ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾದರೆ ಎಚ್ಚರ! ಪಾಲಿಸೈಥಿಮಿಯಾದ ಲಕ್ಷಣಗಳನ್ನು ತಿಳಿದುಕೊಳ್ಳಿ

ಹಿಮೋಗ್ಲೋಬಿನ್ ಎಂದರೆ ರಕ್ತಕಣಗಳಲ್ಲಿ ಇರುವ ಒಂದು ಪ್ರೋಟೀನ್ ಆಗಿದ್ದು, ಅದು ಶ್ವಾಸದಿಂದ ಆಮ್ಲಜನಕವನ್ನು ಶರೀರದ ಎಲ್ಲ ಭಾಗಗಳಿಗೆ ತಲುಪಿಸಲು ಸಹಾಯ ಮಾಡುತ್ತದೆ. ಸಾಮಾನ್ಯ ಮಟ್ಟಕ್ಕಿಂತ ಹೆಚ್ಚು ಹಿಮೋಗ್ಲೋಬಿನ್ ಇದ್ದರೆ, ಅದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಇದನ್ನು “ಪಾಲಿಸೈಥಿಮಿಯಾ” (Polycythemia) ಎಂದು ಕರೆಯಲಾಗುತ್ತದೆ. ಹೆಚ್ಚಿನ ಹಿಮೋಗ್ಲೋಬಿನ್ ಪ್ರಮಾಣವು ರಕ್ತ ದಪ್ಪವಾಗಲು ಕಾರಣವಾಗುತ್ತದೆ ಹಾಗೂ ಹೃದಯದ ಮೇಲೆ ಹೆಚ್ಚಾದ ಒತ್ತಡವನ್ನು ಉಂಟುಮಾಡಬಹುದು. ಇವತ್ತು ನಾವು ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಾದರೆ ತಿಳಿದುಕೊಳ್ಳುವುದು ಹೇಗೆ ಎಂದು ನೋಡೋಣ.
ತಲೆನೋವು
ಹಿಮೋಗ್ಲೋಬಿನ್ ಹೆಚ್ಚಿದಾಗ, ರಕ್ತ ದಪ್ಪವಾಗುತ್ತದೆ. ಇದರಿಂದ ಮೆದುಳಿಗೆ ರಕ್ತ ಹರಿಯುವುದಕ್ಕೆ ಅಡಚಣೆ ಉಂಟಾಗಬಹುದು, ಇದು ಸಾಮಾನ್ಯವಾಗಿ ತೀವ್ರ ತಲೆನೋವಿಗೆ ಕಾರಣವಾಗುತ್ತದೆ.
ದಣಿವು ಅಥವಾ ಉಸಿರಾಟದಲ್ಲಿ ತೊಂದರೆ
ಹೃದಯಕ್ಕೆ ಹೆಚ್ಚು ಕೆಲಸ ಮಾಡಬೇಕಾಗಿರುವುದರಿಂದ, ನಿಮಗೆ ದೀರ್ಘ ಕಾಲ ನಡೆಯುವ ಅಥವಾ ವ್ಯಾಯಾಮ ಮಾಡಿದಾಗ ದಣಿವು ಅಥವಾ ಉಸಿರಾಟದಲ್ಲಿ ತೊಂದರೆ ಆಗಬಹುದು.
ಕೆಂಪಾದ ಚರ್ಮ ಅಥವಾ ಮುಖ
ಹಿಮೋಗ್ಲೋಬಿನ್ ಹೆಚ್ಚಿದಾಗ, ಚರ್ಮದ ಕೆಳಭಾಗದಲ್ಲಿ ರಕ್ತದ ಹರಿವು ಹೆಚ್ಚಾಗುವುದರಿಂದ ಮುಖ ಅಥವಾ ಇತರ ಅಂಗಗಳಲ್ಲಿ ಕೆಂಪಗಾಗುತ್ತವೆ.
ಗಾಬರಿಯ (Anxiety) ಮತ್ತು ನಿದ್ರಾಹೀನತೆ
ಹೃದಯದ ವೇಗ ಹೆಚ್ಚಾಗುವ ಕಾರಣದಿಂದಾಗಿ ನೀವು ನಿದ್ರೆ ಮಾಡಲು ಕಷ್ಟಪಡುವ ಸಾಧ್ಯತೆ ಇದೆ. ಇದರ ಜೊತೆಗೆ ಮನಸ್ಸಿನಲ್ಲಿ ಗಾಬರಿ ಅಥವಾ ಒಂದು ರೀತಿಯ ಸಂಕಟ ಉಂಟಾಗಬಹುದು.
ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು
ಹೆಚ್ಚಿನ ಹಿಮೋಗ್ಲೋಬಿನ್ ದಪ್ಪ ರಕ್ತಕ್ಕೆ ಕಾರಣವಾಗುವುದರಿಂದ ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದು ಕಾಲಾನಂತರದಲ್ಲಿ ಹೃದಯಾಘಾತ ಅಥವಾ ಬಿಪಿಯಂತಹ ತೊಂದರೆಗಳಿಗೆ ಕಾರಣವಾಗಬಹುದು.
ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿದರೆ ಅದು ಆರೋಗ್ಯಕ್ಕೆ ಗಂಭೀರವಾದ ಪರಿಣಾಮ ಉಂಟುಮಾಡಬಹುದು. ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.