Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಕಲಿ ವೈದ್ಯನ ಇಂಜೆಕ್ಷನ್‌ಗೆ 9ನೇ ತರಗತಿ ಬಾಲಕಿ ಬಲಿ: ರಾಯಚೂರಿನಲ್ಲಿ ದಾರುಣ ಘಟನೆ!

Spread the love

ರಾಯಚೂರು ಜಿಲ್ಲೆಯಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆದ 13 ವರ್ಷದ ಬಾಲಕಿ ಸಿಂಧೂ ಇಂಜೆಕ್ಷನ್ ಪಡೆದ ನಂತರ ಮೃತಪಟ್ಟಿದ್ದಾಳೆ. ನಕಲಿ ವೈದ್ಯ ಉತ್ತಮ ಕುಮಾರ್ ಸರ್ಕಾರ್ ನೀಡಿದ ಚಿಕಿತ್ಸೆಯೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.13 ವರ್ಷದ ಬಾಲಕಿ ಸಾವು
13 ವರ್ಷದ ಬಾಲಕಿಗೆ ವೈದ್ಯ ನೀಡಿದ ಇಂಜೆಕ್ಷನ್ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಾಲಕಿಯ ಪೋಷಕರು ಉತ್ತಮ ಕುಮಾರ್ ಸರ್ಕಾರ್ ಎಂಬಾತ ನಕಲಿ ವೈದ್ಯ ಎಂದು ಆರೋಪ ಮಾಡಿದ್ದಾರೆ. ಮೃತ ಬಾಲಕಿ 9ನೇ ತರಗತಿ ಓದುತ್ತಿದ್ದಳು.13 ವರ್ಷದ ಸಿಂಧೂ ಮೃತ ಬಾಲಕಿ
ರಾಯಚೂರು ಜಿಲ್ಲೆಯ ‌ಮಸ್ಕಿ ತಾಲೂಕಿನ ಅಮಿನಗಢ ಗ್ರಾಮದ ಸಿಂಧೂ (13) ಬಾಲಕಿ. ಮಾರ್ಚ್ 26ರಂದು ಸಿಂಧೂ ಜ್ವರದಿಂದ ಬಳಲುತ್ತಿದ್ದಳು. ಉತ್ತಮ ಕುಮಾರ್ ಸರ್ಕಾರ್ ತೆರಳಿದ್ದ ಸಿಂಧೂ, ಚಿಕಿತ್ಸೆ ಪಡೆದುಕೊಂಡಿದ್ದಳು. ಚಿಕಿತ್ಸೆ ಬಳಿಕ ಸಿಂಧೂ ಪರೀಕ್ಷೆಗೆ ಹಾಜರಾಗಿದ್ದಳು.ದೇಹದ ಮೇಲೆ ಕಾಣಿಸಿಕೊಂಡ ಗುಳ್ಳೆಗಳು
ಇಂಜೆಕ್ಷನ್ ಪಡೆದ ರಾತ್ರಿ ಸಿಂಧೂ ದೇಹದ ಮೇಲೆ ಗುಳ್ಳೆಗಳು ಕಾಣಿಸಿಕೊಂಡಿದ್ದು, ನೋವಿನಿಂದ ನರಳಾಡಿದ್ದಾಳೆ. ಪೋಷಕರು ಕೂಡಲೇ ಮಗಳನ್ನು ಮಾನ್ವಿ ಆಸ್ಪತ್ರೆಗೆ ದಾಖಲಿಸಿದ್ದು, ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಿಂಧೂ ಸಾವನ್ನಪ್ಪಿದ್ದಾಳೆ.ವೈದ್ಯನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು
ನಂತರ ಸಿಂಧೂ ಮೃತದೇಹವನ್ನು ಕವಿತಾಳ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಸಿಂಧೂ ಮೃತದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ. ಸದ್ಯ ಪೊಲೀಸರು ಉತ್ತಮ ಕುಮಾರ್ ಸರ್ಕಾರ್‌ನನ್ನು ವಶಕ್ಕೆ ಪಡೆದುಕೊಂಡಿದೆ. ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love
Share:

administrator

Leave a Reply

Your email address will not be published. Required fields are marked *