Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರು ಬಿಟಿಎಂ ಲೇಔಟ್‌ನಲ್ಲಿ ವಿದ್ಯುತ್ ಶಾಕ್ ದುರಂತ: 9 ವರ್ಷದ ಬಾಲಕ ಸೇರಿ ಇಬ್ಬರು ಸಾವು

Spread the love

ಬೆಂಗಳೂರು: ಅಪಾರ್ಟ್‌ಮೆಂಟ್‌ನ ಬೇಸ್ಮೆಂಟ್‌ನಲ್ಲಿ ಮೋಟಾರ್‌ನಿಂದ ಮಳೆಯ ನೀರು ಮಾಡಲು ಹೋಗಿ ಎಲೆಕ್ಟ್ರಿಕ್‌ ಶಾಕ್‌ ತಗುಲಿ 9 ವರ್ಷದ ಬಾಲಕ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ನಡೆದಿದೆ. ಇದರೊಂದಿಗೆ ಮಹಾ ಮಳೆಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಘಟನೆಯಲ್ಲಿ ಮನಮೋಹನ್ ಕಾಮತ್ (63), ದಿನೇಶ್ (12) ಮೃತ ದುರ್ದೈವಿಗಳು. ಇವರು ಬಿಟಿಎಂ 2ನೇ ಹಂತದಲ್ಲಿರುವ ಎನ್‌.ಎಸ್ ಪಾಳ್ಯದಲ್ಲಿರುವ ಮಧುವನ ಅಪಾರ್ಟ್ಮೆಂರ್ಟ್‌ಮೆಂಟ್‌ ನಿವಾಸಿಗಳು.

ಇಂದು ಸಂಜೆ 6:15 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ನ ಬೇಸ್ಮೆಂಟ್‌ನಲ್ಲಿ ನಿಂತಿದ್ದ ನೀರನ್ನು ಮೋಟಾರ್‌ ಮೂಲಕ ಹೊರಹಾಕಲು ಮುಂದಾಗಿದ್ದರು. ಹೊರಗಡೆಯಿಂದ ಮೋಟಾರ್‌ ತಂದು ಸ್ವಿಚ್‌ಗೆ ಕನೆಕ್ಷನ್ ನೀಡಿ ನೀರನ್ನು ಹೊರ ತೆಗೆಯುವಾಗ ಶಾರ್ಟ್ ಸರ್ಕ್ಯೂಟ್‌ನಿಂದ ಕರೆಂಟ್ ತಗುಲಿ ಮನಮೋಹನ್ ಕಾಮತ್ ಮೃತಪಟ್ಟಿದ್ದಾರೆ. ಇದರೊಂದಿಗೆ ಅದೇ ಅಪಾರ್ಟ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಭರತ್ ಎಂಬವರ ಮಗ ದಿನೇಶ್‌ಗೂ ಕರೆಂಟ್‌ ಶಾಕ್‌ ತಗುಲಿ ಮೃತಪಟ್ಟಿದ್ದಾನೆ.

ಇದಕ್ಕೂ ಮುನ್ನ ವೈಟ್ ಫೀಲ್ಡ್‌ನ ಖಾಸಗಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋಗಿದ್ದ ಶಶಿಕಲಾ (35) ಎಂಬ ಮಹಿಳೆ ಕಾಂಪೌಂಡ್ ಕುಸಿದು ಸಾವನ್ನಪ್ಪಿದ್ದರು.


Spread the love
Share:

administrator

Leave a Reply

Your email address will not be published. Required fields are marked *