Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಿಳಿ ಬ್ರೆಡ್ ನಿಂದ ಕರುಳಿಗೆ ಹೊಡೆತ! ದಿನನಿತ್ಯ ತಿನ್ನುವುದು ಆತಂಕದಾಯಕ ಎನ್ನುತ್ತಾರೆ ತಜ್ಞರು

Spread the love

ಇಂದಿಗೂ ನಮ್ಮಲ್ಲಿ ಹಲವರು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಟೀ ಜೊತೆ ಒಂದೆರೆಡು ಪೀಸ್ ಬ್ರೆಡ್ ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಇದು ತುಂಬಾ ಸಾಮಾನ್ಯವಾಗಿಬಿಟ್ಟಿದೆ. ಇನ್ನು ಕೆಲವರು ಡಯಟ್ ಹೆಸರಿನಲ್ಲಿ ಬೆಳಗ್ಗೆ ಸಮಯದ ತಿಂಡಿಯಾಗಿ ಬ್ರೆಡ್ ಜೊತೆಗೆ ತಮಗೆ ಬೇಕಾದ ಅಡುಗೆಯನ್ನು ಬಹಳ ಸರಳವಾಗಿ ಮಾಡಿಕೊಂಡು ಸೇವಿಸುತ್ತಾರೆ.

ಬೆಳಗ್ಗಿನ ತಿಂಡಿ ಈಗ ಬ್ರೆಡ್ ಆಗಿ ಬದಲಾಗಿರುವುದು ಅಚ್ಚರಿ ಸಂಗತಿಯೇನಲ್ಲ. ಇತ್ತೀಚಿನ ದಿನಗಳಲ್ಲಿ ಇದನ್ನು ತಿಂದು ಕೆಲಸಕ್ಕೆ ಹೋಗುವವರ ಸಂಖ್ಯೆಯೇ ಹೆಚ್ಚು.

ಡಾ. ಮಿಕ್ಕಿ ಮೆಹ್ತಾ ವಿವರಣೆ

ಬ್ರೆಡ್ ಜಾಮ್ ಮತ್ತು ಹಾಲು ಬ್ರೆಡ್ ಸೇವನೆ ಹಲವರ ನೆಚ್ಚಿನ ತಿನಿಸು. ಅಷ್ಟಕ್ಕೂ ಬ್ರೆಡ್ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ನಿಮಗೆ ಗೊತ್ತಿದ್ಯಾ? ಇದರ ಬಗ್ಗೆ ನಿಮಗೆ ತಿಳಿದರೆ ಖಂಡಿತ ನೀವು ಮತ್ತೆ ಬ್ರೆಡ್ ಇರಲಿ ಅದರ ತುಂಡನ್ನೂ ಮುಟ್ಟುವುದಿಲ್ಲ. ಅಂತಹ ಅಚ್ಚರಿ ಮಾಹಿತಿ ಇದೀಗ ಹೊರಬಿದ್ದಿದೆ. ದೀರ್ಘಾವಧಿಯಲ್ಲಿ ನಮ್ಮ ಆರೋಗ್ಯದ ಮೇಲೆ ಬ್ರೆಡ್ ಸೇವನೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಮುಖೇಶ್ ಅಂಬಾನಿಯವರ ಆರೋಗ್ಯ ತರಬೇತುದಾರ ಡಾ. ಮಿಕ್ಕಿ ಮೆಹ್ತಾ ವಿವರಿಸಿದ್ದಾರೆ.

ಮಿಕ್ಕಿ ಮೆಹ್ತಾ ಅವರು ಅಂಬಾನಿ ಮತ್ತು ಸಚಿನ್ ಸೇರಿದಂತೆ ಅನೇಕ ಉನ್ನತ ಕೈಗಾರಿಕೋದ್ಯಮಿಗಳು ಮತ್ತು ಸೆಲೆಬ್ರಿಟಿಗಳಿಗೆ ಹೆಲ್ತ್ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಬ್ರೆಡ್‌ನಿಂದ ಆಗುವ ಅಡ್ಡಪರಿಣಾಮಗಳ ಕುರಿತು ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದಾರೆ. ‘ನೀವು ಪ್ರತಿದಿನ ಬ್ರೆಡ್ ತಿಂದರೆ, ನಿಮ್ಮ ಕರುಳುಗಳಿಗೆ ಹೊಡೆತ ಬೀಳುತ್ತದೆ’ ಎಂದು ಮಿಕ್ಕಿ ಎಚ್ಚರಿಸಿದ್ದಾರೆ.

