Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆಪರೇಷನ್ ಸಿಂದೂರದ ಪರಿಣಾಮ: ಚೀನಾದ ಜೆಟ್ ತಯಾರಕ ಕಂಪನಿಗೆ ಷೇರುಮಾರುಕಟ್ಟೆಯಲ್ಲಿ ಹಿನ್ನಡೆ

Spread the love

ನವದೆಹಲಿ: ಚೀನಾದ ಫೈಟರ್ ಜೆಟ್​​ಗಳನ್ನು ತಯಾರಿಸುವ ಎವಿಐಸಿ ಚೆಂಗಡು ಏರ್​​​ಕ್ರಾಫ್ಟ್ ಕಂಪನಿಯ ಷೇರುಬೆಲೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಕುಸಿಯುತ್ತಿದೆ. ಆಪರೇಷನ್ ಸಿಂದೂರದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾಷಣದವರೆಗೂ ಈ ಕಂಪನಿ ಷೇರುಬೆಲೆ ಏರಿಕೆ ಕಾಣುತ್ತಾ ಬಂದಿತ್ತು. ಮೋದಿ ತಮ್ಮ ಭಾಷಣದಲ್ಲಿ ಚೀನೀ ಶಸ್ತ್ರಾಸ್ತ್ರಗಳು ಹೇಗೆ ವಿಫಲವಾದವು ಎಂಬುದನ್ನು ಜಾಹೀರುಗೊಳಿಸಿದರೋ, ಆಗಿನಿಂದ ಈ ಕಂಪನಿಯ ಷೇರುಬೆಲೆ ಇಳಿಕೆಯಾಗುತ್ತಾ ಬಂದಿದೆ. ಮೂರು ದಿನದಲ್ಲಿ ಶೇ. 11.5ರಷ್ಟು ಕುಸಿತ ಕಂಡಿದೆ.

ಆಪರೇಷನ್ ಸಿಂದೂರದಲ್ಲಿ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನವು ಚೀನಾದ ಜೆ-10 ಫೈಟರ್ ಜೆಟ್​​ಗಳು ಹಾಗೂ ಪಿಎಲ್-15 ಕ್ಷಿಪಣಿ, ಟರ್ಕಿಯ ಡ್ರೋನ್​​ಗಳು ಇತ್ಯಾದಿಯನ್ನು ಬಳಸಿತ್ತು. ಚೀನಾದ ಡಿಫೆನ್ಸ್ ಸಿಸ್ಟಂ ಅನ್ನೂ ನಿಯೋಜಿಸಿತ್ತು ಪಾಕಿಸ್ತಾನ. ಆದರೆ, ಭಾರತದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಚೀನೀ ಡಿಫೆನ್ಸ್ ಸಿಸ್ಟಂ ನಿಷ್ಕ್ರಿಯಗೊಂಡಿತು. ಪಾಕಿಸ್ತಾನದಿಂದ ದಾಳಿ ಮಾಡಲು ಬಳಸಿದ್ದ ಫೈಟರ್ ಜೆಟ್​​ಗಳು ಹಾಗೂ ಕ್ಷಿಪಣಿಗಳು ಭಾರತದ ಡಿಫೆನ್ಸ್ ಸಿಸ್ಟಂನಿಂದ ನಾಶಗೊಂಡವು ಎನ್ನಲಾಗಿದೆ.

ಪ್ರಧಾನಿಗಳು ಮೂರು ದಿನಗಳ ಹಿಂದೆ ತಮ್ಮ ಭಾಷಣದಲ್ಲಿ ಆಪರೇಷನ್ ಸಿಂದೂರ ಯಶಸ್ವಿಯಾಗಿರುವ ಬಗ್ಗೆ ಹೇಳಿದ್ದರು. ಅದಕ್ಕೂ ಮುನ್ನ ಭಾರತದ ವಿವಿಧ ಪಡೆಗಳ ಡಿಜಿಗಳು ಆಪರೇಷನ್ ಸಿಂದೂರದ ಯಶಸ್ವಿ ಕಾರ್ಯಾಚರಣೆಯ ವಿವರ ನೀಡಿದರು. ಪಾಕಿಸ್ತಾನದ ವಿವಿಧ ಮಿಲಿಟರಿ ನೆಲೆಗಳನ್ನು ನಾಶ ಮಾಡಲಾಗಿದ್ದನ್ನು ಉಪಗ್ರಹ ಚಿತ್ರಗಳ ಮೂಲಕ ಸಾಕ್ಷ್ಯಗಳನ್ನು ತೋರಿಸಿದ್ದಾರೆ.

ಭಾರತದ ಬಳಸಿದ ರಫೇಲ್ ಜೆಟ್​​ಗಳನ್ನು ತಯಾರಿಸುವ ಫ್ರಾನ್ಸ್​​​ನ ಡಸೋ ಏವಿಯೇಶನ್ ಕಂಪನಿಯ ಷೇರುಬೆಲೆ ಕಳೆದ ಮೂರು ದಿನಗಳಿಂದ ಏರುತ್ತಿರುವುದೂ ಗಮನಾರ್ಹ. ಆಪರೇಷನ್ ಸಿಂದೂರ ಆರಂಭವಾದಾಗಿನಿಂದ ಭಾರತದ ಡಿಫೆನ್ಸ್ ಸ್ಟಾಕ್​​ಗಳೂ ಕೂಡ ಉತ್ತಮ ಸ್ಪಂದನೆ ಪಡೆಯುತ್ತಿವೆ. ಎಚ್​​ಎಎಲ್, ಬಿಇಎಲ್ ಷೇರುಗಳು ಗಣನೀಯವಾಗಿ ಏರುತ್ತಿವೆ.


Spread the love
Share:

administrator

Leave a Reply

Your email address will not be published. Required fields are marked *