ಶ್ರೀಮಂತನಾಗಿದ್ದರೂ ಭಿಕ್ಷೆ ಬೇಡುದನ್ನು ಬಿಡಲಾರೆ ಎಂದು ಹಠದಲ್ಲಿರುವ ಭರತ್

ಮುಂಬೈ:ಜನ ಭಿಕ್ಷುಕರನ್ನ ನೋಡುತ್ತೇವೆ. ರಸ್ತೆ ಬದಿಯಲ್ಲಿ ಕುಳಿತಿರುತ್ತಾರೆ..ದೇವಸ್ಥಾನಗಳ ಬಾಗಿಲಲ್ಲಿ ಇರ್ತಾರೆ..ನಾವು ಟ್ರಾಫಿಕ್ನಲ್ಲಿ ನಿಂತಿದ್ದಾಗ ಭಿಕ್ಷೆ ಎತ್ತಲು ಬರುತ್ತಾರೆ..ಇನ್ನೂ ಕೆಲವು ಕಡೆಗಳಲ್ಲಿ ಮನೆಮನೆಗೆ ಭಿಕ್ಷೆ ಬೇಡೋಕೆ ಬರ್ತಾರೆ. ಬಸ್ಸ್ಟ್ಯಾಂಡ್, ರೈಲ್ವೆ ಸ್ಟೇಶನ್ಗಳ ಸಮೀಪ ಕಾಣಸಿಗುತ್ತಾರೆ.
ಸಾಮಾನ್ಯವಾಗಿ ಭಿಕ್ಷುಕರೆಂದರೆ ನಿರ್ಗತಿಕರು..ಅವರ ಬಳಿ ಹಣ, ಮನೆ ಏನೂ ಇರೋದಿಲ್ಲ. ಹೊಟ್ಟೆಗೆ ಸರಿಯಾಗಿ ಆಹಾರ ಸಿಗೋದಿಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ನಿಮಗೆ ಗೊತ್ತಿರಲಿ, ಎಲ್ಲರೂ ಹಾಗೇ ಇರೋದಿಲ್ಲ. ಕೆಲವರು ಶ್ರೀಮಂತ ಭಿಕ್ಷುಕರು ಇರ್ತಾರೆ. ಅವರ ಆಸ್ತಿ, ಹಣ ಕೇಳಿದ್ರೆ ನಮ್ಮ ತಲೆ ಗಿರ್ರ್ ಎನ್ನುತ್ತದೆ..

ಈತ ಶ್ರೀಮಂತ ಭಿಕ್ಷುಕ..!
ಜಗತ್ತಿನ ಅತ್ಯಂತ ಶ್ರೀಮಂತ ಭಿಕ್ಷುಕ ಯಾರು ಗೊತ್ತಾ? ಆತ ಭಾರತೀಯ ಮೂಲದವ. ಈ ಭಿಕ್ಷುಕನ ಹೆಸರು ಭರತ್ ಜೈನ್. ಈ ಭಾರತೀಯ ವ್ಯಕ್ತಿಯ ಅಚ್ಚರಿಯ ನಿವ್ವಳ ಮೌಲ್ಯವು ಭಿಕ್ಷಾಟನಾ ಉದ್ಯಮದ ಅಗಾಧತೆ ಮತ್ತು ಈ ಜಾಲದ ವಾಸ್ತವಗಳನ್ನು ಬೆಳಕಿಗೆ ತರುತ್ತದೆ. ಶ್ರೀಮಂತ ಭಿಕ್ಷುಕ ಎಂದು ಕರೆಯಲ್ಪಡುವ ವ್ಯಕ್ತಿ ಕೆಲಸ ಹುಡುಕುವುದಕ್ಕಿಂತ ಹೆಚ್ಚಾಗಿ ಭಿಕ್ಷೆ ಬೇಡುವುದರಲ್ಲಿಯೇ ಆರಾಮವಾಗಿದ್ದಾನೆ. ಅವನ ಹೆಸರು ಭರತ್ ಜೈನ್. ಈತ ಭಿಕ್ಷೆ ಬೇಡೋದನ್ನೇ ಕಾಯಕ ಮಾಡಿಕೊಂಡಿದ್ದಾನೆ ಹೊರತು, ಇನ್ಯಾವುದೇ ಕೆಲಸವನ್ನೂ ಮಾಡ್ತಿಲ್ಲ.
ಭರತ್ ಜೈನ್ ಬಾಲ್ಯದಿಂದಲೂ ಹಣಕಾಸಿನ ತೊಂದರೆ ಇತ್ತು. ಹೀಗಾಗಿ ಶಿಕ್ಷಣ ಕಲಿತಿಲ್ಲ. ಭಿಕ್ಷೆ ಬೇಡಲು ಪ್ರಾರಂಭಿಸಿದರು. ಅವರು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ಮತ್ತು ಆಜಾದ್ ಮೈದಾನದಲ್ಲಿ ಭಿಕ್ಷೆ ಬೇಡುತ್ತಾರೆ. ಹಲವು ವರ್ಷಗಳ ಕಾಲ ಭಿಕ್ಷೆ ಬೇಡಿ, ಆಸ್ತಿಯನ್ನ ಸಂಪಾದನೆ ಮಾಡಿದರು.
ಜೈನ್ ಅವರು 40 ವರ್ಷಗಳಿಂದಲೂ ಭಿಕ್ಷೆ ಬೇಡುತ್ತಿದ್ದಾರೆ. ಮೊದಮೊದಲು ದಿನಕ್ಕೆ 2000-2500 ರೂಪಾಯವರೆಗೆ ಅವರು ಗಳಿಸುತಿದ್ದರು. ದಿನಕ್ಕೆ 10-12 ತಾಸು ಭಿಕ್ಷೆಯನ್ನೇ ಬೇಡುತ್ತಿದ್ದರು. ಬರುಬರುತ್ತ ತಿಂಗಳಿಗೆ 75 ಸಾವಿರಗಳಷ್ಟು ದುಡಿಮೆ ಭಿಕ್ಷಾಟನೆಯಿಂದಲೇ ಆಗಲು ಶುರುವಾಯಿತು.
ಭರತ್ ಜೈನ್ ಅವರು 1.4 ಕೋಟಿ ರೂಪಾಯಿ ಮೌಲ್ಯದ ಎರಡು ಫ್ಲಾಟ್ಗಳನ್ನು ಹೊಂದಿದ್ದಾರೆ ಮತ್ತು ಅವರ ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಅವರ ಸಹೋದರನೊಂದಿಗೆ ವಾಸಿಸುತ್ತಿದ್ದಾರೆ. ಭರತ್ ಥಾಣೆಯಲ್ಲಿ ಎರಡು ಅಂಗಡಿಗಳನ್ನ ಕೂಡ ಹೊಂದಿದ್ದಾರೆ. ಆದರೆ ಭಿಕ್ಷೆ ಬೇಡೋದನ್ನ ಮಾತ್ರ ನಿಲ್ಲಿಸುತ್ತಿಲ್ಲ. ಅವರ ಮಕ್ಕಳು ಕಾನ್ವೆಂಟ್ನಲ್ಲಿಯೇ ಓದುತ್ತಿದ್ದಾರೆ. ವರದಿಯ ಪ್ರಕಾರ ಭರತ್ ಜೈನ್ ಅವರ ನಿವ್ವಳ ಆಸ್ತಿ ಮೌಲ್ಯ 7.5 ಕೋಟಿ ರೂಪಾಯಿ.
