Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಿಮ್ ಕಾರ್ಡ್ ದುರ್ಬಳಕೆ – ನಕಲಿ ಡ್ರೈವರ್ ಖಾತೆ – ಇನ್ಸೆಂಟಿವ್ ಲೂಟಿ

Spread the love

ಬೆಂಗಳೂರು: ಬೆಂಗಳೂರು: ಕ್ಯಾಬ್ ಸೇವೆ ಹಾಗೂ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದ ಸಂಸ್ಥೆಯೊಂದರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದೇ ಸಂಸ್ಥೆಯ ಹೆಸರಿನಲ್ಲಿ ಟ್ಯಾಕ್ಸಿ ದಂಧೆಯನ್ನು ನಡೆಸಿ, ನಕಲಿ ಟ್ರಿಪ್ ಗಳ ಲೆಕ್ಕವನ್ನು ತೋರಿಸಿ ಸುಮಾರು 10 ಲಕ್ಷ ರೂ.ಗಳಷ್ಟು ಪ್ರೋತ್ಸಾಹ ಧನವನ್ನು ಸರ್ಕಾರದಿಂದ ಪಡೆದಿರುವಂಥ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೂಲಗಳ ಪ್ರಕಾರ, 30 ವರ್ಷದೊಳಗಿನ ಮೂವರು ವ್ಯಕ್ತಿಗಳು ಸೇರಿ ಈ ದಂಧೆಯನ್ನು ನಡೆಸಿದ್ದು ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮನೋಜ್ ಕುಮಾರ್, ಸಚಿನ್ ಹಾಗೂ ಶಂಕರ್ ಅಲಿಯಾಸ್ ಶಂಕ್ರಿ ಎಂಬುವರು ಬಂಧಿತರು. ಇವರೆಲ್ಲರೂ ಬೆಂಗಳೂರಿನ ಚಂದ್ರಾ ಲೇಔಟ್ ನ ನಿವಾಸಿಗಳೆಂದು ಹೇಳಲಾಗಿದೆ.


ಇವರಲ್ಲಿ ಮನೋಜ್ ಕುಮಾರ್, ಎರಡು ಖ್ಯಾತ ಕ್ಯಾಬ್ ಸೇವಾ ಸಂಸ್ಥೆಗಳಿಗೆ ಕ್ಯಾಬ್ ಹಾಗೂ ಅವುಗಳ ಚಾಲಕರನ್ನು ನೋಂದಾಯಿಸಿಕೊಡುವ ಏಜೆನ್ಸಿಯನ್ನು ಇಟ್ಟುಕೊಂಡಿದ್ದಾನೆ. ಸಚಿನ್ ಎಂಬಾತ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಇನ್ನು ಶಂಕರ್ ಎಂಬಾತ ದೂರಸಂಪರ್ಕ ಏಜೆನ್ಸಿಯೊಂದರ ಅಧಿಕೃತ ಮಾರಾಟಗಾರನಾಗಿದ್ದಾನೆ. ಇವರನ್ನು ಬಂಧಿಸಿರುವ ಪೊಲೀಸರು, 1,055 ಸಿಮ್ ಕಾರ್ಡ್ ಗಳು, 15 ಸೆಲ್ ಫೋನ್ ಗಳು, ನಾಲ್ಕು ಲ್ಯಾಪ್ ಟಾಪ್ ಗಳು ಹಾಗೂ ಒಂದು ಕಂಪ್ಯೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.

ಮೋಸದ ವ್ಯವಹಾರ ಹೇಗೆ?

ಮನೋಜ್ ಕುಮಾರ್, ಎರಡು ಖ್ಯಾತ ಕ್ಯಾಬ್ ಸೇವಾ ಕಂಪನಿಗಳಿಗೆ ಟ್ಯಾಕ್ಸಿಗಳನ್ನು/ಚಾಲಕರನ್ನು ಹಾಗೂ ಬೈಕ್ ಕ್ಯಾಪ್ಟನ್ ಗಳನ್ನು (ಬೈಕ್ ಟ್ಯಾಕ್ಸಿ ಸೇವೆ ನೀಡಲು ಬಯಸುವ ವ್ಯಕ್ತಿಗಳು) ಆ ಕಂಪನಿಗಳಿಗೆ ನೋಂದಾವಣಿ ಮಾಡಿಸಿಕೊಡುವ ಏಜೆನ್ಸಿಯನ್ನು ನಡೆಸುತ್ತಿದ್ದ. ಹಾಗಾಗಿ, ಆ ಎರಡು ಟ್ಯಾಕ್ಸಿ ಸೇವಾ ಸಂಸ್ಥೆಗಳ ಅಧಿಕೃತ ಏಜೆಂಟ್ ಗಳ ಪಟ್ಟಿಯಲ್ಲಿ ಈತನ ಹೆಸರು ಇತ್ತು.

ಈತನ ಸ್ನೇಹಿತ ಸಚಿನ್ ಕೆಲಸ ಮಾಡುತ್ತಿದ್ದ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದ ಜನರ ಆಧಾರ್ ಕಾರ್ಡ್ ಹಾಗೂ ನಿವಾಸ ದೃಢೀಕರಣ ದಾಖಲೆಗಳನ್ನು ಅವರನ್ನೇ ಕ್ಯಾಬ್ ಸೇವಾದಾರರೆಂದು ಆ ಟ್ಯಾಕ್ಸಿ ಸೇವಾ ಸಂಸ್ಥೆಗಳಲ್ಲಿ ನೋಂದಾಯಿಸುತ್ತಿದ್ದ.

ಈತನ ಏಜೆನ್ಸಿಯಿಂದ ಈಗಾಗಲೇ ಹಲವಾರು ಚಾಲಕರು ಟ್ಯಾಕ್ಸಿ ಸೇವೆಯನ್ನು ಆಯಾ ಕಂಪನಿಗಳ ಬ್ರಾಂಡ್ ಅಡಿಯಲ್ಲಿ ನೀಡಿದ್ದ. ಈಗಾಗಲೇ ಮೂರು ವರ್ಷಗಳಿಂದ ಹಲವಾರು ಚಾಲಕರನ್ನು ಪರಿಚಯಿಸಿದ್ದ ಈತನ ಬಗ್ಗೆ ಆ ಕಂಪನಿಗಳು ಈತನ ಮೇಲೆ ನಂಬಿಕೆಯಿಟ್ಟಿದ್ದವು. ಅದನ್ನು ಈತ ದುರ್ಬಳಕೆ ಮಾಡಿಕೊಂಡಿದ್ದ. ಸಚಿನ್ ನ ಸಂಸ್ಥೆಯಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದ ವ್ಯಕ್ತಿಗಳ ಆಧಾರ್ ಕಾರ್ಡ್, ವಿಳಾಸ ದೃಢೀಕರಣದ ದಾಖಲೆಗಳನ್ನು ಈತ ಆತನಿಂದ ಪಡೆಯುತ್ತಿದ್ದ.

ಮತ್ತೊಂದೆಡೆ, ಇವೇ ಆಧಾರ್ ಕಾರ್ಡ್ ಗಳ ಜೆರಾಕ್ಸ್ ಪ್ರತಿಗಳನ್ನು ಬಳಸಿಕೊಂಡು ಶಂಕರ್ ಕಡೆಯಿಂದ ಸಿಮ್ ಕಾರ್ಡ್ ಗಳನ್ನು ಪಡೆಯುತ್ತಿದ್ದ. ಆ ದಾಖಲೆಗಳು ಹಾಗೂ ಸಿಮ್ ಕಾರ್ಡ್ ಗಳನ್ನು ಬಳಸಿಕೊಂಡು, ಆ ಎರಡೂ ಟ್ಯಾಕ್ಸಿ ಸೇವಾ ಸಂಸ್ಥೆಗಳಿಗೆ ಡ್ರೈವರ್ ಪಾರ್ಟ್ ನರ್ ಹುದ್ದೆಗಾಗಿ ಅರ್ಜಿ ಸಲ್ಲಿಸುತ್ತಿದ್ದ. ಈತ ಚಾಲಕರೆಂದು ಹೇಳಿ ನೋಂದಾವಣಿ ಮಾಡಿಸುತ್ತಿದ್ದ ಎಲ್ಲರ ಹೆಸರುಗಳನ್ನು ತಮ್ಮಲ್ಲಿ ನೋಂದಾವಣಿ ಮಾಡಿಕೊಳ್ಳುತ್ತಿದ್ದವು.

ಹಾಗೆ ನಕಲಿ ಡ್ರೈವರ್ ಹೆಸರುಗಳು, ಕಾರ್ ನಂಬರನ್ನು ಈ ನೋಂದಾವಣಿ ಮಾಡಿಸಿದ ಆನಂತರ ಆ ಕಾರುಗಳು/ ಬೈಕ್ ಗಳು ದಿನಕ್ಕೆ ಇಷ್ಟು ಟ್ಯಾಕ್ಸಿ ಸೇವೆ ನೀಡಿದ್ದಾರೆ, ಇಷ್ಟು ಟ್ರಿಪ್ ಗಳನ್ನು ಮಾಡಿದ್ದಾರೆಂದು ಕಂಪನಿಗೆ ಲೆಕ್ಕ ಹೋಗುವಂತೆ ಮಾಡುತ್ತಿದ್ದ. ಇದಕ್ಕಾಗಿ ಆತ ಗೂಗಲ್ ಮ್ಯಾಪ್ ಗಳನ್ನು ಆದ ದುರ್ಬಳಕೆ ಮಾಡಿಕೊಳ್ಳುತ್ತಿದ್ದ. ಆ ಮೂಲಕ, ಕಂಪನಿಯು ನೀಡುವ ಇನ್ಸೆಂಟಿವ್ ಗಳನ್ನು ಪಡೆಯುತ್ತಿದ್ದ ಎಂದು ಹೇಳಲಾಗಿದೆ.

ಪ್ರೀ ಆ್ಯಕ್ಟಿವೇಟೆಡ್ ಸಿಮ್ ಕಾರ್ಡ್ ಗಳ ಬಳಕೆ ಭಾರತದಲ್ಲಿ ನಿಷೇಧವಿದೆ. ಆದರೆ, ಮೋಸಗಾರರು ಹೀಗೆ ಯಾರದ್ದೋ ಹೆಸರುಗಳಲ್ಲಿ ಸಿಮ್ ಕಾರ್ಡ್ ಗಳನ್ನು ಬಳಸಿ ಅವುಗಳನ್ನು ಪ್ರೀ ಆ್ಯಕ್ಟಿವೇಟ್ ಮಾಡಿ ಬಳಸುತ್ತಾರೆ. ಈ ಪ್ರಕರಣದಲ್ಲಿ, ಶಂಕರ್ ಕೊಟ್ಟಿದ್ದ ಸಿಮ್ ಕಾರ್ಡ್ ಗಳು ಪ್ರೀ ಆ್ಯಕ್ಟಿವೇಟ್ ಆಗಿರುತ್ತಿದ್ದವು. ಹೀಗೆ, ಬೆಂಗಳೂರಿನ ಚಂದ್ರಾ ಲೇಔಟ್ ನಲ್ಲಿ ಪ್ರೀ ಆ್ಯಕ್ಟಿವೇಟೆಡ್ ಸಿಮ್ ಕಾರ್ಡ್ ಗಳು ಬಳಕೆಯಾಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಅದರ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಮನೋಜ್ ಕುಮಾರ್ ಸಿಕ್ಕಿಬಿದ್ದಿದ್ದಾನೆ. ಆತನ ವಿಚಾರಣೆಯಲ್ಲಿ ಈ ಜಾಲ ಹೊರಬಿದ್ದಿದ್ದು, ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *