ತಾಯಿಯ ಪ್ರಿಯಕರರಿಂದ ಬಾಲಕನ ಹತ್ಯೆ : ಶವವನ್ನು ಸೂಟ್ಕೇಸ್ನಲ್ಲಿ ಪತ್ತೆಹಚ್ಚಿದ ಪೊಲೀಸರು

ಗುವಾಹಟಿ: ತಾಯಿಯ ಪ್ರಿಯಕರನೇ 10 ವರ್ಷದ ಬಾಲಕನನ್ನು ಕೊಲೆಮಾಡಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ. ಬಾಲಕನನ್ನು ಪೊದೆಯ ಬಳಿಕ ಕೊಂದು ಸೂಟ್ಕೇಸ್ನಲ್ಲಿ ಮುಚ್ಚಿಟ್ಟಿದ್ದ ಎನ್ನಲಾಗಿದೆ. ತನ್ನ ಮಗು ಟ್ಯೂಷನ್ನಿಂದ ಮನೆಗೆ ಹಿಂತಿರುಗಿಲ್ಲ ಎಂದು ಮಹಿಳೆ ಶನಿವಾರ ಪೊಲೀಸರಿಗೆ ನಾಪತ್ತೆ ದೂರು ನೀಡಿದ ನಂತರ ತನಿಖೆ ಆರಂಭಿಸಲಾಯಿತು.
ತನಿಖೆಯ ಸಮಯದಲ್ಲಿ, ಪತಿಯಿಂದ ಬೇರ್ಪಟ್ಟ ಮಹಿಳೆ ಜಿತುಮೋನಿ ಹಲೋಯ್ ಎಂಬ ಇನ್ನೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಪೊಲೀಸರಿಗೆ ತಿಳಿದುಬಂದಿದೆ. ಪೊಲೀಸರು ಆತನನ್ನು ವಿಚಾರಿಸಿ ಸೂಟ್ಕೇಸ್ ಇರುವ ಸ್ಥಳಕ್ಕೆ ಕರೆದೊಯ್ದಾಗ ಆತ ಅಪರಾಧ ಒಪ್ಪಿಕೊಂಡಿದ್ದಾನೆ.
ನಂತರ ನಗರದ ಹೊರವಲಯದಲ್ಲಿರುವ ಪೊದೆಯೊಂದರಲ್ಲಿ ಸೂಟ್ಕೇಸ್ನಲ್ಲಿ ತುಂಬಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಹಿಳೆಯನ್ನು ಸಹ ವಶಕ್ಕೆ ಪಡೆಯಲಾಗಿದ್ದು, ಕೊಲೆಯಲ್ಲಿ ಆಕೆಯ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಮಹಿಳೆಯಿಂದ ಬೇರ್ಪಟ್ಟಿರುವ ಮಗುವಿನ ತಂದೆ ಕೂಡ ಪೊಲೀಸರಲ್ಲಿ ಹೇಳಿಕೆ ದಾಖಲಿಸಿದ್ದಾರೆ.