರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ತೀವ್ರ ನೋವು, ಆಘಾತ ಮತ್ತು ಯಾತನೆಗೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್ ನೀಡಿದ್ದಾರೆ. ಈ ನೋಟಿಸ್‌ನ್ನು ರಿಚ್ಯಂಡ್ ಟೌನ್ ನಿವಾಸಿ 43 ವರ್ಷದ ದಿವ್ಯ ಕಿರಣ್ ಅವರು ತಮ್ಮ ವಕೀಲ ಕೆ.ವಿ. ಲವೀನ್ ಮೂಲಕ ಮೇ 14 ರಂದು ನೀಡಲಾಗಿದೆ.
ಮಾನಸಿಕವಾಗಿ ತೊಂದರೆಯಿಂದ ಆರೋಗ್ಯ ಹದಗಿಟ್ಟಿದೆ
ಬೆಂಗಳೂರಿನಲ್ಲಿ ರಸ್ತೆ ಸರಿ ಇಲ್ಲದ ಕಾರಣ ಮಾನಸಿಕವಾಗಿ ನನಗೆ ತೊಂದರೆಯಾಗುತ್ತಿದೆ. ನಾನು ದೈಹಿಕ ಆರೋಗ್ಯ ಕೂಡ ಹಾಳಾಗಿದೆ ಎಂದು ಅವರು ನೋಟಿಸ್‌ನಲ್ಲಿ ದೂರಿದ್ದಾರೆ. ಬೆಂಗಳೂರು ನಗರದಲ್ಲಿ ವಾಸಿಸುವ ನಿವಾಸಿಗಳು ಹೆಚ್ಚಿನ ತೆರಿಗೆಯನ್ನು ಪಾವತಿ ಮಾಡುತ್ತಾರೆ ಬಜೆಟ್‌ನಲ್ಲೂ ಕೂಡ ರಸ್ತೆ ನಿರ್ವಹಣೆಗೆ ಹೂಡಿಕೆಯನ್ನು ಮಾಡುತ್ತಾರೆ. ಮೂಲಭೂತ ಸೌಕರ್ಯಗಳನ್ನು ನಿರ್ವಹಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಪ್ರತಿನಿತ್ಯ ಈ ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸಿ ನನ್ನ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ವೈದ್ಯಕೀಯ ವೆಚ್ಚ ಹೆಚ್ಚಾಗಿದೆ ಜೊತೆಗೆ ನಾನು ಹೆಚ್ಚಿನ ನೋವುನ್ನು ಅನುಭವಿಸಿದ್ದೇನೆ ಇದಕೆಲ್ಲಾ ನೀವು ಪರಿಹಾರವನ್ನು ನೀಡಬೇಕು ಎಂದು ಹೇಳಿದ್ಧಾರೆ.
ನೋಟಿಸ್ ನೀಡದ ವಕೀರ ವಾದವೇನು…?
ನನ್ನ ಕಕ್ಷಿದಾರರು ತೆರಿಗೆ ಪಾವತಿಸುವ ನಾಗರಿಕರಾಗಿದ್ದರೂ, ಸಾರ್ವಜನಿಕ ಮೂಲಸೌಕರ್ಯವನ್ನು ಸುರಕ್ಷಿತವಾಗಿ ನಿರ್ವಹಿಸುವ ಹಕ್ಕನ್ನು ಹೊಂದಿದ್ದರೂ, ಬಿಬಿಎಂಪಿಯ ಮೂಲಭೂತ ನಾಗರಿಕ ಮೂಲಸೌಕರ್ಯವನ್ನು ನಿರ್ವಹಿಸುವಲ್ಲಿನ ಸ್ಪಷ್ಟ ವೈಫಲ್ಯದ ಪರಿಣಾಮವಾಗಿ ಅವರು ನಿರಂತರ ದೈಹಿಕ ತೊಂದರೆ ಮತ್ತು ಮಾನಸಿಕ ಯಾತನೆಯನ್ನು ಅನುಭವಿಸುತ್ತಿದ್ದಾರೆ.
ತೀವ್ರವಾಗುತ್ತಿರುವ ನೋವಿನಿಂದಾಗಿ ಐದು ಮೂಳೆ ತಜ್ಞರನ್ನು ಭೇಟಿ ಮಾಡಬೇಕಾಯಿತು ಎಂದು ನನ್ನ ಕಕ್ಷಿದಾರರು ಹೇಳುತ್ತಾರೆ. ಅವರು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ನಾಲ್ಕು ಬಾರಿ ತುರ್ತು ಭೇಟಿಗಳನ್ನು ನೀಡಿದರು, ತೀವ್ರವಾದ ನೋವನ್ನು ನಿವಾರಿಸಲು ಚುಚ್ಚುಮದ್ದು ಮತ್ತು ಕಾರ್ಯವಿಧಾನಗಳನ್ನು ಪಡೆದರು. ಇದಲ್ಲದೆ, ಈ ಸ್ಥಿತಿಯನ್ನು ನಿರ್ವಹಿಸಲು ಅವರು ಹಲವಾರು ಔಷಧಿಗಳು ಮತ್ತು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ನೋವಿನಿಂದ ಅಳುವುದು, ನಿದ್ರೆಯ ನಷ್ಟ, ಆತಂಕ ಮತ್ತು ಮಾನಸಿಕ ಯಾತನೆ ಮುಂತಾದ ಕಂತುಗಳನ್ನು ಸಹ ಅನುಭವಿಸಿದ್ದಾರೆ, ಇವೆಲ್ಲವೂ ಅವರ ಯೋಗಕ್ಷೇಮ ಮತ್ತು ದೈನಂದಿನ ಕಾರ್ಯನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದು ಹೇಳಿದ್ದಾರೆ.
10,000 ಲೀಗಲ್ ನೋಟಿಸ್ ಶುಲ್ಕ ಪಾವತಿ
ಲೀಗಲ್ ನೋಟಿಸ್ ಶುಲ್ಕ ಪಾವತಿಯ ಮೊತ್ತವನ್ನು ಕೂಡ ಪರಿಹಾರದ ಭಾಗವಾಗಿ ಬಿಬಿಎಂಪಿಯಿಂದ ವಸೂಲಿ ಮಾಡಬೇಕೆಂದು ಒತ್ತಾಯಿಸಲಾಗಿದೆ.
15 ದಿನಗಳ ಕಾಲಾವಧಿ
15 ದಿನಗಳ ಅವಧಿಯಲ್ಲಿ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲದಿದ್ದರೆ, ಮುಂದಿನ ಕಾನೂನು ಕ್ರಮಗಳು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಮುಂದಿನ ಕ್ರಮಗಳ ಎಚ್ಚರಿಕೆ ಕ್ರವದ ವಿವರ
ಸಿವಿಲ್ ಮೊಕದ್ದಮೆ (Civil Suit):
ನಷ್ಟಗಳ ಪರಿಹಾರಕ್ಕೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುತ್ತದೆ.
ಇದರಲ್ಲಿ ವೈದ್ಯಕೀಯ ವೆಚ್ಚ, ನೋವು, ಮಾನಸಿಕ ಆಘಾತದ ಪರಿಹಾರ ಇತ್ಯಾದಿಗಳನ್ನು ಒತ್ತಾಯಿಸಲಾಗುತ್ತದೆ.
ಪಿಐಎಲ್ (PIL – Public Interest Litigation):
ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಗಾಗಿ ಮೊಕದ್ದಮೆ ಹೂಡಲು ಸಿದ್ಧತೆ.
ಇದರಿಂದ ಇತರ ನಾಗರಿಕರಿಗೂ ನ್ಯಾಯದ ಬಾಗಿಲು ತೆರೆಯಬಹುದು.
ಲೋಕಾಯುಕ್ತ ಮತ್ತು ಮಾನವ ಹಕ್ಕು ಆಯೋಗಳಿಗೆ ದೂರು:
ಈ ರೀತಿಯ ದೂರುಗಳು ಸರ್ಕಾರದ ವಿಭಾಗಗಳ ವಿರುದ್ಧ ತನಿಖೆ ಆರಂಭಿಸಲು ದಾರಿ ಮಾಡಿಕೊಡಬಹುದು.
BBMPನ ಪ್ರಭುತ್ವ ಅಥವಾ ನಿರ್ವಹಣಾ ದೌರ್ಬಲ್ಯಗಳು ಲೆಕ್ಕಕ್ಕೆ ಬರಬಹುದು.
ಬಿಬಿಎಂಪಿ ನಿರ್ಲಕ್ಷ್ಯ
ಬೆಂಗಳೂರು ಮಹಾನಗರ ಪಾಲಿಕೆಗೆ ಹೆಚ್ಚಿನ ಅನುದಾನ ಬರುತ್ತಿದ್ದರೂ ಸಹ ಯಾವುದೇ ಉಪಯೋಗವನ್ನು ಮಾಡುತ್ತಿಲ್ಲ.ಬೆಂಗಳೂರಿನ ರಸ್ತೆಯ ಸ್ಥಿತಿಯಂತೂ ಹದಗೆಟ್ಟು ಹೋಗಿದೆ. ರಸ್ತೆಗಳಿಗೆ ಸರಿಯಾದ ಡಾಂಬಾರು ಇಲ್ಲ, ಎಲ್ಲಿ ನೋಡಿದ್ದರೂ ಗುಂಡಿಗಳದ್ದೇ ಕಾರುವಾರು ಅನ್ನುವಂತೆ ಬೆಂಗಳೂರು ರಸ್ತೆಗಳು ಇವೆ. ಬೆಂಗಳುರನ್ನು ಸರಿಯಾಗಿ ನಿರ್ಮಾಹಣೆ ಮಾಡುವಲ್ಲಿ ಬಿಬಿಎಂಬಿಪಿ ವಿಫಲವಾಗಿದೆ.
ಜಲಾವೃತಗೊಂಡ ರಸ್ತೆಗಳು
ನಿರಂತರ ಮಳೆಗಳಿಂದ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ, ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದೆ. ಇದು ಮೂಲಭೂತ ಮೂಲಸೌಕರ್ಯಗಳ ಕೊರತೆಯನ್ನು ತೋರುತ್ತದೆ
ಇದು ಕೇವಲ ವೈಯಕ್ತಿಕ ಹೋರಾಟವಲ್ಲ, ಸಾಮಾಜಿಕ ಜವಾಬ್ದಾರಿಯ ಹೋರಾಟಇಂತಹ ಪ್ರಕರಣಗಳು ಇನ್ನಿತರ ನಾಗರಿಕರಲ್ಲಿ ಸಹ ನಂಬಿಕೆಯನ್ನು ಹುಟ್ಟಿಸುತ್ತವೆ ಎಂದು ಹೇಳಿದ್ದಾರೆ.