Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಡಿಕೆ, ಕಾಳು ಮೆಣಸು ಬೆಲೆಗಳಲ್ಲಿ ಬದಲಾವಣೆ – ಹಳೆಯ ಮತ್ತು ಹೊಸ ದರಗಳ ವ್ಯತ್ಯಾಸ

Spread the love

ಬೆಂಗಳೂರು: ಕಳೆದ ಎರಡು ದಿನಗಳಿಂದ ಅಡಿಕೆ ಬೆಲೆ ಏರಿಕೆಯಾಗಿ ಬೆಳೆಗಾರರು ಖುಷಿಯಾಗಿದ್ದರು. ಆದರೆ ಇಂದು ಹೊಸ ಅಡಿಕೆ ಬೆಲೆ ಇಳಿಕೆಯಾಗಿದ್ದರೆ ಉಳಿದ ವರ್ಗದ ಅಡಿಕೆ ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಹೇಗಿದೆ ಇಲ್ಲಿದೆ ವಿವರ. ಕಳೆದ ಎರಡು ದಿನಗಳಿಂದ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು.

ಆದರೆ ಇಂದು ಅಡಿಕೆ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಹೊಸ ಅಡಿಕೆ ಬೆಲೆ ಇಳಿಕೆಯಾಗಿದ್ದರೆ ಮತ್ತು ಹಳೆ ಅಡಿಕೆ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಹೊಸ ಅಡಿಕೆ ಬೆಲೆ 460 ರೂ.ಗಳಿಗೆ ಇಳಿಕೆಯಾಗಿದೆ. ಹಳೆ ಅಡಿಕೆ ಬೆಲೆ ಗರಿಷ್ಠ 500 ರೂ.ಗಳಷ್ಟಿದೆ. ಇಂದು ಡಬಲ್ ಚೋಲ್ ಬೆಲೆ ಗರಿಷ್ಠ 510 ರೂ.ಗಳಷ್ಟಿದೆ.

ಪಟೋರ ಮತ್ತು ಇತರೆ ಅಡಿಕೆ ಬೆಲೆಯಲ್ಲಿ ಹೆಚ್ಚು ಕಡಿಮೆಯಾಗಿಲ್ಲ. ಹೊಸ ಫಟೋರ ದರ ಇಂದು 360 ರೂ.ಗಳಷ್ಟಿದೆ. ಹಳೆ ಫಟೋರ ದರ 370 ರೂ. ಗಳಷ್ಟಾಗಿದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಹೊಸ ಉಳ್ಳಿಗೆ ಗರಿಷ್ಠ 250 ರೂ., ಹಳೆ ಉಳ್ಳಿ ದರವೂ 250 ರೂ.ಗೆ ಗಳಷ್ಟಿದೆ. ಹೊಸ ಕೋಕ ದರವೂ ಯಥಾಸ್ಥಿತಿಯ್ಲಿದ್ದು 300 ರೂ.ಆಗಿದೆ. ಹಳೇ ಕೋಕ 300 ರೂ. ಗಳಷ್ಟೇ ಇದೆ.

ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಕಳೆದ ವಾರ ಸತತವಾಗಿ ಬೆಲೆ ಇಳಿಕೆಯಾಗಿ ನಿರಾಸೆಯಾಗಿತ್ತು. ಇಂದು ಕಾಳುಮೆಣಸು ದರ 665 ರೂ.ಗಳಷ್ಟಕ್ಕೆ ಇಳಿಕೆಯಾಗಿದೆ. ಇನ್ನು ಒಣಕೊಬ್ಬರಿ ಬಹಳ ದಿನಗಳ ನಂತರ ಏರಿಕೆಯಾಗಿದ್ದು ಗರಿಷ್ಠ 180 ರೂ.ಗಳಷ್ಟಾಗಿದೆ.


Spread the love
Share:

administrator

Leave a Reply

Your email address will not be published. Required fields are marked *