ಭಾರತದ ರಕ್ಷಣಾ ವ್ಯವಸ್ಥೆಗೆ ಪಾಕ್ ಮೂಲದ ಸೈಬರ್ ದಾಳಿ: ಸೂಕ್ಷ್ಮ ಮಾಹಿತಿ ಸೋರಿಕೆಯ ಆತಂಕ

ಕಾಶ್ಮೀರ :ಭಾರತ ಹಾಗೂ ಪಾಕಿಸ್ತಾನದ ನಡುವೆ ಯಾವುದೇ ಕ್ಷಣದಲ್ಲಾದರೂ ಯುದ್ಧ ಭೀತಿ ಇದೆ ಎಂದು ಹೇಳಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ಉಗ್ರರ ದಾಳಿಯಲ್ಲಿ 26 ಜನ ಮೃತಪಟ್ಟಿದ್ದಾರೆ. ಇದೀಗ ಪಾಕಿಸ್ತಾನದಿಂದ ಭಾರತಕ್ಕೆ ದೊಡ್ಡ ಸಂಕಷ್ಟವೊಂದು ಎದುರಾಗಿದೆ.
ಭಾರತ Vs ಪಾಕಿಸ್ತಾನದ ನಡುವೆ ದಿನದಿಂದ ದಿನಕ್ಕೆ ಸಂಕಷ್ಟ ಎದುರಾಗಿರುವಾಗಲೇ ಪಾಕ್‌ನಿಂದ ಭಾರತಕ್ಕೆ ಭಾರೀ ದೊಡ್ಡ ಸಂಕಷ್ಟ ಎದುರಾಗಿದೆ. ಭಾರತದ ರಕ್ಷಣಾ ಇಲಾಖೆ ಹಾಗೂ ರಕ್ಷಣಾ ಕ್ಷೇತ್ರದ ಮೇಲೆ ಸೈಬರ್ ದಾಳಿ ನಡೆದಿದೆ. ಇದರಲ್ಲಿ ಭಾರತದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿರುವ ಆತಂಕ ಎದುರಾಗಿದೆ.

ಭಾರತ – ಪಾಕ್‌ನ ನಡುವೆ ಯುದ್ಧ ಸನ್ನದ್ಧ ಪರಿಸ್ಥಿತಿ ಇದೆ. ಕಳೆದ 12 ದಿನಗಳಿಂದ ಪಾಕ್ ಹಾಗೂ ಭಾರತದ ಗಡಿಭಾಗದಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ. ಭಾರತ ಮತ್ತು ಪಾಕ್ ದೇಶಗಳು ತಮ್ಮ ಸೇನೆಯನ್ನು ಭದ್ರಪಡಿಸುತ್ತಿವೆ. ಅಲ್ಲದೇ ಭಾರತೀಯ ಸೇನೆಯು ಯುದ್ಧ ಶಸ್ತ್ರಾಸ್ತ್ರಗಳ ಪರಿಶೀಲನೆ ಹಾಗೂ ಎಚ್ಚರಿಕೆಯನ್ನು ಪರೋಕ್ಷವಾಗಿ ನೀಡುತ್ತಿದೆ. ಇಂತಹ ಸಂದಿಗ್ಧ ಹಾಗೂ ಸೂಕ್ಷ್ಮ ಸಂದರ್ಭದಲ್ಲಿ ಪಾಕ್‌ನಿಂದ ಅತ್ಯಂತ ದೊಡ್ಡ ಸವಾಲು ಸೃಷ್ಟಿಯಾಗಿದೆ. ಯುದ್ಧ ಭೀತಿಯ ಸಮಯದಲ್ಲೇ ಪಾಕ್ ಮೂಲದ ಹ್ಯಾಕರ್‌ಗಳಿಂದ ಭಾರತದ ಸೂಕ್ಷ್ಮ ವಿಷಯಗಳಿಗೆ ಹಾನಿಯಾಗಿವೆ ಎಂದು ಹೇಳಲಾಗುತ್ತಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಪಾಕಿಸ್ತಾನದ ಹ್ಯಾಕರ್‌ಗಳಿಂದಾಗಿ ಭಾರತೀಯ ರಕ್ಷಣಾ ವೆಬ್‌ಸೈಟ್‌ಗಳ ಮೇಲೆ ದಾಳಿ ಮಾಡುವ ಪ್ರಯತ್ನ ನಡೆದಿದೆ ಹಾಗೂ ನಿರಂತರ ಸೈಬರ್ ದಾಳಿ ಆತಂಕ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಈ ಸೈಬರ್ ದಾಳಿಯ ಮೂಲಕ ಕೆಲವು ಮಾಹಿತಿಗಳನ್ನು ಸೋರಿಕೆ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲ P@kistanCyberForce ಎನ್ನುವ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು ಈ ವಿಚಾರವು ಭಾರೀ ಚರ್ಚೆ ಹಾಗೂ ಆತಂಕಕ್ಕೂ ಕಾರಣವಾಗಿದೆ.
ಈ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು. ಮನೋಹರ್ ಪರಿಕ್ಕರ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಸೇರಿದಂತೆ ವಿವಿಧ ಸಂಸ್ಥೆಗಳ ಮೇಲೆ ಸೈಬರ್ ಹಟ್ಯಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಸಂಸ್ಥೆ ಸೇರಿದಂತೆ ಕೆಲವು ಪ್ರಮುಖ ಮಾಹಿತಿಗಳನ್ನು ಸೋರಿಕೆ ಮಾಡಲಾಗಿದೆ ಎಂದೂ ಹೇಳಲಾಗಿದೆ.
ಭಾರತದಲ್ಲಿ ಪಹಲ್ಗಾಮ್ ದಾಳಿಯ ನಂತರ ಭಾರತದ ಮೇಲೆ ನಿರಂತರವಾಗಿ ಪಾಕ್ ಮೂಲದ ಸೈಬರ್ ಹ್ಯಾಕರ್‌ಗಳಿಂದ ಸೈಬರ್ ದಾಳಿ ಮಾಡಲಾಗುತ್ತಿದೆ. ಸೈಬರ್ ದಾಳಿ ನಿರಂತರವಾಗಿ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ. ಭಾರತ ಸರ್ಕಾರ ಹಾಗೂ ರಕ್ಷಣಾ ಇಲಾಖೆಯು ಈ ಸೈಬರ್ ಹಟ್ಯಾಕ್‌ಗೆ ಸಂಬಂಧಿಸಿದಂತೆ ಇಲ್ಲಿಯ ವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.