Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಥಣಿಯಲ್ಲಿ ಅಪರಿಚಿತ ಬಾಲಕನ ಕೊಲೆ ಪ್ರಕರಣಕ್ಕೆ ತಿರುವು – 6 ಆರೋಪಿಗಳು ಬಂಧನ

Spread the love

ಬೆಳಗಾವಿ: ಅಥಣಿ ಪಟ್ಟಣದ ಹೊರವಲಯದ ಖಾಲಿ ನಿವೇಶನದಲ್ಲಿ ಮೇ 01 ರಂದು ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಬಾಲಕನ ಶವ ಸಿಕ್ಕಿತ್ತು. ಅನಾಥ ಶವ ಎಂದು ಪೊಲೀಸರು ಶವ ಸಂಸ್ಕಾರ ಮಾಡಿದ್ದರು. ಶವ ಸಂಸ್ಕಾರ ನಡೆದ ಎರಡು ದಿನಗಳ ಬಳಿಕ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಬಾಲಕನ ಗುರುತು ಪತ್ತೆಯಾಗಿದೆ. ಅಥಣಿ ತಾಲೂಕಿನ ಅರಳಿಹಟ್ಟಿ ಗ್ರಾಮದ ವಿಕಾಸ ಶಿವದಾಸ ಕೋಷ್ಠಿ (16) ಮೃತ ಬಾಲಕ.

ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಬಾಲಕನದ್ದು ಸಹಜ ಸಾವಲ್ಲ, ಕೊಲೆ ಎಂದು ತಿಳಿದಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಅಬ್ದುಲ್ ಬಾರಿ ಮುಲ್ಲಾ (36), ಜೂಬೇರ ಅಹಮದ್ ಮೌಲ್ವಿ(34), ಬಿಲಾಲ್ ಅಹಮದ್ ಮೌಲ್ವಿ (25), ಹಜರತ್ ಬಿಲಾಲ್ ನಾಲಬಂದ್(27), ಮಹೇಶ ಕಾಳೆ (36) ​ಬಂಧಿತರು.

ಅಥಣಿ ಪಟ್ಟಣದ ಹೊರವಲಯದಲ್ಲಿರುವ ಕಾಳೆ ಫರ್ನಿಚರ್ಸ್​​​ನಲ್ಲಿ ವಿಕಾಸ ಕಳ್ಳತನ ಮಾಡಲು ಬಂದಿದ್ದಾನೆಂದು ತಿಳಿದು, ಆತನನ್ನು ರಾತ್ರಿ ಶೇಡ್​ನಲ್ಲಿ ಕಟ್ಟಿ ಹಾಕಿ ಹಲ್ಲೆ ಮಾಡಿ ಹತ್ಯೆಗೈಯಲಾಗಿದೆ. ಕೃತ್ಯ ಮುಚ್ಚಿಹಾಕಲು ವಿಕಾಸ ಶವದ ಮೇಲೆ ಆ್ಯಸಿಡ್​ ಹಾಕಿ ಚರಂಡಿಗೆ ಬಿಸಾಕಿ ಹಾಕಿದ್ದರು. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಳಿಯನನ್ನೇ ಕೊಚ್ಚಿ ಕೊಲೆ ಮಾಡಿದ ಮಾವ

ಯಾದಗಿರಿ: ಸಾಲದ ವಿಚಾರಕ್ಕೆ ಮಾವ ಅಳಿಯನನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಹುಣಸಗಿ ತಾಲೂಕಿನ ಶಾಖಾಪುರ(ಎಸ್.ಕೆ) ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಣ ಚಿಗರಿಹಾಳ (28) ಮೃತ ದುರ್ದೈವಿ. ಸೋದರ ಮಾವ ಮಾನಪ್ಪ ಕೊಲೆ ಮಾಡಿದ ಆರೋಪಿ.

ಕೊಟ್ಟ ಸಾಲ ವಾಪಸ್ ಕೊಡುವಂತೆ ಕೇಳಿದ್ದಕ್ಕೆ ಲಕ್ಷ್ಮಣ ಚಿಗರಿಹಾಳ ಮಾವ ಮಾನಪ್ಪಗೆ ಕೇಳಿದ್ದರು. ಇಷ್ಟಕ್ಕೆ ಬಹಿರ್ದೆಸೆಗೆ ತೆರಳುತ್ತಿದ್ದ ಅಳಿಯ ಲಕ್ಷ್ಮಣ ಚಿಗರಿಹಾಳನನ್ನು ಕೊಡಲಿಯಿಂದ ಕೊಚ್ಚಿ ಮಾವ ಮಾನಪ್ಪ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಎಸ್​​ಪಿ ಪೃಥ್ವಿಕ್ ಶಂಕರ್, ಡಿವೈಎಸ್​ಪಿ ಜಾವೀದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಾನಪ್ಪನನ್ನು ಪೋಲಿಸರು ಬಂಧಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *