Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ರಸಿದ್ಧ ಕ್ರಿಕೇಟಿಗ ವಿರುದ್ಧ ರೇಪ್ ಕೇಸ್ ದಾಖಲು

Spread the love

ಜೈಪುರ:ಕಳೆದ ವರ್ಷದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ಲೇಯರ್ ಆಗಿದ್ದ ಕ್ರಿಕೆಟಿಗ ಶಿವಾಲಿಕ್ ಶರ್ಮ ವಿರುದ್ಧ ರೇಪ್ ಕೇಸ್ ದಾಖಲಾಗಿದೆ.

ಹೌದು, ರಾಜಸ್ಥಾನದ ಜೋಧ್ಪುರದ ಕುಡಿ ಭಗತ್ಸುನಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಇದೀಗ ಈತನ ಬಂಧನವಾಗಿದೆ.

ಶರ್ಮಾ ದೇಶೀಯ ಕ್ರಿಕೆಟ್ನಲ್ಲಿ ಬರೋಡಾವನ್ನು ಪ್ರತಿನಿಧಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸಹಾಯಕ ಪೊಲೀಸ್ ಆಯುಕ್ತ ಆನಂದ್ ಸಿಂಗ್, ದೂರುದಾರೆಯಾಗಿರುವ ಯುವತಿ ಕುಡಿ ಭಗತ್ಸುನಿಯ ಸೆಕ್ಟರ್ 2 ರ ನಿವಾಸಿಯಾಗಿದ್ದು, ಅವರು ಶಿವಾಲಿಕ್ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ತೆಯ ವೈದ್ಯಕೀಯ ವರದಿಗಳನ್ನು ದಾಖಲಿಸಿದ ನಂತರ ಮತ್ತು BNNS ಸೆಕ್ಷನ್ 180 ರ ಅಡಿಯಲ್ಲಿ ನ್ಯಾಯಾಲಯದ ಮುಂದೆ ದೂರುದಾರರ ನ್ಯಾಯಾಂಗ ಹೇಳಿಕೆಯನ್ನು ಪಡೆದುಕೊಂಡ ನಂತರ ಪೊಲೀಸರು ಆರೋಪಿಯ ಹೆಸರನ್ನು ಬಹಿರಂಗಪಡಿಸಿದರು.

ಪೊಲೀಸ್ ಎಫ್‌ಐಆರ್ ಪ್ರಕಾರ, ಕ್ರಿಕೆಟಿಗ ವಿವಾಹದ ಭರವಸೆ ನೀಡುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡು ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.

ಯುವತಿಯ ಪ್ರಕಾರ, ನಿಶ್ಚಿತಾರ್ಥದ ನಂತರ, ಶಿವಾಲಿಕ್ ಜೋಧ್ಪುರಕ್ಕೆ ಹಿಂತಿರುಗಿದಾಗ, ಅವರು ದೈಹಿಕ ಸಂಬಂಧ ಹೊಂದಿದ್ದರು. ಇಬ್ಬರೂ ಜೈಪುರ ಸೇರಿದಂತೆ ರಾಜಸ್ಥಾನದ ಹಲವು ಸ್ಥಳಗಳಿಗೆ ಹೋಗಿದ್ದರು. ಆದರೆ, ಆಗಸ್ಟ್ 2024 ರಲ್ಲಿ ಯುವತಿಯನ್ನು ವಡೋದರಾಕ್ಕೆ ಕರೆಸಿದಾಗ ವಿಷಯಗಳು ಬೇರೆಯದೇ ತಿರುವು ಪಡೆದುಕೊಂಡವು ಮತ್ತು ಶಿವಾಲಿಕ್ ಅವರ ಪೋಷಕರು “ಅವರು ಕ್ರಿಕೆಟಿಗ, ಅವರಿಗೆ ಬೇರೆ ಸ್ಥಳಗಳಿಂದ ಪ್ರಸ್ತಾಪಗಳು ಬರುತ್ತಿದ್ದು ನಿಶ್ಚಿತಾರ್ಥ ಮುಂದುವರಿಯಲು ಸಾಧ್ಯವಿಲ್ಲ” ಎಂದಿದ್ದರಂತೆ.

ಆ ನಂತರ ಯುವತಿ ಪೊಲೀಸರ ಬಳಿ ಹೋಗಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣವನ್ನು ಕುಡಿ ಭಗತ್ಸುನಿ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *