Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರಿನಲ್ಲಿ ಟಿಂಟೆಡ್ ಗ್ಲಾಸ್ ವಿರುದ್ಧ ವಿಶೇಷ ಕಾರ್ಯಾಚರಣೆ: 504 ಕಾರುಗಳಿಗೆ ದಂಡ

Spread the love

ಮಂಗಳೂರು : ನಗರದ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳು ಬ್ಲಾಕ್‌ ಫಿಲ್ಮ್‌( ಸನ್‌ ಫಿಲ್ಮ್‌) ಅಥವಾ ಟಿಂಟೆಡ್ ಗ್ಲಾಸ್‍ಗಳನ್ನು ಅಳವಡಿಸಿ ಸಂಚಾರಿಸುವ ವಾಹನಗಳನ್ನು ಪತ್ತೆ ಹಚ್ಚಿ ಕಾರುಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಕಳೆದ 10 ದಿನಗಳಲ್ಲಿ ಅಂದರೆ ಮೇ 2 ರಿಂದ 11 ವರೆಗೆ ಒಟ್ಟು 504 ಕಾರುಗಳ ವಿರುದ್ದ ಪ್ರಕರಣವನ್ನು ದಾಖಲಿಸಿ ರೂ.2,53,000 ದಂಡ ವಿಧಿಸಲಾಗಿದೆ. ಅಲ್ಲದೇ ವಾಹನಗಳಿಗೆ ಅಳವಡಿಸಿರುವ ಟಿಂಟೆಡ್ ಗ್ಲಾಸ್ ಹಾಗೂ ಬ್ಲಾಕ್ ಫಿಲ್ಮಂ ಸ್ಟಿಕರ್‌ಗಳನ್ನು ವಾಹನ ಚಾಲಕರಿಂದ ತೆಗೆಸಿ ಪೊಲೀಸರು ಸೂಕ್ತ ತಿಳುವಳಿಕೆಯನ್ನು ನೀಡಿದರು.ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸ್ ವತಿಯಿಂದ ವಿವಿಧ ಕಡೆಗಳಲ್ಲಿ ವಿಶೇಷ ಚೆಕ್‍ಪೋಸ್ಟ್‌ಗಳನ್ನು ತೆರೆದು ವಾಹನಗಳ ತಪಾಸಣೆ ಕಾರ್ಯವನ್ನು ವಾಹನಗಳ ದಾಖಲಾತಿಗಳ ಪರಿಶೀಲನೆಯನ್ನು ನಡೆಸಲಾಯಿತು. ವಿಶೇಷ ಕಾರ್ಯಚಾರಣೆಯು ಮುಂದಿನ ದಿನಗಳಲ್ಲಿ ಮುಂದುವರೆಯಲಿದ್ದು, ಸಾರ್ವಜನಿಕರು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ವಾಹನಗಳ ಗಾಜುಗಳಿಗೆ ಹೆಚ್ಚುವರಿಯಾಗಿ ಟಿಂಟ್‍ಗಳನ್ನು ಅಳವಡಿಸದಂತೆ ತಿಳುವಳಿಕೆ ನೀಡಲಾಯಿತು.

ಸಾರ್ವಜನಿಕರಿಗೆ ವಿಶೇಷ ಸೂಚನೆ:1. ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ವಾಹನಗಳಲ್ಲಿ ಟಿಂಟೆಡ್‌ ಗ್ಲಾಸ್‌ ಮತ್ತು ಬ್ಲಾಕ್‌ ಫಿಲ್ಮಂಗಳನ್ನು ಅಳವಡಿಸುವವರ ವಿರುದ್ಧ ಕ್ರಮಕೈಗೊಳ್ಳಲು ಮತ್ತು ಸದ್ರಿ ಟಿಂಟೆಡ್‌ ಗ್ಲಾಸ್ಗಳನ್ನು ತೆರವುಗೊಳಿಸುವಂತೆ ಆದೇಶಿಸಿರುತ್ತದೆ.2. ವಾಹನಗಳ ಗಾಜುಗಳಿಗೆ ಬ್ಲಾಕ್ ಫಿಲ್ಮ್(ಸನ್ ಫಿಲ್ಮ್) ಅಥವಾ ಇತರೆ ವಸ್ತುಗಳನ್ನು ಅಂಟಿಸುವಂತಿಲ್ಲ.3. ಸಾರ್ವಜನಿಕರು ತಮ್ಮ ವಾಹನಗಳಿಗೆ ಅಳವಡಿಸಲಾಗಿರುವ ಬ್ಲಾಕ್ ಫಿಲ್ಮ್(ಸನ್ ಫಿಲ್ಮ್) ಅಥವಾ ಇತರೆ ವಸ್ತುಗಳನ್ನು ಸ್ವತಃ ತೆಗೆದು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವುದು.4. ಮೇಲ್ಕಂಡ ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆಯನ್ವಯ ಸೂಕ್ತ ಕ್ರಮ


Spread the love
Share:

administrator

Leave a Reply

Your email address will not be published. Required fields are marked *