ದಿನನಿತ್ಯ ಬ್ರೆಡ್ ಸೇವನೆಯ ಅಪಾಯಗಳು

‘ಬ್ರೆಡ್ ಸೇವಿಸುವುದು ಭಾರತೀಯರ ಬೆಳಗಿನ ದಿನಚರಿಯ ಸಾಮಾನ್ಯ ಭಾಗವಾಗಿದೆ. ಅನೇಕ ಜನರು ತಿಂಡಿಯ ಬದಲಿಗೆ ಬ್ರೆಡ್ ಅನ್ನೇ ಸೇವಿಸುತ್ತಿದ್ದಾರೆ. ಅನೇಕ ಜನರು ಹೇಳುತ್ತಾರೆ, ನಾನು ಟೀ ಬ್ರೆಡ್ ತಿಂದೆ, ಆಮ್ಲೆಟ್ ಬ್ರೆಡ್ ತಿಂದೆ, ಜಾಮ್ ಬ್ರೆಡ್ ತಿಂದೆ, ನಾನು ಪೋಹಾ ಬ್ರೆಡ್ ತಿಂದೆ ಅಂತ. ಆದರೆ, ಬಿಳಿ ಬ್ರೆಡ್ ನಿಮ್ಮ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಇದರಿಂದ ನಿಮಗೆ ಆಟೋ ಬ್ರೂವರಿ ಸಿಂಡ್ರೋಮ್ ಎದುರಾಗಬಹುದು. ಇದು ಇತ್ತೀಚೆಗೆ ನನ್ನ ಮಗಳಿಗೂ ಕಾಡಿದ ಒಂದು ಸಮಸ್ಯೆ. ಅವಳು ಇದ್ದಕ್ಕಿದ್ದಂತೆ ತಲೆತಿರುಗುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಳು’ ಎಂದು ಭಯಾನಕ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

‘ಮದ್ಯಪಾನ ಸೇವಿಸಿದರೆ ಹೇಗೆ ತಲೆತಿರುಗುವಿಕೆ ಆಗುತ್ತದೆಯೋ ಅಂತೆಯೇ ಅವಳಲ್ಲೂ ಬಳಲಿಕೆ ಮತ್ತು ತಲೆ ಸುತ್ತು ಕಾಡಲಾರಂಭಿಸಿತು. ಆರಂಭದಲ್ಲಿ, ನಾನು ಇದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಆದರೆ ದಿನ ಕಳೆದಂತೆ ವಿಷಯಗಳು ಗಂಭೀರ ತಿರುವು ಪಡೆದುಕೊಂಡಿತು. ನನ್ನ ಮಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಬೇಕಾಯಿತು. ಅದೃಷ್ಟವಶಾತ್, ಎಲ್ಲವೂ ನಾರ್ಮಲ್ ಸ್ಥಿತಿಗೆ ಮರಳಿತು. ಆಕೆಗೆ ಹೀಗಾಗಲು ಕಾರಣವೇನು ಎಂಬುದನ್ನು ತಿಳಿದಾಗ, ಹೆಚ್ಚಿನ ಪ್ರಮಾಣದ ಮಲ್ಟಿಗ್ರೇನ್ ಬ್ರೆಡ್ ಸೇವನೆ ಎಂಬುದು ನಮ್ಮ ಅರಿವಿಗೆ ಬಂದಿತು. ಇದರ ಪರಿಣಾಮವಾಗಿಯೇ ‘ಆಟೋ ಬ್ರೂವರಿ ಸಿಂಡ್ರೋಮ್’ ಎಂಬ ಕಾಯಿಲೆ ಬಂದಿದೆ’ ಎಂದು ಮೆಹ್ತಾ ವಿವರಿಸಿದರು.

ಏನಿದು ಆಟೋ ಬ್ರೂವರಿ ಸಿಂಡ್ರೋಮ್?

‘ಜೀರ್ಣವಾಗದ ಬ್ರೆಡ್ ಎಥೆನಾಲ್ ಅಥವಾ ಆಲ್ಕೋಹಾಲ್ ಆಗಿ ಬದಲಾಗುತ್ತದೆ. ನೀವು ಹೆಚ್ಚು ಪ್ರಮಾಣದಲ್ಲಿ ಮದ್ಯ ಸೇವಿಸಿದಾಗ ಆಗುವ ತಲೆತಿರುಗುವಿಕೆ ಅನುಭವ ಇಲ್ಲಿಯೂ ಉಂಟಾಗುತ್ತದೆ. ನಾನು ನಿಮ್ಮಲ್ಲಿ ಕೇಳಿಕೊಳ್ಳುವುದು ಒಂದೇ, ಬ್ರೆಡ್ ತಿನ್ನುವ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ. ಇದರ ಸೇವನೆ ಆಟೋ ಬ್ರೂವರಿ ಸಿಂಡ್ರೋಮ್ಗೆ ದಾರಿ ಮಾಡಿಕೊಡುತ್ತದೆ. ಸ್ವಲ್ಪ ಅಲ್ಲ ಸಂಪೂರ್ಣವಾಗಿ ನಿಮ್ಮ ಆಹಾರ ಪದ್ಧತಿಯಿಂದ ಬ್ರೆಡ್ ತ್ಯಜಿಸಿ. ನೀವಿದನ್ನು ರೋಸ್ಟ್ ಮಾಡಿ ತಿಂದರೂ ಅಥವಾ ಹಾಗೆಯೇ ತಿಂದರೂ, ಅದು ನಿಮ್ಮ ಕರುಳಿಗೆ ಕಂಟಕವೇ’ ಎಂದು ಎಚ್ಚರಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *