ಭಾರತ-ಪಾಕಿಸ್ತಾನ ಉದ್ವಿಗ್ನತೆ ಹಿನ್ನೆಲೆಯಲ್ಲಿ ICAI ಸಿಎ ಪರೀಕ್ಷೆಗಳು ಮುಂದೂಡಿಕೆ

ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಸಂಸ್ಥೆಯು ಚಾರ್ಟರ್ಡ್ ಅಕೌಂಟೆಂಟ್ಸ್ ಫೈನಲ್, ಇಂಟರ್ಮೀಡಿಯೇಟ್ ಮತ್ತು ಪೋಸ್ಟ್ ಕ್ವಾಲಿಫಿಕೇಶನ್ ಕೋರ್ಸ್ ಪರೀಕ್ಷೆಗಳ ಉಳಿದ ಪತ್ರಿಕೆಗಳ ಪರೀಕ್ಷೆಯನ್ನು ಮುಂದೂಡಿದೆ. ಈ ಪರೀಕ್ಷೆಗಳು ಮೇ 9 ರಿಂದ 14 ರವರೆಗೆ ನಿಗದಿಯಾಗಿದ್ದವು.

ICAI ಸಂಸ್ಥೆಯ ಪ್ರಮುಖ ಪ್ರಕಟಣೆಯಲ್ಲಿ ದೇಶದಲ್ಲಿನ ಉದ್ವಿಗ್ನ ಮತ್ತು ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಚಾರ್ಟರ್ಡ್ ಅಕೌಂಟೆಂಟ್ಸ್ ಫೈನಲ್, ಇಂಟರ್ಮೀಡಿಯೇಟ್ ಮತ್ತು ಪೋಸ್ಟ್ ಕ್ವಾಲಿಫಿಕೇಶನ್ ಕೋರ್ಸ್ ಪರೀಕ್ಷೆಗಳ (ಅಂತಾರಾಷ್ಟ್ರೀಯ ತೆರಿಗೆ ಮೌಲ್ಯಮಾಪನ ಪರೀಕ್ಷೆ (INTT AT)ಮೇ 2025 ರ ಉಳಿದ ಪತ್ರಿಕೆಗಳನ್ನು ಮೇ 9, 2025 ರಿಂದ ಮೇ 14, 2025 ರವರೆಗೆ ಮುಂದೂಡಲಾಗಿದೆ ಎಂದು ಸಾರ್ವಜನಿಕರಿಗೆ ತಿಳಿಸಿದೆ. ಮುಂದೂಡಲ್ಪಟ್ಟ ಪರೀಕ್ಷೆಗಳ ಪರಿಷ್ಕೃತ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಈ ಬಗ್ಗೆ ಸಿಎ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್ www.icai.org ನ್ನೂ ಆಗಾಗ ಗಮನಿಸುತ್ತಿರುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.