ಬಯೋಫೋಟಾನ್ ಬೆಳಕು: ಮನುಷ್ಯ ದೇಹದ ನೈಸರ್ಗಿಕ ಹೊಳಪು

ನೀವು ಮಿಂಚುಹುಳು ನೋಡಿರುತ್ತೀರಿ. ರಾತ್ರಿಯಾದರೆ ಸಾಕು ಬೆಳಕು ಹೊರಸೂಸುತ್ತಾ ಅತ್ತಿಂದಿತ್ತ ಹಾರಾಡುತ್ತವೆ. ಆದರೆ, ಮನುಷ್ಯ ಜೀವಿಗಳು, ಸಸ್ಯಗಳು ಸಹ ಬೆಳಕು ಹೊರಸೂಸುತ್ತವೆ ಎಂದರೆ ನಂಬುತ್ತೀರಾ? ನಂಬಲೇಬೇಕು..
ಹೊಸ ಸಂಶೋಧನೆಯ ಪ್ರಕಾರ, ಎಲ್ಲಾ ಜೀವಿಗಳು, ಅದರಲ್ಲೂ ಮಾನವರು, ಪ್ರಾಣಿಗಳು, ಸಸ್ಯಗಳು ಸಹ ‘ಬಯೋಫೋಟಾನ್ ಬೆಳಕು’ ಎಂದು ಕರೆಯಲ್ಪಡುವ ಸ್ವಲ್ಪವೇ ಸ್ವಲ್ಪ ಬೆಳಕನ್ನು ಹೊರಸೂಸುತ್ತವೆ ಎಂದು ಹೇಳಿದೆ

ಆದರೆ, ಆ ಬೆಳಕು ಬೇರೆಯವರ ಕಣ್ಣಿಗೆ ಕಾಣುವಷ್ಟು ಪ್ರಕಾಶಮಾನವಾಗಿರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
‘ಬಯೋಫೋಟಾನ್ ಬೆಳಕು’ ಎಂಬ ಈ ವಿದ್ಯಮಾನವು ವಿಜ್ಞಾನಿಗಳಲ್ಲಿ ಬಹಳ ಹಿಂದಿನಿಂದಲೂ ಕುತೂಹಲ ಮೂಡಿಸಿತ್ತು. ಈಗ, ಕ್ಯಾಲ್ಗರಿ ವಿಶ್ವವಿದ್ಯಾಲಯ ಮತ್ತು ಕೆನಡಾದ ರಾಷ್ಟ್ರೀಯ ಸಂಶೋಧನಾ ಮಂಡಳಿಯ ಸಂಶೋಧಕರು ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಮತ್ತಷ್ಟು ಮಾಹಿತಿ ಹೊರಬಿದ್ದಿದೆ.
ಜೀವಂತ ಇಲಿಗಳು ಮತ್ತು ಎರಡು ವಿಧದ ಸಸ್ಯ ಪ್ರಭೇಧಗಳ ಎಲೆಗಳನ್ನು ಬಳಸಿ ನಡೆಸಿದ ಪ್ರಯೋಗಗಳಲ್ಲಿ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಬದುಕಿದ್ದ ಇಲಿ ಬೆಳಕು ಹೊರಸೂಸುತ್ತಿತ್ತು, ಆದರೆ ಸಾವನ್ನಪ್ಪಿದ ನಂತರ ಬೆಳಕು ಸಂಪೂರ್ಣ ಕಣ್ಮರೆಯಾಯಿತು ಎಂದು ತಜ್ಞರು ಹೇಳಿದ್ದಾರೆ.
ಬಯೋಫೋಟಾನ್ಗಳು ಎಂದರೇನು?
ಬಯೋಫೋಟಾನ್ಗಳು ಜೀವಕೋಶಗಳಲ್ಲಿನ ಜೀವರಾಸಾಯನಿಕ ಕ್ರಿಯೆಗಳಿಂದ ಉತ್ಪತ್ತಿಯಾಗುವ ಬೆಳಕಿನ ಕಣಗಳು. ಈ ಬಯೋಫೋಟಾನ್ಗಳೇ ಮನುಷ್ಯನಲ್ಲಿ ದೇಹದ ಬಿಸಿ, ದೇಶಕ್ಕೆ ತಗುಲುವ ಸೋಂಕುಗಳು, ಫೋಷಕಾಂಶಗಳ ಅಸಮತೋಲವನ್ನು ನಿರ್ಧರಿಸುತ್ತವೆ.