Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

48 ಗಂಟೆಗಳಲ್ಲಿ 6 ಉಗ್ರರು ಹೊಡೆದುರುಳಿಸಿದ ಭಾರತೀಯ ಸೇನೆ – ಯಶಸ್ವಿ ಕಾರ್ಯಾಚರಣೆಗಳು

Spread the love

ನವದೆಹಲಿ: ಜಮ್ಮು & ಕಾಶ್ಮೀರದಲ್ಲಿ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ 6 ಉಗ್ರರನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿತು. ಭಯೋತ್ಪಾದಕರನ್ನು ಮಟ್ಟ ಹಾಕಿದ್ದೇ ರಣರೋಚಕ.

ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ 48 ಗಂಟೆಗಳ ಒಳಗೆ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಆರು ಭಯೋತ್ಪಾದಕರನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಸರ್ಪಚ್ ಹತ್ಯೆಯಲ್ಲಿ, ಎನ್‌ಕೌಂಟರ್‌ ಆದ ಭಯೋತ್ಪಾದಕರಲ್ಲಿ ಒಬ್ಬ ಭಾಗಿಯಾಗಿದ್ದ. ಭಯೋತ್ಪಾದಕರು ಎಲ್ಲೇ ಅಡಗಿಕೊಂಡರೂ, ನಾವು ಅವರನ್ನು ಪತ್ತೆಹಚ್ಚಿ ನಾಶಪಡಿಸುತ್ತೇವೆ ಎಂದು ಜಿಒಸಿ ವಿ ಫೋರ್ಸ್‌ನ ಮೇಜರ್ ಜನರಲ್ ಧನಂಜಯ್ ಜೋಶಿ ಹೇಳಿದ್ದಾರೆ.

ಉಗ್ರರ ಎನ್‌ಕೌಂಟರ್‌ ನಡೆದಿದ್ಹೇಗೆ?‌
ಆಪರೇಷನ್‌ ಕೆಲ್ಲಾರ್‌
ಕೆಲ್ಲಾರ್‌ನ ಎತ್ತರದ ಪ್ರದೇಶಗಳಲ್ಲಿ ಭಯೋತ್ಪಾದಕ ಗುಂಪು ಇರುವ ಬಗ್ಗೆ ಮೇ 12 ರಂದು ಸೇನೆಗೆ ಮಾಹಿತಿ ಸಿಕ್ಕಿತ್ತು. ಮರುದಿನ ಬೆಳಗ್ಗೆ, ಕೆಲವು ಚಲನವಲನಗಳನ್ನು ಕಂಡ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದವು. ಆದರೆ, ಉಗ್ರರು ಗುಂಡು ಹಾರಿಸುವ ಮೂಲಕ ಪ್ರತಿಕ್ರಿಯಿಸಿದರು. ಟ್ರಾಲ್‌ನಲ್ಲಿ ಎರಡನೇ ಕಾರ್ಯಾಚರಣೆಯನ್ನು ಗಡಿ ಗ್ರಾಮದಲ್ಲಿ ನಡೆಸಲಾಯಿತು. 

ಆಪರೇಷನ್ ಟ್ರಾಲ್‌
ಕಠಿಣ ಭೂಪ್ರದೇಶದಲ್ಲಿ ನಡೆದ ಟ್ರಾಲ್ ಕಾರ್ಯಾಚರಣೆಯಲ್ಲಿ ಸೇನೆಯು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಅಧಿಕಾರಿಗಳು ಇಂದು ನಡೆದ ಬ್ರೀಫಿಂಗ್‌ನಲ್ಲಿ ತಿಳಿಸಿದ್ದಾರೆ.

ಪುಲ್ವಾಮಾದಲ್ಲಿ ಒಂದು ಹಳ್ಳಿಯಲ್ಲಿ ಮೂವರು ಭಯೋತ್ಪಾದಕರು ಅಡಗಿಕೊಂಡಿರುವ ಬಗ್ಗೆ ಸೇನೆಗೆ ಮಾಹಿತಿ ಸಿಕ್ಕಿತು. ಸೇನೆಯು ಮೊದಲು ಎಲ್ಲಾ ನಾಗರಿಕರನ್ನು ಸ್ಥಳಾಂತರಿಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಟ್ರಾಲ್ ಕಾರ್ಯಾಚರಣೆ ಅರಣ್ಯದ ಎತ್ತರದ ಪ್ರದೇಶದಲ್ಲಿ ನಡೆದರೆ, ಪುಲ್ವಾಮಾ ಕಾರ್ಯಾಚರಣೆ ಗ್ರಾಮದಲ್ಲಿ ತುಲನಾತ್ಮಕವಾಗಿ ಸಮತಟ್ಟಾದ ಭೂಪ್ರದೇಶದಲ್ಲಿ ನಡೆಯಿತು. ಪುಲ್ವಾಮಾ ಗ್ರಾಮದಲ್ಲಿ ಮೂವರು ಭಯೋತ್ಪಾದಕರನ್ನು ಸೇನೆ ಬಗ್ಗುಬಡಿಯಿತು.

ಪುಲ್ವಾಮಾದಲ್ಲಿ ಹತ್ಯೆಗೀಡಾದ ಮೂವರು ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ (ಜೆಇಎಂ) ಗೆ ಸೇರಿದವರು. ಉಗ್ರರನ್ನು ಆಸಿಫ್ ಅಹ್ಮದ್ ಶೇಖ್, ಅಮೀರ್ ನಜೀರ್ ವಾನಿ ಮತ್ತು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *