Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಮೋದಿಗೆ ಹೇಳು” ಎಂದ ಉಗ್ರರಿಗೆ ಸೇನೆಯ ಪಾಠ

Spread the love

ನವದೆಹಲಿ :ಕಾಶ್ಮೀರದ ಪಹಲ್ಲಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಭಾರತೀಯರು ಉಗ್ರರ ನರಮೇಧಕ್ಕೆ ಬಲಿಯಾಗಿದ್ದರು. ಕುಟುಂಬಸ್ಥರು, ಸ್ನೇಹಿತರು, ಮಕ್ಕಳ ಎದುರಲ್ಲಿಯೇ ಅಮಾಯಕ ಪ್ರವಾಸಿಗರನ್ನು ದುಷ್ಟ ಉಗ್ರರ ಹತ್ಯೆ ಮಾಡಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ಭಾರತೀಯ ಸೇನೆಯೂ ಆಪರೇಷನ್‌ ಸಿಂಧೂರ ನಡೆಸಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ಮಾಡಿದೆ.

ಭಾರತೀಯ ಸೇನೆ ನಡೆಸಿದ ಈ ಆಪರೇಷನ್ ಸಿಂಧೂರ್ದಲ್ಲಿ ಪಾಕಿಸ್ತಾನದ 80ಕ್ಕೂ ಹೆಚ್ಚು ಉಗ್ರರು ಮೃತರಾಗಿದ್ದು, ಕೆಲವರು ಗಾಯಗೊಂಡಿದ್ದಾರೆ.

ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಪಹಲ್ಗಾಮ್‌ನಲ್ಲಿ ಮಡಿದವರಿಗೆ ನ್ಯಾಯ ಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿ ಉಳಿದ ಅವರ ಕುಟುಂಬಕ್ಕೆ ಭಯೋತ್ಪಾದಕರು ‘ನಿನ್ನನ್ನು ಕೊಲ್ಲುವುದಿಲ್ಲ. ಹೋಗಿ ಮೋದಿಗೆ ಹೇಳು’ ಎಂದು ಪಹಲ್ಗಾಮ್ ದಾಳಿಯ ಸಮಯದಲ್ಲಿ ಹೇಳಿದ ಮಾತಿಗೆ ಇಂದು ತಕ್ಕ ಉತ್ತರ ಸಿಕ್ಕಿದೆ.

ಆಪರೇಷನ್ ಸಿಂಧೂರದ ಬಳಿಕ #justiceserved #Itoldmodi ಪೋಸ್ಟ್ ಹಾಗೂ ಟ್ಯಾಗ್‌ಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಭಾರತೀಯ ನಾಗರಿಕರ ವಾಟ್ಸ್ಆಯಾಪ್, ಇನ್ಸ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದ್ದು, ಭಾರತ ಪಾಕಿಸ್ಥಾನದ ಸೊಕ್ಕು ಮುರಿದಿದೆ ಎಂದು ಆಪರೇಷನ್‌ ಸಿಂಧೂರ್‌ಗೆ ಜನರಿಂದ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ.

ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಂದು ಪತ್ನಿಯ ಎದುರೇ ಗಂಡನನ್ನು ಕೊಂದು ಮೋದಿಗೆ ಹೇಳು ಎಂದ ಉಗ್ರರಿಗೆ ಇಂದು ಭಾರತೀಯ ಸೇನೆ ಸರಿಯಾಗಿ ಪಾಠ ಕಲಿಸಿದೆ.


Spread the love
Share:

administrator

Leave a Reply

Your email address will not be published. Required fields are marked *