Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಲೈವ್ ಸ್ಟ್ರೀಮ್ ವೇಳೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವ್ಯಾಲೆರಿಯಾ ಹತ್ಯೆ

Spread the love

ಮೆಕ್ಸಿಕೋ:ಸುಂದರವಾಗಿರುವ ಕಾರಣಕ್ಕೆ ಕೆಲವರು ಕಿರುಕುಳ ಅನುಭವಿಸಬೇಕಾದ ಪರಿಸ್ಥಿತಿ ಬಂದಿದ್ದನ್ನು ಕೇಳಿರಬಹುದು. ಸಾರ್ವಜನಿಕವಾಗಿ ಓಡಾಡುವಾಗ ಯುವತಿಯರು ಈ ರೀತಿಯ ಕಿರುಕುಳ ಅನುಭವಿಸಿದರ ಬಗ್ಗೆ ಹಲವು ಕಡೆಗಳಲ್ಲಿ ವರದಿ ಆಗಿರುತ್ತದೆ. ಆದರೆ, ಮೆಕ್ಸಿಕೋದಲ್ಲಿ ಸುಂದರುವಾಗಿರುವ ಕಾರಣಕ್ಕೆ 23 ವರ್ಷದ ಸೋಶಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ನ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಟಿಕ್​ಟಾಕ್ಲೈವ್ ಸ್ಟ್ರೀಮಿಂಗ್ ಮಾಡುವಾಗಲೇ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ಶಾಕಿಂಗ್ ವಿಡಿಯೋ ವೈರಲ್ ಆಗಿದೆ.

ವ್ಯಾಲೆರಿಯಾ ಮಾರ್ಕೆಜ್ ಎಂಬುವವರು ಮೃತ ದುರ್ದೈವಿ. ಅವರು ಬ್ಯೂಟಿ ಸಲೂನ್ ಒಂದನ್ನು ನಡೆಸುತ್ತಿದ್ದರು. ಅಲ್ಲಿ ವ್ಯಾಲೆರಿಯಾ ಖುಷಿಯಿಂದ ಲೈವ್​​ಸ್ಟ್ರೀಮ್ ಮಾಡುತ್ತಿದ್ದರು. ಈ ವೇಳೆ ಸಲೂನ್​ಗೆ ಎಂಟ್ರಿ ಕೊಟ್ಟ ಅನಾಮಧೇಯ ವ್ಯಕ್ತಿ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಇದನ್ನು ನೋಡಿ ಅನೇಕರಿಗೆ ಶಾಕ್ ಆಗಿದೆ. ಆ ಬಳಿಕ ಸ್ಥಳಕ್ಕೆ ಪೊಲೀಸರು ಬಂದು ಮೊಬೈಲ್​ನ ವಶಕ್ಕೆ ಪಡೆದಿದ್ದಾರೆ. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ತನಿಖೆ ಪ್ರಗತಿಯಲ್ಲಿದೆ.

ಸೌಂದರ್ಯವೇ ಮುಳುವಾಯ್ತು?

ವ್ಯಾಲೆರಿಯಾ ಅವರಿಗೆ ಸೌಂದರ್ಯವೇ ಮುಳುವಾಯಿತಾ ಎನ್ನುವ ಪ್ರಶ್ನೆ ಮೂಡಿದೆ. ಸೌಂದರ್ಯದ ಕಾರಣಕ್ಕೆ ಅಥವಾ ಹೆಣ್ಣು ಎನ್ನುವ ಕಾರಣಕ್ಕೆ ಹೆಣ್ಣುಮಕ್ಕಳನ್ನು ಕೊಲ್ಲೋದು ಮೆಕ್ಸಿಕೋದಲ್ಲಿ ಸಾಮಾನ್ಯವಾಗಿದೆ. ವಿಶ್ವಸಂಸ್ಥೆಯ ವರದಿ ಪ್ರಕಾರ ಮೆಕ್ಸಿಕೋದಲ್ಲಿ ಈ ರೀತಿ ನಿತ್ಯ 10 ಯುವತಿ/ಮಹಿಳೆಯರ ಕೊಲೆ ಆಗುತ್ತದೆ ಎಂಬುದು ಶಾಕಿಂಗ್ ವಿಚಾರ. ವ್ಯಾಲೆರಿಯಾ ಸಾವಿಗೂ ಇದೇ ಕಾರಣ ಎನ್ನಲಾಗುತ್ತಿದೆ.

ಗೊತ್ತೇ ಆಗಲಿಲ್ಲ..

ವ್ಯಾಲೆರಿಯಾ ಅವರು ಗೊಂಬೆಯನ್ನು ಇಟ್ಟುಕೊಂಡು ಆಟ ಆಡುತ್ತಿದ್ದರು. ಈ ವೇಳೆ ಅವರ ಹೊಟ್ಟೆಗೆ ಶೂಟ್ ಮಾಡಲಾಗಿದೆ. ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ಅವರು ಅಸುನೀಗಿದ್ದಾರೆ. ಆ ಬಳಿಕ ಯಾರೋ ಒಬ್ಬರು ಅವರ ಮೊಬೈಲ್ ತೆಗೆದುಕೊಂಡು ಲೈವ್​ಸ್ಟ್ರೀಮ್​ನ ನಿಲ್ಲಿಸಿದ್ದಾರೆ. ಉಡುಗೊರೆ ಕೊಡೋ ನೆಪದಲ್ಲಿ ಬಂದ ವ್ಯಕ್ತಿ ಈ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವ್ಯಾಲೆರಿಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈಗತಾನೇ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದರು. ಇನ್​ಸ್ಟಾಗ್ರಾಮ್ ಹಾಗೂ ಟಿಕ್​ಟಾಕ್ ಸೇರಿ ಅವರಿಗೆ 2 ಲಕ್ಷ ಹಿಂಬಾಲಕರು ಇದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *