Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೋಮಾ ಸ್ಥಿತಿಯಲ್ಲಿರುವ ಪತಿಯ ಖಾತೆ ಹಣಕ್ಕಾಗಿ ಪತ್ನಿಗೆ ಹೈಕೋರ್ಟ್ ಅನುಮತಿ

Spread the love

ಬೆಂಗಳೂರು: ಅಪರೂಪದ ನರರೋಗದ ಕಾರಣದಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಕೋಮಾ ಸ್ಥಿತಿಯಲ್ಲಿರುವ ವೈದ್ಯರೊಬ್ಬರ 3 ಬ್ಯಾಂಕ್‌ ಖಾತೆಗಳಿಂದ ಹಣ ಡ್ರಾ ಮಾಡಲು ಅವರ ಪತ್ನಿಗೆ ಅನುಮತಿ ನೀಡಿ ಆದೇಶಿಸಿ ಹೈಕೋರ್ಟ್‌ ಮಾನವೀಯತೆ ಮರೆದಿದೆ
ಪತಿ ಐಸಿಯುನಲ್ಲಿ ಇರುವುದರಿಂದ ವೈದ್ಯಕೀಯ ಮತ್ತು ಕುಟುಂಬದ ದೈನದಿನದ ಖರ್ಚು-ವೆಚ್ಚ ಭರಿಸುವ ಸಲುವಾಗಿ ಹಣ ಡ್ರಾ ಮಾಡಲು ತಮಗೆ ಅನುಮತಿ ನೀಡುವಂತೆ ಬ್ಯಾಂಕ್‌ಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ರಾಜಾಜಿನಗರದ ನಿವಾಸಿ ಸಂಧ್ಯಾ (55) ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಅರ್ಜಿ ಪುರಸ್ಕರಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಅರ್ಜಿದಾರರ ಪತಿಯು ಅಪರೂಪದ ಕಾಯಿಲೆಯಿಂದ ನರಳುತ್ತಿದ್ದಾರೆ. ಇದರಿಂದ ಸಂಧ್ಯಾ ಅವರನ್ನು ಪತಿಯ ಗಾರ್ಡಿಯನ್‌ (ಪಾಲಕರು) ಆಗಿ ನೇಮಿಸಲಾಗುತ್ತಿದೆ. ತಮ್ಮ ಪತಿಗೆ ಸೇರಿದ ಖಾತೆಗಳಿಂದ ಹಣ ಡ್ರಾ ಮಾಡಲು ಸಂಧ್ಯಾ ಅವರಿಗೆ ಬ್ಯಾಂಕ್‌ಗಳು ಅನುಮತಿ ನೀಡಬೇಕು. ಆ ವಿಚಾರದಲ್ಲಿ ಬ್ಯಾಂಕುಗಳಿಂದ ವಿಳಂಬ ಆಗಬಾರದು. ಮತ್ಯಾವುದೇ ಅಗತ್ಯ ಪರಿಸ್ಥಿತಿ ಎದುರಾದರೂ ಅರ್ಜಿದಾರರು ಪುನಃ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಆದೇಶಿಸಿದೆ.

ಪ್ರಕರಣವೇನು?: ಸಂಧ್ಯಾ ಪತಿ ಡಾ. ಎಚ್‌. ವಿ.ಅನಿಲ್‌ ಕುಮಾರ್‌ 2024ರ ನ.12ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಆದರೆ, ನಿವೃತ್ತಿ ಹೊಂದುವ ಕೆಲವೇ ತಿಂಗಳ ಮುನ್ನ ಅವರಿಗೆ ಹಲವು ಆರೋಗ್ಯ ಸಮಸ್ಯೆ ಕಂಡು ಬಂದಿತ್ತು. ಇದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 2024ರ ಜೂ.23ರಿಂದ ಅವರು ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಆಧಾರದಲ್ಲಿ ತೀವ್ರ ನಿಗಾ ಘಟಕದಲ್ಲಿದ್ದಾರೆ.

ಬೆಂಗಳೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ನರವಿಜ್ಞಾನ ವಿಭಾಗದ ವೈದ್ಯರು ಡಾ.ಅನಿಲ್‌ ಕುಮಾರ್‌ “ಗ್ವಿಲೆನ್‌ ಬ್ಯಾರೆ ಸಿಂಡ್ರೋಮ…’ ಎಂಬ ಅಪರೂಪದ ನರ ರೋಗದಿಂದ ಬಳಲುತ್ತಿದ್ದಾರೆ ಎಂದು ಪ್ರಮಾಣೀಕರಿಸಿ, ವೆಂಟಿಲೇ ಟರ್‌ ಅಲ್ಲಿಯೇ ಮುಂದುವರಿಯಬೇಕು ಎಂದು 2024ರ ನ.29ರಂದು ಸೂಚಿಸಿದ್ದರು. ಅದರಂತೆ ಅವರು ವೆಂಟಿಲೇಟರ್‌ನಲ್ಲೇ ಇದ್ದಾರೆ. ಅವರಿಗೆ ಬರೆ ಯುಲು, ಸಹಿ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಪತಿಯ ಬ್ಯಾಂಕ್‌ ಖಾತೆಗಳನ್ನು ನಿರ್ವಹಣೆ ಮಾಡಲು ಮತ್ತು ಖಾತೆಯಿಂದ ಹಣ ವಿತ್‌ ಡ್ರಾ ಮಾಡಲು ತಮಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ಸಂಧ್ಯಾ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು


Spread the love
Share:

administrator

Leave a Reply

Your email address will not be published. Required fields are marked *