Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ʼಶೆನ್‌ಜೆನ್ ಸುಂದರಿʼಗೆ ನಕಲಿ ಡಿಗ್ರಿ ದಂಡ! 8 ತಿಂಗಳು ಜೈಲು ತೀರ್ಪು

Spread the love

ಚೀನಾ : ಚೀನಾದ 2024ರ ಶೆನ್‌ಜೆನ್ ಸುಂದರಿ ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿ 8 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಹಾಂಗ್ ಕಾಂಗ್ ವಿಶ್ವವಿದ್ಯಾಲಯದಲ್ಲಿ ಐವಿ ಲೀಗ್ ಅರ್ಹತೆಗಾಗಿ ಕೊಲಂಬಿಯಾ ವಿಶ್ವವಿದ್ಯಾಲಯದ ನಕಲಿ ಪದವಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದು ಯುವತಿಗೆ ಮುಳುವಾಯಿತು.

ತನ್ನ ಸೌಂದರ್ಯಕ್ಕೆ ಸರಿಸಮನಾಗಿ ಪದವಿಗಳನ್ನು ಪಡೆದುಕೊಳ್ಳಬೇಕು ಎಂದು ಶಿಕ್ಷಣವನ್ನು ಹಣದಲ್ಲಿ ಖರೀದಿ ಮಾಡಿದ ಚೀನಾದ 2024ರ ಶೆನ್‌ಜೆನ್ ಸುಂದರ ರಾಣಿಗೆ 8 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ವಿಶ್ವದ ಪ್ರತಿಷ್ಠಿತ ಸುಂದರಿಯರ ಸಾಲಿನಲ್ಲಿ ಸ್ಪರ್ಧೆ ಮಾಡಿದ ಯುವತಿ ಸಾಮಾನ್ಯರಂತೆ ಜೈಲು ಶಿಕ್ಷೆಯನ್ನು ವಿಧಿಸಿದ್ದಕ್ಕೆ ನ್ಯಾಯಾಧೀಶರ ನಡೆಯನ್ನು ಸ್ಥಳೀರು ಶ್ಲಾಘಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಎನ್ನುವುದು ವ್ಯಾಪಾರವಾಗಿದ್ದು, ಉಳ್ಳವರ ಪಾಲಾಗುತ್ತಿದೆ. ಸರ್ಕಾರಿ, ಖಾಸಗಿ ಕೆಲಸಗಳಿಗೆ ಶೈಕ್ಷಣಿಕ ಅರ್ಹತೆ ಕಡ್ಡಾಯವಾದ್ದರಿಂದ, ನಕಲಿ ಪ್ರಮಾಣಪತ್ರಗಳನ್ನು ನೀಡುವ ನಕಲಿ ವಿಶ್ವವಿದ್ಯಾಲಯಗಳು ಎಲ್ಲಾ ದೇಶಗಳಲ್ಲಿ ಹೆಚ್ಚಾಗಿವೆ. ಈ ರೀತಿಯ ನಕಲಿ ಪ್ರಮಾಣಪತ್ರ ಬಳಸಿ ಕೆಲಸ ಸಿಕ್ಕರೂ, ಒಂದಲ್ಲ ಒಂದು ಸಂದರ್ಭದಲ್ಲಿ ವಂಚನೆ ಬಯಲಾಗುತ್ತದೆ. ಇದೇ ರೀತಿಯ ಪರಿಸ್ಥಿತಿಯನ್ನು ಚೀನಾದ ಸುಂದರಿ ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. 

ಹಾಂಗ್ ಕಾಂಗ್ ವಿಶ್ವವಿದ್ಯಾಲಯದಲ್ಲಿ ಐವಿ ಲೀಗ್ ಅರ್ಹತೆಗಾಗಿ ಕೊಲಂಬಿಯಾ ವಿಶ್ವವಿದ್ಯಾಲಯದ ನಕಲಿ ಪದವಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದು ಚೈನೀಸ್ ಸುಂದರಿಗೆ ಮುಳುವಾಯಿತು. ನಕಲಿ ಪ್ರಮಾಣಪತ್ರ ಸಲ್ಲಿಸಿದ ಪ್ರಕರಣದಲ್ಲಿ 28 ವರ್ಷದ ಲಿ ಸಿಕ್ಸ್‌ಸುವಾನ್‌ಗೆ 240 ದಿನಗಳು (ಎಂಟು ತಿಂಗಳು) ಜೈಲು ಶಿಕ್ಷೆ ವಿಧಿಸಲಾಗಿದೆ. 

ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಪದವಿ ಪಡೆದಿದ್ದೇನೆ ಎಂದು ಲಿ ಸಿಕ್ಸ್‌ಸುವಾನ್ ಹೇಳಿಕೊಂಡಿದ್ದರು. ಹಾಂಗ್ ಕಾಂಗ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದ ಪಿಜಿ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಲಿ ಸಿಕ್ಸ್‌ಸುವಾನ್ 2021 ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ನಕಲಿ ಪದವಿ ಪ್ರಮಾಣಪತ್ರವನ್ನು ಸಲ್ಲಿಸಿದ್ದರು. 2022 ರಲ್ಲಿ ಲಿ ಸಿಕ್ಸ್‌ಸುವಾನ್‌ಗೆ ಪ್ರವೇಶವೂ ದೊರಕಿತು. ನಂತರ 2024 ರಲ್ಲಿ ಲಿ, ಶೆನ್ಜೆನ್ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದರು. 

ಕೊಲಂಬಿಯಾ ವಿಶ್ವವಿದ್ಯಾಲಯದ್ದು ಮಾತ್ರವಲ್ಲ, ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ನಕಲಿ ಪ್ರಮಾಣಪತ್ರವನ್ನೂ ಲಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. ಆ ಪ್ರಮಾಣಪತ್ರದಲ್ಲಿ ಲಿ ಪದವಿ ಕೋರ್ಸ್‌ನಲ್ಲಿ ಡಿಸ್ಟಿಂಕ್ಷನ್ ಅಂಕಗಳನ್ನು ಪಡೆದಿದ್ದರು. ಆದರೆ ಈ ಕೋರ್ಸ್ ಅನ್ನು ಲಿ ಪಾಸಾಗಿದ್ದಾರೆ ಎಂದು ಮಾತ್ರ ವಿಶ್ವವಿದ್ಯಾಲಯದ ದಾಖಲೆಗಳು ಹೇಳುತ್ತವೆ. ಹಾಂಗ್ ಕಾಂಗ್ ವಿಶ್ವವಿದ್ಯಾಲಯ ನಡೆಸಿದ ತನಿಖೆಯಲ್ಲಿ ಅಂತಹ ವಿದ್ಯಾರ್ಥಿ ತಮ್ಮ ವಿಶ್ವವಿದ್ಯಾಲಯದಲ್ಲಿ ಓದಿಲ್ಲ ಎಂದು ಕೊಲಂಬಿಯಾ ವಿಶ್ವವಿದ್ಯಾಲಯ ತಿಳಿಸಿದೆ. 

ನಕಲಿ ಪ್ರಮಾಣಪತ್ರಕ್ಕೆ 45 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಲಿ ಪೊಲೀಸರಿಗೆ ತಿಳಿಸಿದ್ದಾರೆ. ಸೊಂಗ್‌ನಾನ್ ವಿಶ್ವವಿದ್ಯಾಲಯದ ಅಡಿಯಲ್ಲಿರುವ ವುಹಾನ್ ಕಾಲೇಜಿನಿಂದ 2020 ರಲ್ಲಿ ಅರ್ಥಶಾಸ್ತ್ರ ಮತ್ತು ಕಾನೂನಿನಲ್ಲಿ ಲಿ ಪದವಿ ಪಡೆದಿದ್ದಾರೆ. ನಂತರ ಕೊಲಂಬಿಯಾ ವಿಶ್ವವಿದ್ಯಾಲಯದ ಆನ್‌ಲೈನ್ ಕೋರ್ಸ್‌ನಲ್ಲಿಯೂ ಭಾಗವಹಿಸಿದ್ದೇನೆ ಎಂದು ಲಿ ಪೊಲೀಸರಿಗೆ ಒಪ್ಪಿಕೊಂಡಿದ್ದಾರೆ. ನಕಲಿ ಪ್ರಮಾಣಪತ್ರದಲ್ಲಿ ಸಿಕ್ಕಿಬಿದ್ದರೂ ಲಿ ಚೀನಾಕ್ಕೆ ಹಿಂತಿರುಗಲು ನಿರಾಕರಿಸಿದರು. ಇದರಿಂದಾಗಿ ಲಿಯನ್ನು ಗಡಿಯಲ್ಲಿ ಬಂಧಿಸಲಾಯಿತು ಎಂದು ವರದಿಯಾಗಿದೆ. ಶಾಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಳೆದ 8 ನೇ ತಾರೀಖಿನಂದು ಲಿಗೆ 300 ದಿನಗಳ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಅದನ್ನು 240 ದಿನಗಳಿಗೆ ಇಳಿಸಲಾಯಿತು


Spread the love
Share:

administrator

Leave a Reply

Your email address will not be published. Required fields are marked *